ಟೇಬಲ್ ಟೆನ್ನಿಸ್ 
ಕ್ರೀಡೆ

ನಾಚಿಕೆಗೇಡು: 'Asian Games ಕ್ರೀಡಾಕೂಟದ ವೆಚ್ಚ ನೀವೇ ಭರಿಸಿ'; ಆಟಗಾರರಿಗೆ ಶಾಕ್ ಕೊಟ್ಟ ಪಾಕಿಸ್ತಾನ

ಪಾಕಿಸ್ತಾನದ ಅಗ್ರ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ಆಟಗಾರರು, ಈ ವರ್ಷದ ಅಂತ್ಯದ ವೇಳೆಗೆ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ತಮ್ಮದೇ ಖರ್ಚುಗಳನ್ನು ಭರಿಸಿಕೊಳ್ಳಬೇಕೆಂದು PTTF ಸೂಚಿಸಿದೆ

ಇಸ್ಲಾಮಾಬಾದ್: ಟೇಬಲ್ ಟೆನ್ನಿಸ್ ಆಟಗಾರರಿಗೆ ಪಾಕಿಸ್ತಾನ ಸರ್ಕಾರ ಭಾರಿ ಶಾಕ್ ನೀಡಿದ್ದು, Asian Games ಕ್ರೀಡಾಕೂಟದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿಕೊಳ್ಳುವಂತೆ ಸೂಚಿಸಿದೆ.

ಹೌದು.. ಪಾಕಿಸ್ತಾನದ ಅಗ್ರ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ಆಟಗಾರರು, ಈ ವರ್ಷದ ಅಂತ್ಯದ ವೇಳೆಗೆ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ತಮ್ಮದೇ ಖರ್ಚುಗಳನ್ನು ಭರಿಸಿಕೊಳ್ಳಬೇಕೆಂದು ಪಾಕಿಸ್ತಾನ ಟೇಬಲ್ ಟೆನಿಸ್ ಫೆಡರೇಶನ್ (PTTF) ಸೂಚಿಸಿದೆ. ಇದರಿಂದ ಪಾಕಿಸ್ತಾನ ಆಟಗಾರರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಲಾಹೋರ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ಆಯ್ಕೆ (ಟ್ರಯಲ್ಸ್) ಸ್ಪರ್ಧೆಯ ವೇಳೆ ಕೆಲ ಆಟಗಾರರು ತಮ್ಮ ದಿನಭವತ್ಯೆ ಮತ್ತು ಪ್ರಯಾಣ ಭತ್ಯೆಗಳ ಬಗ್ಗೆ ವಿಚಾರಿಸಿದಾಗ ಈ ವಿಷಯ ತಿಳಿದುಬಂದಿದೆ.

"ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ನಮಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಅದಲ್ಲದೆ, ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗುವ ಆಟಗಾರರು ತಮ್ಮ ವಿಮಾನ ಟಿಕೆಟ್‌ಗಳ ವೆಚ್ಚವನ್ನು ತಾವೇ ಭರಿಸಬೇಕು. ಜೊತೆಗೆ, ಗೇಮ್ಸ್ ಅವಧಿಯಲ್ಲಿ ದಿನನಿತ್ಯದ ಖರ್ಚುಗಳಿಗೆ ಪ್ರತಿ ದಿನ 50 ಅಮೆರಿಕನ್ ಡಾಲರ್ (USD) ವಿದೇಶಿ ಕರೆನ್ಸಿಯನ್ನೂ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ," ಎಂದು ಒಬ್ಬ ಆಟಗಾರ ತಿಳಿಸಿದ್ದಾರೆ.

ಪಿಟಿಟಿಎಫ್‌ನ ಹಿರಿಯ ಅಧಿಕಾರಿಯೊಬ್ಬರು, "ಫೆಡರೇಶನ್‌ಗೆ ಪಾಕಿಸ್ತಾನ ಕ್ರೀಡಾ ಮಂಡಳಿ (PSB) ಯಿಂದ ಯಾವುದೇ ಅನುದಾನ ಅಥವಾ ಹಣಕಾಸು ನೆರವು ಸಿಕ್ಕಿಲ್ಲ. ಆದ್ದರಿಂದ ಟ್ರಯಲ್ಸ್‌ಗಳನ್ನು ಆಯೋಜಿಸಿರುವುದಕ್ಕೂ ನೀವು ಕೃತಜ್ಞರಾಗಿರಬೇಕು" ಎಂದು ಹೇಳಿದರೆಂದು ತಿಳಿಸಿದ್ದಾರೆ.

"ಏಷ್ಯನ್ ಗೇಮ್ಸ್‌ಗೂ ಪಿಟಿಟಿಎಫ್‌ಗೆ ಪಿಎಸ್‌ಬಿಯಿಂದ ಯಾವುದೇ ಅನುದಾನ ಅಥವಾ ಹಣ ಸಿಗುತ್ತಿಲ್ಲ ಎಂದು ನಮಗೆ ತಿಳಿಸಲಾಯಿತು. ಇದು ಆಶ್ಚರ್ಯಕರವಾಗಿದೆ. ಪಾಕಿಸ್ತಾನದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ವಿಧಾನ ಇದೇನಾ?" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆಟಗಾರ ಪ್ರಶ್ನಿಸಿದ್ದಾರೆ.

ಚೀನಾ, ದಕ್ಷಿಣ ಕೊರಿಯಾ, ಭಾರತ ಮತ್ತು ಮಲೇಷ್ಯಾ ಮೊದಲಾದ ಬಲಿಷ್ಠ ರಾಷ್ಟ್ರಗಳ ಪ್ರಾಬಲ್ಯದ ಕಾರಣದಿಂದ ಪಾಕಿಸ್ತಾನವು ಇದುವರೆಗೆ ಏಷ್ಯನ್ ಗೇಮ್ಸ್ ಅಥವಾ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಯಾವುದೇ ಪದಕವನ್ನು ಗೆದ್ದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ

ಮುಂಬೈ: ಬಾಲಿವುಡ್ ನಟಿಯ ಮೇಲೆ ಅತ್ಯಾಚಾರ ಆರೋಪ; 73 ವರ್ಷದ ಖ್ಯಾತ ಸಿನಿಮಾ ಡೈರೆಕ್ಟರ್ ಬಂಧನ!