ಸುಜೀತ್, ಲವ್ಲಿನಾ ಬೊರ್ಗೊಹೈನ್, ಅಂಕುಶ್ ಪಂಗಲ್ 
ಕ್ರೀಡೆ

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

ಭಾರತ ಕೇವಲ ಒಂದು ನಿಮಿಷದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. ಪುರುಷರ 80 ಕೆಜಿ ತೂಕ ವಿಭಾಗದಲ್ಲಿ ಬಾಕ್ಸರ್ ಅಂಕುಶ್ ಪಂಗಲ್ ಚಿನ್ನ ಗೆದ್ದಿದ್ದರೇ ಕೇವಲ ಒಂದು ನಿಮಿಷದ ಮೊದಲು ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸುಜೀತ್ ಕಲ್ಕಲ್ ಚಿನ್ನ ಗೆದ್ದಿದ್ದಾರೆ.

ಶುಕ್ರವಾರ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕೇವಲ ಒಂದು ನಿಮಿಷದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. ಪುರುಷರ 80 ಕೆಜಿ ತೂಕ ವಿಭಾಗದಲ್ಲಿ ಬಾಕ್ಸರ್ ಅಂಕುಶ್ ಪಂಗಲ್ ಚಿನ್ನ ಗೆದ್ದಿದ್ದರೇ ಕೇವಲ ಒಂದು ನಿಮಿಷದ ಮೊದಲು ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸುಜೀತ್ ಕಲ್ಕಲ್ ಚಿನ್ನ ಗೆದ್ದಿದ್ದಾರೆ.

ಇದಕ್ಕೂ ಮೊದಲು, ಬಾಕ್ಸರ್ ಪರ್ವೀನ್ ಹೂಡಾ ಮಹಿಳೆಯರ 65 ಕೆಜಿ ವಿಭಾಗದಲ್ಲಿ ಮತ್ತು ಮಹಿಳೆಯರ 75 ಕೆಜಿ ತೂಕ ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್ ಚಿನ್ನ ಗೆದ್ದಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮೂವರು ಭಾರತೀಯ ಬಾಕ್ಸರ್‌ಗಳು ಚಾಂಪಿಯನ್ ಆಗಿದ್ದಾರೆ. ಇಂದು ಬೆಳಿಗ್ಗೆ ಭಾರತೀಯ ಮಹಿಳಾ ಬಿಲ್ಲುಗಾರಿಕೆ ತಂಡವು ರಿಕರ್ವ್ ಸ್ಪರ್ಧೆಯಲ್ಲಿಯೂ ಚಿನ್ನ ಗೆದ್ದಿದೆ. ಇದರೊಂದಿಗೆ, ಭಾರತದ ಒಟ್ಟು ಪದಕಗಳ ಸಂಖ್ಯೆ 15 ತಲುಪಿದ್ದು, ಒಟ್ಟಾರೆ 75 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತಲುಪಿದೆ. ಏತನ್ಮಧ್ಯೆ, ಭಾರತ ಮತ್ತು ಚೀನಾ ನಡುವಿನ ಮಹಿಳಾ ಹಾಕಿ ಫೈನಲ್ ನಡೆಯುತ್ತಿದೆ. ಭಾರತ 1-0 ಮುನ್ನಡೆಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!

Pakನ ಹೊಸ ನಾಟಕ: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಹತ್ಯೆಗೀಡಾದ SSG ಉಗ್ರ ಜೀವಂತವಾಗಿದ್ದಾನೆ ಎಂದ ಪಾಕ್ ಸೇನೆ

ಬೆಳಗಾವಿಯಲ್ಲಿ 100 ಕೋಟಿ ರೂ ವೆಚ್ಚದಲ್ಲಿ ಗಾಂಧೀಜಿ ಸ್ಮಾರಕ ನಿರ್ಮಾಣ- ಸಿಎಂ ಡಿಕೆ ಶಿವಕುಮಾರ್ ಘೋಷಣೆ!

SIR ವಿವಾದ: ಫಾರ್ಮ್‌-6 ನಿಯಮ ಸರಳಗೊಳಿಸಿದ ಚುನಾವಣಾ ಆಯೋಗ, ಪಟ್ಟಿಯಿಂದ ಹೊರಗುಳಿದವರ ಸೇರ್ಪಡೆಗೆ ವಿಶೇಷ ಅಭಿಯಾನಕ್ಕೆ ಸೂಚನೆ..!