

ಮುಂಬೈ: 33 ವರ್ಷದ ಬಾಲಿವುಡ್ ನಟಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 73 ವರ್ಷದ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ ಅವರನ್ನು ಬಂಧಿಸಲಾಗಿದೆ.
ಮುಂದಿನ ಸಿನಿಮಾವೊಂದರ ಕುರಿತು ಚರ್ಚಿಸುವ ನೆಪದಲ್ಲಿ ನಟಿಯನ್ನು ಮುಂಬೈನ ಮಲ್ವಾನಿಯಲ್ಲಿರುವ ಅವರ ನಿವಾಸಕ್ಕೆ ಕರೆಸಿಕೊಂಡಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಟಿಗೆ ಮಾದಕ ದ್ರವ್ಯ ನೀಡಿ, ಅತ್ಯಾಚಾರವೆಸಗಿದ್ದು, ನಂತರ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ನಿರ್ದೇಶಕರನ್ನು ಬೊರಿವಲಿ ಹಾಲಿಡೇ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಆಗಸ್ಟ್ 12 ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.
ನೂರಾನಿ ಅವರು "ಬಡೆ ದಿಲ್‌ವಾಲಾ" (1999) ಮತ್ತು "ಜೋರು ಕಾ ಗುಲಾಮ್" (2000) ನಂತಹ ಜನಪ್ರಿಯ ಸಿನಿಮಾಗಳ ಕಥೆಗಾರರಾಗಿ, ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.