ಕಲಾವಿದೆ, ರಾಜಕಾರಣಿ ಉಮಾಶ್ರೀ ಈ ನಾಡಿಗೆ ಕಲೆಯನ್ನಷ್ಟೇ ಹಂಚಲಿಲ್ಲ. ಸಿಗರೇಟನ್ನೂ ಹಂಚಿದ್ದಾರೆ. ಅದರಲ್ಲೂ ಮಾಸ್ಟರ್ ಹಿರಣ್ಣಯ್ಯನವರಿಗೆ ಉಮಾಶ್ರೀ ಹಲವು ಬಾರಿ ಸಿಗರೇಟು ಸಪ್ಲೈ ಮಾಡಿದ್ದರು!
ಮೊನ್ನೆ ಬೆಂಗಳೂರಿನಲ್ಲಿ ಹಿರಣ್ಣಯ್ಯನವರಿಗೆ 'ಅನಕೃ- ನಿರ್ಮಾಣ್ 2013' ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅಲ್ಲಿ ಉಮಾಶ್ರೀಯೇ ಸ್ವತಃ ಹೆಮ್ಮೆಪಟ್ಟುಕೊಂಡರು, 'ಹಿರಣ್ಣಯ್ಯ ನನಗೆ ತಂದೆ ಸಮಾನ. ಅವರಿಗೆ ಸಿಗರೇಟು ಸಪ್ಲೈ ಮಾಡಿದ ಈ ಕೈಗಳಿಂದಲೇ ಅನಕೃ ಪ್ರಶಸ್ತಿ ನೀಡಿ ಗೌರವಿಸಿದ್ದು ನನ್ನ ಭಾಗ್ಯ'. ಹಿರಣ್ಣಯ್ಯ ನಾಟಕ ಕಂಪನಿಯ ಟೆಂಟ್ ಪಕ್ಕದಲ್ಲೇ ಉಮಾಶ್ರೀ ಅವರ ಅಂಗಡಿಯೂ ಇತ್ತಂತೆ. ಸಿಗರೇಟನ್ನು ಸಪ್ಲೈ ಮಾಡುತ್ತಾ, ಹಿರಣ್ಣಯ್ಯನವರ ಅಭಿನಯವನ್ನು ಹತ್ತಿರದಿಂದ ವೀಕ್ಷಿಸುತ್ತಾ ಉಮಾಶ್ರೀಯೂ ಕಲಾವಿದೆಯಾಗಿ ಬೆಳೆದರು!