ಖ್ಯಾತ ಕವಿಯೊಬ್ಬ ಪತ್ನಿ ಜತೆ ಝೂಗೆ ಹೋಗಿದ್ದ. ಅಲ್ಲಿದ್ದ ಹೆಣ್ಣು ಚಿಂಪಾಂಜಿ, ಬೊನೊಳಗಿಂದಲೇ ಕವಿಗೆ ಲೈನ್ ಹೊಡೆಯಲು ಶುರುಮಾಡಿತು. ಸಲ್ಲಾಪದ ದನಿಯಲ್ಲಿ ಮೈ ಹಿಗ್ಗಿಸತೊಡಗಿತು. ಕಂಬಿಗಳು ತಡೆಯಿದ್ದರೂ ಕವಿಯ ಪಂಚೆಯನ್ನು ಮುದ್ದಿಸಿ, ಎಳೆಯತೊಡಗಿತು. ಇದನ್ನು ಗಮನಿಸಿದ ಹೆಂಡತಿ, ಝೂ ಕೀಪರ್ಗೆ ಹೇಳಿ, ಪತಿರಾಯರನ್ನು ಒಂದು ದಿನದ ಮಟ್ಟಿಗೆ ಬೋನಿನಲ್ಲಿ ಬಿಡಲು ಹೇಳಿ ಮನೆಗೆ ಹೋದಳು. ಮರುದಿನ ಬಂದು ನೋಡಿದಾಗ, ಬೋನಿನ ಒಂದು ಬದಿಯಲ್ಲಿ ಚಿಂಪಾಂಜಿ ಸುಮ್ಮನೆ ಕೂತಿದೆ. ಅದನ್ನು ನೋಡಿ ಹೆಂಡತಿ ಹೇಳಿದಳು, 'ಚೆನ್ನಾಗಿ ಕಾಣೋದು ಬೇರೆ, ಸಂಸಾರ ನಡೆಸೋದು ಬೇರೆ'!