ಚಾಂಪಿಯನ್ ಶಿಪ್ ಉಂಗುರ 
ಕ್ರೀಡೆ

FIFA World Cup final 2026: ಈ ಬಾರಿಯ ವಿಜೇತರಿಗೆ ಸಿಗಲಿದೆ ಅಮೆರಿಕ ರೀತಿಯ ಚಾಂಪಿಯನ್ ಶಿಪ್ ಉಂಗುರ!

ಅಮೆರಿಕದ ಪ್ರಮುಖ ಕ್ರೀಡಾ ಲೀಗ್ ಗಳಲ್ಲಿ ಗೆಲುವು ಸಾಧಿಸಿದ ತಂಡದ ಆಟಗಾರರು ಹಾಗೂ ತರಬೇತುದಾರರಿಗೆ ಚಾಂಪಿಯನ್ ಶಿಪ್ ಉಂಗುರಗಳನ್ನು ನೀಡಲಾಗುತ್ತದೆ.

ನ್ಯೂಜೆರ್ಸಿ: ಇದೇ ಭಾನುವಾರ ನಡೆಯಲಿರುವ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫೈನಲ್ ಟೂರ್ನಿಯಲ್ಲಿ ಗೆದ್ದ ತಂಡದ ಆಟಗಾರರಿಗೆ ಇದೇ ಮೊದಲ ಬಾರಿಗೆ 'ಚಾಂಪಿಯನ್ ಶಿಪ್' ಉಂಗುರದ ಬಹುಮಾನ ಸಿಗಲಿದೆ ಎಂದು ಫಿಫಾ ಹೇಳಿದೆ.

ನ್ಯೂಜೆರ್ಸಿ ಮೆಟ್ ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಲಿದ್ದು, ಅವರೇ ವಿಜೇತ ತಂಡದ ಆಟಗಾರರಿಗೆ ಚಾಂಪಿಯನ್ ಶಿಪ್ ಉಂಗುರ ನೀಡುವ ಸಾಧ್ಯತೆಯಿದೆ.

ಅಮೆರಿಕದ ಪ್ರಮುಖ ಕ್ರೀಡಾ ಲೀಗ್ ಗಳಲ್ಲಿ ಗೆಲುವು ಸಾಧಿಸಿದ ತಂಡದ ಆಟಗಾರರು ಹಾಗೂ ತರಬೇತುದಾರರಿಗೆ ಚಾಂಪಿಯನ್ ಶಿಪ್ ಉಂಗುರಗಳನ್ನು ನೀಡಲಾಗುತ್ತದೆ.

ಇದೀಗ ಇದೇ ಮೊದಲ ಬಾರಿಗೆ ಫುಟ್ ಬಾಲ್ ವಿಶ್ವಕಪ್ ನಲ್ಲೂ ಈ ಉಂಗುರಗಳನ್ನು ನೀಡಲಾಗುತ್ತಿದೆ. ಈ ಉಂಗುರಗಳ ವಿನ್ಯಾಸದಲ್ಲೂ ಪುಟ್ಟ ವಿಶ್ವಕಪ್ ಟ್ರೋಫಿ ಮತ್ತು ವಿಶೇಷ ಕೆತ್ತನೆ ಇರಲಿದೆ.

ವಿಶ್ವಕಪ್ ಗೆದ್ದ ವಿಜೇತ ತಂಡಕ್ಕೆ ಚಿನ್ನದಿಂದ ತಯಾರಿಸಿರುವ ವಜ್ರ ಹಾಗೂ ನೀಲಮಣಿ ಕಲ್ಲುಗಳನ್ನು ಅಳವಡಿಸಿದ 30 ಉಂಗುರಗಳನ್ನು ನೀಡಲಾಗುವುದು ಎಂದು ಫಿಫಾ ತಿಳಿಸಿದೆ.

ಜುಲೈ 19ರ ಭಾನುವಾರ ಮಧ್ಯರಾತ್ರಿ 12-30ಕ್ಕೆ ಅರ್ಜೆಂಟೀನಾ ಮತ್ತು ಸ್ಫೇನ್ ನಡುವಣ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ವಿಶ್ವದಾದ್ಯಂತ ಅಭಿಮಾನಿಗಳು ತೀವ್ರ ಕಾತರಿಂದ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

ಪ್ರಧಾನಿ ಮೋದಿ ಮೆಚ್ಚಿದ ಇಡ್ಲಿ ನಿಂಗಮ್ಮನಿಗೆ ಸಂಕಷ್ಟ: ಅಂಗಡಿ ನಡೆಸದಂತೆ GBA ಅಧಿಕಾರಿಗಳ ವಾರ್ನಿಂಗ್!

CJP ಪ್ರತಿಭಟನೆ ವೇಳೆ ಹೆಸರು ದುರುಪಯೋಗ: 'ಬಲಪಂಥೀಯ' ಇನ್‌ಫ್ಲ್ಯುಯೆನ್ಸರ್ ವಿರುದ್ಧ ಕೇಸ್ ದಾಖಲಿಸಿದ ಚಿರಾಗ್ ಪಾಸ್ವಾನ್