ಯೂಟ್ಯೂಬರ್ ಐಶೋಸ್ಪೀಡ್ ಕಾಲೆಳೆದ ರೊನಾಲ್ಡೊ 
ಕ್ರೀಡೆ

"Are You Taking Something?": ರಕ್ತ ಪರೀಕ್ಷೆ ಮಾಡಿಸು, ಯೂಟ್ಯೂಬರ್ ಐಶೋಸ್ಪೀಡ್ ಕಾಲೆಳೆದ ರೊನಾಲ್ಡೊ! Video ವೈರಲ್

ಯೂಟ್ಯೂಬರ್ IShowSpeed ಅವರ ಅತ್ಯುತ್ತಮ ದೇಹದಾರ್ಢ್ಯವನ್ನು ಕಂಡು ಆಶ್ಚರ್ಯಚಕಿತರಾದ ರೊನಾಲ್ಡೊ, ತಮಾಷೆಯಾಗಿ, ನೀವು ಹೀಗೆ ದೇಹ ಬೆಳೆಸಲು ಏನನ್ನಾದರೂ ತೆಗೆದುಕೊಳ್ಳುತ್ತೀರಾ? ಎಂದು ಕೇಳುತ್ತಾರೆ.

ನ್ಯೂಯಾರ್ಕ್: ಬ್ರೆಜಿಲ್‌ನ ಫುಟ್‌ಬಾಲ್ ದಂತಕಥೆ ರೊನಾಲ್ಡೊ ನಜಾರಿಯೊ ಅವರು ಪ್ರಸಿದ್ಧ ಯೂಟ್ಯೂಬರ್ ಐಶೋಸ್ಪೀಡ್ (IShowSpeed) ಅವರ ಕಾಲೆಳೆದಿರುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ.

ಈ ಇಬ್ಬರು ದಿಗ್ಗಜರು ನ್ಯೂಯಾರ್ಕ್ ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಬ್ರೆಜಿಲ್ ಮತ್ತು ಮೊರಕ್ಕೂ ನಡುವಣ ಫಿಫಾ ವಿಶ್ವ ಕಪ್ 2026 ಪಂದ್ಯದಲ್ಲಿ ಭೇಟಿಯಾದಾಗ ಇದು ನಡೆದಿದೆ.

ಯೂಟ್ಯೂಬರ್ IShowSpeed ಅವರ ಅತ್ಯುತ್ತಮ ದೇಹದಾರ್ಢ್ಯವನ್ನು ಕಂಡು ಆಶ್ಚರ್ಯಚಕಿತರಾದ ರೊನಾಲ್ಡೊ, ತಮಾಷೆಯಾಗಿ, ನೀವು ಹೀಗೆ ದೇಹ ಬೆಳೆಸಲು ಏನನ್ನಾದರೂ ತೆಗೆದುಕೊಳ್ಳುತ್ತೀರಾ? ಎಂದು ಕೇಳುತ್ತಾರೆ.

ಇದಕ್ಕೆ ಉತ್ತರಿಸುವ IShowSpeed ತನ್ನ ಸಿಕ್ಸ್-ಪ್ಯಾಕ್ ಆಬ್ಸ್ ತೋರಿಸಿ, ಇದು ಜಿಮ್‌ನಲ್ಲಿನ ಕಠಿಣ ಪರಿಶ್ರಮದಿಂದ ಬೆಳೆದದ್ದು ಎಂದು ಹೇಳುತ್ತಾರೆ.

ತನ್ನ ಸಿಕ್ಸ್ ಪ್ಯಾಕ್ಸ್ ಸಹಜವಾಗಿದೆ. ಇದಕ್ಕೆ ಸಾಬೀತುಪಡಿಸಲು ಬೇಕಾದರೆ ರಕ್ತಪರೀಕ್ಷೆ ಮಾಡಿಸಲು ಸಿದ್ಧ ಎಂದು ಸ್ಪೀಡ್ ಹೇಳುತ್ತಾರೆ. ಬಳಿಕ ತನ್ನ ಫಿಟ್ನೆಸ್ ಬಗ್ಗೆಗಿನ ರೊನಾಲ್ಡೊ ಅವರ ಅಪನಂಬಿಕೆಯನ್ನು ಪ್ರಶಂಸೆಯಾಗಿ ತೆಗೆದುಕೊಳ್ಳುತ್ತೇನೆ ಎಂದು ಸ್ಪೀಡ್ ಹೇಳುತ್ತಾರೆ. ಹೋಗಿ ರಕ್ತ ಪರೀಕ್ಷೆ ಮಾಡಿಸಿ ಎಂದು ರೋನಾಲ್ಡ್ ಹೇಳಿ ಹೋಗುವುದು ವಿಡಿಯೋದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಕಚ್ಚಾ ತೈಲ ಬೆಲೆ ಭಾರೀ ಇಳಿಕೆ; ಪೆಟ್ರೋಲ್, ಡೀಸೆಲ್ ದರ ಕಮ್ಮಿ ಮಾಡ್ತಾರಾ ಮೋದಿ?

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

Stanford Graduation Ceremony: ಗೂಗಲ್ CEO ಸುಂದರ್ ಪಿಚೈ ವೇದಿಕೆ ಏರುತ್ತಿದ್ದಂತೆಯೇ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು! Video

ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ತಾಯಿಯ ಬಗ್ಗೆ ಯಾರಿಗೂ ಗೊತ್ತಿಲ್ಲದ ಮಾಹಿತಿ ಬಿಚ್ಚಿಟ್ಟ ಬ್ಯಾಲದ ಕೋಚ್! VIDEO

ರಾಜ್ಯದಲ್ಲಿ ಮುಂಗಾರು ಚುರುಕು: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ yellow ಅಲರ್ಟ್, ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

SCROLL FOR NEXT