ನವದೆಹಲಿ: ಗುರುವಾರ ನಡೆದ ಪಂದ್ಯದಲ್ಲಿ ಜಪಾನ್ ತಂಡವನ್ನು 4-1 ಅಂತರದಿಂದ ಸೋಲಿಸಿದ ಭಾರತ ತಂಡ ದಾಖಲೆಯ ಆರನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮೂರನೇ ನಿಮಿಷದಲ್ಲಿ 0-1 ಅಂತರದಿಂದ ಹಿನ್ನಡೆ ಅನುಭವಿಸಿದ ನಂತರ, ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡ, ಒತ್ತಡಕ್ಕೆ ಒಳಗಾಯಿತು. ಜಪಾನ್‌ನ ನಿರಂತರ ದಾಳಿ ಮತ್ತು ಅದ್ಭುತ ರಕ್ಷಣಾ ಕಾರ್ಯವು ಆತಿಥೇಯರ ಸಂಕಷ್ಟಕ್ಕೆ ಕಾರಣವಾಯಿತು. ಮೂರನೇ ಕ್ವಾರ್ಟರ್‌ನಲ್ಲಿ ಶಿಲಾನಂದ್ ಲಾಕ್ರ ಸಮಬಲ ಗೋಲು ಗಳಿಸಿದಾಗ ಭಾರತದ ತಂಡಕ್ಕೆ ಮನೋಸ್ಥೈರ್ಯವನ್ನು ಹೆಚ್ಚಿತು. ಅಂತಿಮ ಕ್ವಾರ್ಟರ್‌ನಲ್ಲಿ ದಿಲ್‌ಪ್ರೀತ್ ಸಿಂಗ್, ಜುಗ್ರಾಜ್ ಸಿಂಗ್ ಮತ್ತು ವಿವೇಕ್ ಸಾಗರ್ ಪ್ರಸಾದ್ ತಲಾ ಒಂದು ಗೋಲು ಗಳಿಸಿ ಜಯ ಸಾಧಿಸಿದರು.
ಪ್ರಸ್ತುತ ಚಾಂಪಿಯನ್ ಆಗಿರುವ ಭಾರತಕ್ಕೆ, ಜಪಾನ್ ತಂಡ ಕಠಿಣ ಸವಾಲೊಡ್ಡಿತು. ಜಪಾನ್ ಆರಂಭಿಕ ಗೋಲು ಗಳಿಸಿ ಮುನ್ನಡೆ ಪಡೆಯಿತು; ಶಿಲಾನಂದ ಲಾಕ್ರಾ ಪಂದ್ಯದ ಗತಿಯನ್ನು ಬದಲಿಸುವವರೆಗೂ ಭಾರತ ಜಪಾನ್‌ನನ್ನು ಹಿಂಬಾಲಿಸುತ್ತಲೇ ಇತ್ತು. ಸಮಬಲದ ಗೋಲು ದಾಖಲಿಸಿದ ನಂತರ ಭಾರತ ತನ್ನ ಆಟದ ಮಟ್ಟವನ್ನು ಸುಧಾರಿಸಿಕೊಂಡಿತು. ದಿಲ್‌ಪ್ರೀತ್ ಸಿಂಗ್, ಜುಗರಾಜ್ ಸಿಂಗ್ ಮತ್ತು ವಿವೇಕ್ ಸಾಗರ್ ಪ್ರಸಾದ್ ಅವರು ಗಳಿಸಿದ ಗೋಲುಗಳ ನೆರವಿನಿಂದ ಭಾರತ ಜಪಾನ್ ತಂಡವನ್ನು ಸಂಪೂರ್ಣವಾಗಿ ರಕ್ಷಣಾತ್ಮಕ ಸ್ಥಿತಿಗೆ (back foot) ತಳ್ಳಿತು.
ಪಂದ್ಯದ ಹೈಲೈಟ್ಸ್
ಈ ಪಂದ್ಯದ ಮೂಲಕ ಉಪನಾಯಕ ಹಾರ್ದಿಕ್ ಸಿಂಗ್ ಗುರುವಾರ ತಮ್ಮ 200ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು ಮತ್ತು ಭಾರತದ ಮಿಡ್‌ಫೀಲ್ಡ್ ವಿಭಾಗದಲ್ಲಿ ಮಹತ್ವದ ಕೊಡುಗೆ ನೀಡಿದರು.
ಭಾರತ ಇಡೀ ಟೂರ್ನಿಯಲ್ಲಿ ಸೋಲನ್ನೇ ಕಾಣದೆ, ಏಷ್ಯನ್ ಹಾಕಿಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದೆ.