ಮಕರಂದ/ದೋಣಿ

ಹೈಸ್ಕೂಲಿನ ಸುಂದರ ನೆನಪುಗಳು

ಹೈಸ್ಕೂಲು ಜೀವನ ಅಂದರೇನೇ ಹಾಗೆ. ಅದು ಚೆಡ್ಡಿಯಿಂದ ಪ್ಯಾಂಟಿಗೆ ವರ್ಗಾವಣೆಯಾಗುವ ಕಾಲ.
 ಮುಖದ ಮೇಲೆ ಮೀಸೆ ಮೂಡುವ ಕಾಲ. ಹುಡುಗಿಯರ ಉಬ್ಬು- ತಗ್ಗುಗಳತ್ತ ಕಳ್ಳನೋಟ ಬೀರುವ ಕಾಲ.
 ಓದಿನತ್ತ ಗಾಂಭೀರ್ಯ ಬರುವ ಕಾಲ. ಒಟ್ಟಿನಲ್ಲಿ ವಿದ್ಯಾರ್ಥಿ ಜೀವನದ ವಸಂತ ಕಾಲ. ಹೌದು. ಇಂದಿಗೆ ನಮ್ಮ ಪ್ರೌಢ ಶಾಲಾ ಶಿಕ್ಷಣ ಮುಗಿಸಿ ಏಳು ವರ್ಷಗಳೇ ಕಳೆದರೂ ಆ ಮಧುರ ನೆನಪುಗಳು ಮನದಲ್ಲಿ ಇನ್ನೂ ಹಸಿಹಸಿ. ಹೌದುರೀ. ಆ ನೆನಪುಗಳ ಪವರ್ರೇ ಅಂಥದ್ದು. ಎಂತಹ ಕಲ್ಲು ಮನಸ್ಸುಗಳನ್ನೂ ಸೀಳಿ ಹೊರಬಂದುಬಿಡುತ್ತವೆ. ಹೆಸರಿಗಷ್ಟೇ ಹೈಸ್ಕೂಲು ಸೇರಿದರೂ ಪ್ರಾಥಮಿಕ ಹಂತದ ಆ ತುಂಟತನ ನಮ್ಮಿಂದ ಬಿಟ್ಟು  ಹೋಗಿರಲಿಲ್ಲ. ಕ್ಲಾಸ್ ನಡೆದಾಗಲೂ ಮುಂದಿನ ಬೆಂಚಿನ ಗೆಳೆಯನಿಗೆ ಚಿವುಟಿ ಕನ್ನಡ ಸರ್ ಕೈಯ ಬೆತ್ತದ ರುಚಿ ನೋಡಿದ್ದು, ಹುಡುಗಿಯರ ಗ್ಯಾಲರಿಗೆ ಕಾಗದದ ವಿಮಾನ ಹಾರಿಸಿ ರಂಪಾಟ ಮಾಡಿದ್ದು, ಫೇರ್ ನೋಟ್ಸ್ ಬರೆಯದೇ ಕ್ಲಾಸಿಗೆ ಚಕ್ಕರ್ ಹೊಡೆದದ್ದು, ಸ್ವಾತಂತ್ರ್ಯ ದಿನದ ಪ್ರಯುಕ್ತದ ಕ್ವಿಜ್‌ನಲ್ಲಿ ನಮ್ಮ ಶತ್ರು ತಂಡವನ್ನು ಸೋಲಿಸಿ ಅವರ ಮುಂದೆ ನಗುವಿನ ಕೇಕೆ ಹಾಕಿದ್ದು, ಖೋ ಖೋ ಆಡಿ ಮೊಣಕೈ ಗಾಯ ಮಾಡಿಕೊಂಡಿದ್ದು, ತ್ರೈಮಾಸಿಕ ಪರೀಕ್ಷೆಗಳಲ್ಲಿ ಕಾಪಿ ಮಾಡಿ ಸಿಕ್ಕಿ ಬಿದ್ದದ್ದು, ಬಿಸಿಯೂಟ ಮಾಡುವಾಗ ಮನೆಯಿಂದ ತಂದ ಉಪ್ಪಿನಕಾಯಿಯನ್ನು ಗೆಳೆಯರೆಲ್ಲರೂ ಹಂಚಿಕೊಂಡು ಊಟ ಮಾಡಿದ್ದು, ಗುರುಗಳ ಜೊತೆಗೆ ಆತ್ಮೀಯತೆ ಬೆಳೆಸಿದ್ದು, ಟೂರಿಗೆ ಹೋದಾಗ ಹುಡುಗಿಯರ ಊಟದ ಡಬ್ಬಿ ಕದ್ದು ಖಾಲಿ ಮಾಡಿದ್ದು, ಪ್ರತಿಭಾ ಕಾರಂಜಿಯಲ್ಲಿ ಮಿಮಿಕ್ರಿ ಮಾಡಿ ಗೆದ್ದಿದ್ದು, 10ನೇ ತರಗತಿಯ ಬೀಳ್ಕೊಡುಗೆಯ ಸಮಾರಂಭದಲ್ಲಿ ಎಲ್ಲರೂ ನಿಂತು ಫೋಟೊ ತೆಗೆಸಿಕೊಂಡಿದ್ದು, ಹೀಗೆ ನೆನಪಿನ ಇನ್‌ಬಾಕ್ಸ್‌ನಿಂದ ಬರುವ ಸುಮಧುರ ನೆನಪುಗಳಿಗೆ ಪಾರವೇ ಇಲ್ಲ. ಅವೂ ವಾಸ್ತವಕ್ಕೆ ಬರುವುದೂ ಇಲ್ಲ.
ಆದರೆ ಇಂದಿನ ಹೈಸ್ಕೂಲುಗಳು ಕಾಲೇಜುಗಳಂತಾಗಿವೆ ಏನೋ? ಎಂದೆನಿಸಿಬಿಟ್ಟಿವೆ. ಏಕೆಂದರೆ, ಅಲ್ಲೂ ಯಾಂತ್ರಿಕತೆ ಬೆಳೆದಿದೆ. ಕ್ಲಾಸಲ್ಲಿ ಮೊಬೈಲುಗಳು ರಿಂಗಣಿಸುತ್ತಿವೆ. ಗುರುಗಳ ಮೇಲಿನ ಭಯ, ಭಕ್ತಿ ಕಡಿಮೆಯಾಗುತ್ತಿದೆ. ಗುರುಗಳೂ ವಿದ್ಯಾರ್ಥಿಗಳೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
 ಒಟ್ಟಿನಲ್ಲಿ ನಾವು ಕಲಿತ ಹೈಸ್ಕೂಲು ಇದೇನಾ? ಅನ್ನುವಷ್ಟರ ಮಟ್ಟಿಗೆ ಬದಲಾವಣೆಗಳಾಗಿರುವುದು ವಿಪರ್ಯಾಸವೇ ಸರಿ... ಮೊನ್ನೆ ತಾನೇ ಪದವಿ ಮುಗಿಸಿ ಕಾಲೇಜಿನಿಂದ ಹೊರಬಂದ ನನಗೆ, ಗೋಲ್ಡನ್ ಲೈಫಿನ ಇಳಿಸಂಜೆಯಲಿ ಯಾಕೋ ಹೈಸ್ಕೂಲಿನ ಸುಂದರ ನೆನಪುಗಳು ಕಣ್ಣ ಮುಂದೆ ಹಾದುಹೋದವು.
"ಬೆಸ್ಟ್ ದಿ ಶೋ ಮಸ್ಟ್ ಗೋ ಆನ್‌"

- ಮೌನೇಶ್ ಬಿ. ಗೊಡ್ರಿಹಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!