ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋನೇಷ್ಯಾದ ಶಟ್ಲರ್ ಪುತ್ರಿ ಕುಸುಮಾ ವರ್ದಾನಿ ವಿರುದ್ಧ ಸೋತಿರುವ ಭಾರತದ ಶಟ್ಲರ್ ಪಿವಿ ಸಿಂಧು BWF ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದ್ದಾರೆ. ಕಠಿಣ ಹೋರಾಟದಲ್ಲಿ ವಿಶ್ವದ ಒಂಬತ್ತನೇ ಶ್ರೇಯಾಂಕದ ವರ್ದಾನಿ ಅಂತಿಮವಾಗಿ ಸಿಂಧು ಅವರನ್ನು ಸೋಲಿಸಿದರು. ಸಿಂಧು ವರ್ದಾನಿ ವಿರುದ್ಧ ಮೊದಲ ಸೆಟ್ ಅನ್ನು 21-14 ರಿಂದ ಸೋತರು. ಎರಡನೇ ಸೆಟ್ ನಲ್ಲಿ ಸಿಂಧು ಉತ್ತಮ ಪ್ರದರ್ಶನ ನೀಡಿ 21-13 ರಿಂದ ಪಂದ್ಯ ಗೆದ್ದರು. ಆದರೆ ನಿರ್ಣಾಯಕ ಸೆಟ್ ನಲ್ಲಿ ಸಿಂಧು 16-21ರಿಂದ ಸೋಲು ಕಂಡರು.
ಇದಕ್ಕೂ ಮೊದಲು, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಪಿವಿ ಸಿಂಧು ಗುರುವಾರ ಇಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ್ತಿ ಚೀನಾದ ವಾಂಗ್ ಝಿ ಯಿ ಅವರನ್ನು 21-19, 21-15 ರಿಂದ ಸೋಲಿಸುವ ಮೂಲಕ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. 2019ರಲ್ಲಿ ಬಾಸೆಲ್‌ನಲ್ಲಿ ವಿಶ್ವ ಪ್ರಶಸ್ತಿಯನ್ನು ಗೆದ್ದ 15 ನೇ ಶ್ರೇಯಾಂಕದ ಸಿಂಧು, ಪ್ರಿ-ಕ್ವಾರ್ಟರ್ ಫೈನಲ್ ಗೆಲುವು ಸಾಧಿಸಲು 48 ನಿಮಿಷಗಳನ್ನು ತೆಗೆದುಕೊಂಡರು.