ಬ್ಯಾಲನ್ ಡಿ'ಓರ್ ವಿಜೇತರಾದ ಅಲೆಕ್ಸಿಯಾ ಪುಟೆಲ್ಲಾಸ್ ಹಾಗೂ ಹ್ಯಾರಿ ಕೇನ್ Online Desk
ಕ್ರೀಡೆ

25 ವರ್ಷಗಳ ಬಳಿಕ ಇಂಗ್ಲೆಂಡ್‌ ಆಟಗಾರನಿಗೆ ಬ್ಯಾಲನ್ ಡಿ'ಓರ್: ಬೇಯರ್ನ್ ಮ್ಯೂನಿಚ್ ಪರ ಭರ್ಜರಿ ಪ್ರದರ್ಶನಕ್ಕೆ ಹ್ಯಾರಿ ಕೇನ್‌ಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ

ವಿಶ್ವ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಬ್ಯಾಲನ್ ಡಿ'ಓರ್ ಅನ್ನು ಈ ಬಾರಿ ಇಂಗ್ಲೆಂಡ್‌ನ ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್ ಪುರುಷರ ಬ್ಯಾಲನ್ ಡಿ ಓರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಲಂಡನ್‌: ವಿಶ್ವ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಬ್ಯಾಲನ್ ಡಿ'ಓರ್ ಅನ್ನು ಈ ಬಾರಿ ಇಂಗ್ಲೆಂಡ್‌ನ ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್ ಅವರು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬೇಯರ್ನ್ ಮ್ಯೂನಿಚ್ ಪರ ಭರ್ಜರಿ ಪ್ರದರ್ಶನ ನೀಡಿದ ಹ್ಯಾರಿ ಕೇನ್, ಕಳೆದ 25 ವರ್ಷಗಳಲ್ಲಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಇಂಗ್ಲೆಂಡ್ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತ್ತ ಸ್ಪೇನ್ ಹಾಗೂ ಬಾರ್ಸಿಲೋನಾ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾಸ್ ಅವರು ತಮ್ಮ ವೃತ್ತಿಜೀವನದ 3ನೇ ಬ್ಯಾಲನ್ ಡಿ'ಓರ್ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಹ್ಯಾರಿ ಕೇನ್‌ಗೆ ಬ್ಯಾಲನ್ ಡಿ ಓರ್

ಇಂಗ್ಲೆಂಡ್‌ನ ಸ್ಟ್ರೈಕರ್ ಮತ್ತು ಬೇಯರ್ನ್ ಮ್ಯೂನಿಚ್ ತಂಡದ ಆಟಗಾರ ಹ್ಯಾರಿ ಕೇನ್ ಅವರು ಪ್ರತಿಷ್ಠಿತ 2026ರ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2001ರಲ್ಲಿ ಮೈಕೆಲ್ ಓವನ್ ಈ ಪ್ರಶಸ್ತಿ ಗೆದ್ದ ನಂತರ, ಕಳೆದ 25 ವರ್ಷಗಳಲ್ಲಿ ಬ್ಯಾಲನ್ ಡಿ'ಓರ್ ಗೆದ್ದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕೇನ್ ಪಾತ್ರರಾಗಿದ್ದು, ಲಂಡನ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಹ್ಯಾರಿ ಕೇನ್ ಅವರು ರಿಯಲ್ ಮ್ಯಾಡ್ರಿಡ್‌ನ ಕಿಲಿಯನ್ ಎಂಬಾಪೆ (ದ್ವಿತೀಯ ಸ್ಥಾನ) ಮತ್ತು ಬಾರ್ಸಿಲೋನಾದ ಲ್ಯಾಮಿನೆ ಯಮಾಲ್ (ತೃತೀಯ ಸ್ಥಾನ) ಅವರನ್ನು ಹಿಂದಿಕ್ಕಿ ಈ ಗೌರವಕ್ಕೆ ಭಾಜನರಾದರು.

