ಸುನಿಲ್ ಚೆಟ್ರಿ, ಲಿಯೊನೆಲ್ ಮೆಸ್ಸಿ, ಸಚಿನ್ ತೆಂಡೂಲ್ಕರ್ 
ಕ್ರೀಡೆ

GOATS meet: ಒಂದೇ ವೇದಿಕೆಯಲ್ಲಿ ಮೆಸ್ಸಿ, ಸಚಿನ್, ಚೆಟ್ರಿ; ಮತ್ತೊಂದು ಚಾರಿತ್ರಿಕ ಘಟನೆಗೆ ಸಾಕ್ಷಿಯಾದ ವಾಂಖೆಡೆ ಕ್ರೀಡಾಂಗಣ! Video

ಮೆಸ್ಸಿಯೊಂದಿಗೆ ವೇದಿಕೆ ಹಂಚಿಕೊಂಡ ಸಚಿನ್ ತೆಂಡೂಲ್ಕರ್, ಲಿಯೊನೆಲ್ ಮೆಸ್ಸಿ ಅವರನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ಅವರ ಬದ್ಧತೆ, ಶ್ರದ್ಧೆ, ನಿರಂತರ ಪ್ರಯತ್ನಗಳು ಅನುಕರಣೀಯ ಎಂದಿದ್ದಾರೆ.

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಮತ್ತೊಂದು ಚಾರಿತ್ರಿಕ ಘಟನೆಗೆ ಸಾಕ್ಷಿಯಾಯಿತು. ವಿಶ್ವ ಪುಟ್ ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೊಲ್ಕರ್ ಹಾಗೂ ಭಾರತದ ಫುಟ್ ಬಾಲ್ ದಂತಕಥೆ ಸುನಿಲ್ ಚೆಟ್ರಿ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಬ್ಬವನ್ನುಂಟು ಮಾಡಿದರು.

ಕ್ರೀಡಾಂಗಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮೆಸ್ಸಿ, ಮೆಸ್ಸಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಸಂಜೆ ಮೆಸ್ಸಿ ಅವರ ಸಹ ಆಟಗಾರರಾದ ಲೂಯಿಸ್ ಸೂರೇಝ್ ಮತ್ತು ರಾಡ್ರಿಗೂ ಡಿ ಪಾಲ್ ಹಾಗೂ ಸಚಿನ್ ಬಂದ ಸೇರುತ್ತಿದ್ದಂತೆಯೇ, ಸಚಿನ್.. ಸಚಿನ್... ಘೋಷಣೆ ಮುಗಿಲು ಮುಟ್ಟಿತು.

'ಗೋಟ್ ಇಂಡಿಯಾ ಟೂರ್-2025' ಕಾರ್ಯಕ್ರಮ ಇಂತಹದ್ದೊಂದು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಮೆಸ್ಸಿಯೊಂದಿಗೆ ವೇದಿಕೆ ಹಂಚಿಕೊಂಡ ಸಚಿನ್ ತೆಂಡೊಲ್ಕರ್, ಲಿಯೊನೆಲ್ ಮೆಸ್ಸಿ ಅವರನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ಅವರ ಬದ್ಧತೆ, ಶ್ರದ್ಧೆ, ನಿರಂತರ ಪ್ರಯತ್ನಗಳು ಅನುಕರಣೀಯ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಸಚಿನ್ ತೆಂಡೊಲ್ಕರ್ ಅವರು ತಮ್ಮ ಜೆರ್ಸಿಯನ್ನು ಅರ್ಜೇಂಟಿನಾದ ಲಿಯೋನಲ್ ಮೆಸ್ಸಿ ಅವರಿಗೆ ಉಡುಗೂರೆಯಾಗಿ ನೀಡಿದ್ದಾರೆ. ಬಳಿಕ ಮೆಸ್ಸಿ ಅವರು ಸುನಿಲ್ ಚೆಟ್ರಿ ಅವರೊಂದಿಗೆ ಬಹಳ ಸಮಯದವರೆಗೂ ಮಾತುಕತೆ ನಡೆಸಿದ್ದಾರೆ. ತಮ್ಮ ಪೋಷಾಕನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಐಐಎಫ್ ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್, ಬಾಲಿವುಡ್ ಸ್ಟಾರ್ ಗಳಾದ ಅಜಯ್ ದೇವಗನ್, ಟೈಗರ್ ಶ್ರಾಫ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!