ಒಕಝಾಕಿ: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಫೈನಲ್‌ಗೆ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಚೀನಾವನ್ನು ಎದುರಿಸಲಿದೆ. ಸಲೀಮಾ ಟೆಟೆ ನೇತೃತ್ವದ ತಂಡ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 2-0 ಅಂತರದಿಂದ ಸೋಲಿಸಿತು.
ಸುಮಾರು ಮೂರು ಕ್ವಾರ್ಟರ್‌ಗಳವರೆಗೆ ಸಮಬಲದ ಪೈಪೋಟಿ ಮುಂದುವರೆದಿತ್ತು. ಇಶಿಕಾ 44ನೇ ನಿಮಿಷದಲ್ಲಿ ಭಾರತಕ್ಕೆ ನಿರ್ಣಾಯಕ ಆರಂಭಿಕ ಗೋಲು ತಂದುಕೊಟ್ಟರು.
ಅಂತಿಮ ಕ್ವಾರ್ಟರ್‌ನಲ್ಲಿ, ನಾಯಕಿ ಸಲೀಮಾ ಟೆಟೆ 'ಶೂಟಿಂಗ್ ಸರ್ಕಲ್'ನತ್ತ ಅದ್ಭುತ ಓಟದ ಮೂಲಕ ಚೆಂಡನ್ನು ಕೊಂಡೊಯ್ದು, ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಲು ನೆರವಾದರು.
ಭಾರತದ ಮಹಿಳಾ ಹಾಕಿ ತಂಡ ಚಿನ್ನದ ಪದಕ ಗೆಲ್ಲಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿಯಿದ್ದು, ಅಕ್ಟೋಬರ್ 2 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ ಸೆಣಸಾಟ ನಡೆಸಲಿದೆ.