ಪಿ.ವಿ. ಸಿಂಧು Online Desk
ಕ್ರೀಡೆ

19 ತಿಂಗಳ ಪ್ರಶಸ್ತಿ ಬರಕ್ಕೆ ಬ್ರೇಕ್; ಜಪಾನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಪಿ.ವಿ ಸಿಂಧು

ಟೋಕಿಯೋದಲ್ಲಿ ನಡೆದ ಜಪಾನ್ ಓಪನ್ 2026 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಅಕಾನೆ ಯಮಗುಚಿ ಅವರನ್ನು ಸೋಲಿಸುವ ಮೂಲಕ ಸಿಂಧು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಈ ಪ್ರತಿಷ್ಠಿತ ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ಟೋಕಿಯೋ (ಜಪಾನ್): ಗಾಯದ ಸಮಸ್ಯೆಗಳಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಫಾರ್ಮ್ ಕೊರತೆ ಎದುರಿಸುತ್ತಿದ್ದ, 2 ಬಾರಿಯ ಒಲಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಟೋಕಿಯೋದಲ್ಲಿ ನಡೆದ ಜಪಾನ್ ಓಪನ್ 2026 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಅಕಾನೆ ಯಮಗುಚಿ ಅವರನ್ನು ಸೋಲಿಸುವ ಮೂಲಕ ಸಿಂಧು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಈ ಪ್ರತಿಷ್ಠಿತ ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ನೇರ ಸೆಟ್‌ಗಳ ಭರ್ಜರಿ ಜಯ

ಟೋಕಿಯೋ ಅಂಗಳದಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಿಂಧು, ಜಪಾನ್‌ನ ಯಮಗುಚಿ ಅವರನ್ನು ಅಂತಿಮವಾಗಿ 21-17, 21-17 ರ ನೇರ ಗೇಮ್‌ಗಳಿಂದ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಗೆಲುವಿನೊಂದಿಗೆ ಯಮಗುಚಿ ವಿರುದ್ಧ ಸಿಂಧು ಅವರ ಮುಖಾಮುಖಿ ದಾಖಲೆಯು 16-14 ಕ್ಕೆ ಏರಿಕೆಯಾಗಿದೆ.

ಜೊತೆಗೆ ಇದು ಪಿವಿ ಸಿಂಧು ಅವರ ವೃತ್ತಿಜೀವನದ ಮೊದಲ ಬಿಡಬ್ಲ್ಯೂಎಫ್ ಸೂಪರ್ 750 (BWF Super 750) ಪ್ರಶಸ್ತಿಯಾಗಿದೆ.

19 ತಿಂಗಳ ಪ್ರಶಸ್ತಿ ಬರಕ್ಕೆ ಬ್ರೇಕ್

ಸಿಂಧು ಅವರ ವೃತ್ತಿಜೀವನದಲ್ಲಿ ಈ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಯಾಕಂದ್ರೆ, ಡಿಸೆಂಬರ್ 2024 ರ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯ ಬಳಿಕ ಸಿಂಧು ಯಾವುದೇ ದೊಡ್ಡ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. ಅದ್ರಂತೆ, ಸುಮಾರು 19 ತಿಂಗಳುಗಳ ಸುದೀರ್ಘ ಕಾಯುವಿಕೆಯ ನಂತರ ಈ ಪ್ರಶಸ್ತಿ ಒಲಿದಿದೆ. ಏತನ್ಮಧ್ಯೆ, 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಸಿಂಧು ಸಾಧಿಸಿದ ಅತ್ಯಂತ ದೊಡ್ಡ ಜಯ ಇದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಕ್ರೋಚ್​ಗಳ 'ಸಂಸತ್ ಚಲೋ'ಗೆ ಮಣಿದ ಮೋದಿ? ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಾಧ್ಯತೆ; CJP ಜತೆ ಜೆಪಿ ನಡ್ಡಾ ಮಾತುಕತೆ!

Jantar Mantar protest: 'ಸಂಸತ್ ಚಲೋ' ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿಚಾರ್ಜ್! Video

'ಸಂಸತ್ ಚಲೋ' ನಂತರವೂ ಉಪವಾಸ ಅಂತ್ಯಗೊಳಿಸಲ್ಲ; ಸತ್ಯಾಗ್ರಹ ಹಿಂಪಡೆಯಲು 3 ಷರತ್ತು ವಿಧಿಸಿದ ವಾಂಗ್‌ಚುಕ್!

'ಆ ಪಾತ್ರ ನಿರ್ವಹಿಸಿದ ರೀತಿ...': ನಟಿ ರಕುಲ್ ಪ್ರೀತ್ ಸಿಂಗ್ ಅಭಿನಯಕ್ಕೆ ರಾಕಿಂಗ್‌ ಸ್ಟಾರ್‌ ಯಶ್ ಫಿದಾ!

'ಸದನದಲ್ಲೇ ಮೂಳೆ ಮುರಿಯುತ್ತೇವೆ': ತಮಿಳುನಾಡು ಸಿಎಂ ವಿಜಯ್‌ಗೆ ಬೆದರಿಕೆ ಹಾಕಿದ ಡಿಎಂಕೆ ಶಾಸಕನ ಬಂಧನ