ಕೇನ್ ಸಾಧನೆಗಳು:

  • ದಾಖಲೆಯ ಗೋಲುಗಳು: 2025-26ರ ಋತುವಿನಲ್ಲಿ ಕ್ಲಬ್ (ಬೇಯರ್ನ್ ಮ್ಯೂನಿಚ್) ಮತ್ತು ಇಂಗ್ಲೆಂಡ್ ದೇಶಕ್ಕಾಗಿ ಆಡಿದ ಒಟ್ಟು 65 ಪಂದ್ಯಗಳಲ್ಲಿ ನಂಬಲಾಗದ 73 ಗೋಲುಗಳನ್ನು ಗಳಿಸಿದ್ದರು. ಈ ಮೂಲಕ ಒಂದೇ ಋತುವಿನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹಿರಿಮೆ ಗಳಿಸಿದ್ದಾರೆ. ಮೊದಲ ಸ್ಥಾನದಲ್ಲಿ ಲಿಯೋನೆಲ್ ಮೆಸ್ಸಿ (2011-12ರಲ್ಲಿ 82 ಗೋಲುಗಳು) ಇದ್ದಾರೆ.

  • ಡಬಲ್ ಧಮಾಕಾ: ಬ್ಯಾಲನ್ ಡಿ'ಓರ್ ಜೊತೆಗೆ ಅವರು ವರ್ಷದ ಅತ್ಯುತ್ತಮ ಸ್ಟ್ರೈಕರ್‌ಗೆ ನೀಡಲಾಗುವ 'ಗರ್ಡ್ ಮುಲ್ಲರ್ ಟ್ರೋಫಿ' ಯನ್ನೂ ಸಹ ತಮ್ಮದಾಗಿಸಿಕೊಂಡರು.

  • ಐದನೇ ಇಂಗ್ಲಿಷ್ ಆಟಗಾರ: ಸರ್ ಸ್ಟಾನ್ಲಿ ಮ್ಯಾಥ್ಯೂಸ್, ಸರ್ ಬಾಬಿ ಚಾರ್ಲ್ಟನ್, ಕೆವಿನ್ ಕೀಗನ್ ಮತ್ತು ಮೈಕೆಲ್ ಓವನ್ ನಂತರ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 5ನೇ ಆಟಗಾರ ಇವರಾಗಿದ್ದಾರೆ.

ಮುಂದುವರೆದು ಪ್ರಶಸ್ತಿ ಗೆದ್ದ ನಂತರ ಮಾತನಾಡಿದ 33 ವರ್ಷದ ಕೇನ್, "ಇದು ನನ್ನ ಪಾಲಿಗೆ ಕನಸು ನನಸಾದ ಕ್ಷಣ" ಎಂದು ಸಂತಸ ಹಂಚಿಕೊಂಡಿದ್ದಾರೆ. ಜೊತೆಗೆ, ಭಾರತದ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಸೇರಿದಂತೆ ಜಾಗತಿಕ ಕ್ರೀಡಾ ಗಣ್ಯರು ಹ್ಯಾರಿ ಕೇನ್ ಅವರ ಈ ಮಹೋನ್ನತ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ವೇಳೆ, ಸ್ಪೇನ್‌ನ 19 ವರ್ಷದ ಲ್ಯಾಮಿನ್ ಯಮಲ್ "ಯಂಗ್ ಟ್ಯಾಲೆಂಟ್ ಆಫ್ ದಿ ಇಯರ್" ಪ್ರಶಸ್ತಿ ಪಡೆದುಕೊಂಡಿದ್ದು, ಸತತ ಮೂರು ಬಾರಿ (2024, 2025, 2026) ಈ ಗೌರವ ಪಡೆದ ಇತಿಹಾಸದ ಮೊದಲ ಆಟಗಾರರಾಗಿದ್ದಾರೆ. ಮತ್ತೊಂದೆಡೆ, ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ ಮೂರನೇ ಬಾರಿಗೆ ಮಹಿಳಾ ಬ್ಯಾಲನ್ ಡಿ'ಓರ್ ಪಡೆದಿದ್ದಾರೆ. ಕಳೆದ ಋತುವಿನಲ್ಲಿ ಬಾರ್ಸಿಲೋನಾ ಪರ ಮಹಿಳಾ ಚಾಂಪಿಯನ್ಸ್ ಲೀಗ್ ಸೇರಿದಂತೆ ಪ್ರಶಸ್ತಿಗಳನ್ನು ಗೆದ್ದಿದ್ದರು. ಆಫ್-ಸೀಸನ್‌ನಲ್ಲಿ ಲಂಡನ್ ಸಿಟಿ ಲಯನೆಸ್ ಸೇರಿದ್ದ ಇವರು, ಸ್ಪ್ಯಾನಿಷ್ ರಾಷ್ಟ್ರೀಯ ತಂಡದೊಂದಿಗೆ ಮಹಿಳಾ ನೇಷನ್ಸ್ ಲೀಗ್ ಗೆದ್ದು, ಐತಾನಾ ಬೊನ್ಮಟಿ ಅವರ 3 ವರ್ಷಗಳ ಪ್ರಾಬಲ್ಯವನ್ನು ಮುರಿದಿದ್ದಾರೆ.

