ಒಬ್ಬ : ಏ... ನಿನಗೆ ಆಕ್ಸಿಡೆಂಟ್ ಆಯ್ತಾ ?
ಇನ್ನೊಬ್ಬ : ಹೌದು, ಒಂದು ಹುಡುಗಿಗೆ ಡ್ಯಾಷ್ ಹೊಡೆದೆ..
ಒಬ್ಬ : ಹುಡುಗಿಗೆ ಡ್ಯಾಷ್ ಹೊಡೆದರೆ ಕೈಗೆ ಈ ರೀತಿ ಪೆಟ್ಟಾಗುತ್ತಾ...
ಇನ್ನೊಬ್ಬ : ಇಲ್ಲಾ... ಇದು ಹುಡುಗಿಯ ಅಪ್ಪ ಮುರಿದಿದ್ದು..
ಗುಂಡ : ಲೇ ತಿಮ್ಮಾ, ಏನೋ ಹೀಗೆ ನೋಡ್ತಾ ಇದ್ದಿಯಾ ?
ತಿಮ್ಮ : ನನ್ನ ಗಲ್ಫ್ರೆಂಡ್ ಲವ್ ಲೆಟರ್ ಇದು.
ಗುಂಡ : ಆದ್ರೆ, ಇದು ಖಾಲಿ ಇದೆಯಲ್ಲೋ....
ತಿಮ್ಮ : ಇತ್ತೀಚೆಗೆ ನಮ್ಮ ನಡುವೆ ಮಾತುಕತೆ ನಿಂತು ಹೋಗಿದೆ. ಅದಕ್ಕೇ...
ರೋಗಿ : ಡಾಕ್ಟರ್... ನನಗೆ ದೂರದ ವಸ್ತು ಸರಿಯಾಗಿ ಕಾಣಿಸುತ್ತಿಲ್ಲ..
ಡಾಕ್ಟರ್ : ನಿನಗೆ ಸರ್ಜರಿ ಮಾಡಬೇಕಾಗುತ್ತದೆ..
ರೋಗಿ : ಎಷ್ಟು ಖರ್ಚಾಗಬಹುದು ಡಾಕ್ಟರ್ ?
ಡಾಕ್ಟರ್ : ಅಂದಾಜು 20 ಸಾವಿರ...
ರೋಗಿ : ಅಷ್ಟು ದುಡ್ಡು ನನ್ನಲ್ಲಿಲ್ಲ. ಖರ್ಚೇ ಇಲ್ಲದೆ ಏನು ಮಾಡಕಾಗಲ್ವಾ ?
ಡಾಕ್ಟರ್ : ಯಾಕಾಗಲ್ಲಾ... ದೂರದ ವಸ್ತುಗಳನ್ನು ಹತ್ತಿರ ಹೋಗಿ ನೋಡು, ದುಡ್ಡೇ ಬೇಡ ಅದಕ್ಕೆ.