ಬ್ಯಾಲನ್ ಡಿ'ಓರ್ ಹಿನ್ನೆಲೆ:

ಬ್ಯಾಲನ್ ಡಿ'ಓರ್ ಎಂಬುದು ಫ್ರೆಂಚ್ ಪದವಾಗಿದ್ದು, ಗೋಲ್ಡನ್ ಬಾಲ್ ಎಂಬ ಅರ್ಥ ನೀಡುತ್ತದೆ. ಇದನ್ನು 1956ರಲ್ಲಿ ಫ್ರೆಂಚ್ ನಿಯತಕಾಲಿಕೆಯೊಂದು ಸ್ಥಾಪಿಸಿತು. ಅದರಂತೆ, ಕಳೆದ ಋತುವಿನಲ್ಲಿ ಕ್ಲಬ್ ಹಾಗೂ ದೇಶಕ್ಕಾಗಿ ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಿ ಅಂತರರಾಷ್ಟ್ರೀಯ ಪತ್ರಕರ್ತರ ಮತಗಳ ಆಧಾರದಲ್ಲಿ ಪ್ರತಿ ವರ್ಷ ಅತ್ಯುತ್ತಮ ಆಟಗಾರರಿಗೆ ಇದನ್ನು ನೀಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಈ ಫಲಿತಾಂಶ ಆಶ್ಚರ್ಯವೇನಲ್ಲ, ಮೋದಿಗೂ ಇದು ಎಚ್ಚರಿಕೆ ಸಂಕೇತ': MLC ಚುನಾವಣೆಯಲ್ಲಿ 'ಕೈ' ಶೂನ್ಯ ಸಾಧನೆ ಬಗ್ಗೆ BK ಹರಿಪ್ರಸಾದ್

ಬೆಂಗಳೂರಿನ ಚಿತ್ರಣವನ್ನೇ ಬದಲಿಸಿದ SIR; ಮತದಾರರ ಸಂಖ್ಯೆ ಶೇ.43ರಷ್ಟು ಇಳಿಕೆ, 1.03 ಕೋಟಿಯಿಂದ 59.08 ಲಕ್ಷಕ್ಕೆ ಕುಸಿತ!

'ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ, ರಾಜಮಾತೆ ಪ್ರಮೋದಾ ದೇವಿ ಜತೆ ಮಾತನಾಡುವ ಅಗತ್ಯವೂ ನನಗಿಲ್ಲ: ಯತೀಂದ್ರ ಸಿದ್ದರಾಮಯ್ಯ

MLC ಚುನಾವಣೆ: ವಾರಣಾಸಿಯ ಎರಡೂ ಸ್ಥಾನಗಳಲ್ಲಿ SP ಜಯಭೇರಿ; ಪ್ರಧಾನಿ ಮೋದಿ ಕ್ಷೇತ್ರದಲ್ಲೇ BJPಗೆ ಮುಖಭಂಗ!

ಯಾವುದೇ ಚುನಾವಣೆ ಒಂದು ಎಚ್ಚರಿಕೆಯ ಗಂಟೆ; 2028ಕ್ಕೆ ನಾವೇ ಗೆಲ್ಲುತ್ತೇವೆ: ಪ್ರಿಯಾಂಕ್ ಖರ್ಗೆ; Video