ಮಕರಂದ/ದೋಣಿ

ನ್ಯಾನೋ ಕಥೆಗಳು

Mainashree

ನದಿ
ಮಾತು ಮರೆತವರ ಊರಲ್ಲಿ ಹರಿಯುತ್ತಿರುವ ನದಿ ಈ ಊರಿನ ಮಾತಿಗೆ ಕಿವಿಯಾಗಿದೆ. ಮುಂದಿನ ಊರಿನ ಹಾಡಿಗೆ ಲಯವಾಗಿದೆ. ಅಸಂಖ್ಯೆ ಕಥೆಗಳನ್ನು ಹೊತ್ತು ಕಡಲಿನ ಒಡಲೊಳಗೆ ಲೀನವಾಗಿದೆ.
ಸಂಬಂಧ
ಸಂಬಂಧಗಳು ಎಷ್ಟು ಸಂಕೀರ್ಣ ಎಂಬುದು ತಿಳಿದದ್ದು, ಸತ್ತ ನಾಯಿಯ ಶವ ನೋಡಿ ಕುರಿ ಮರಿ ಅಳುತ್ತಿದ್ದನ್ನು ಕಂಡಾಗಲೇ.
ಆಹ್ವಾನ
ಸಂಜೆಯ ಸೊಬಗನ್ನು ಕಣ್ತುಂಬಿಕೊಂಡು ತುಂಬಾ ದಿನಗಳಾಯ್ತು. ನೀವೂ ಬನ್ನಿ, ಜೊತೆಯಲ್ಲಿ ನಿಮಗೆ ಬೇಕಾಗುವ ಬಾಟಲಿಗಳನ್ನೂ ಕರೆ ತನ್ನಿ.
ಕಲ್ಪನೆ
ಅಂದು ರಾತ್ರಿ ನಾನು- ಅವಳು ಇಬ್ಬರೇ... ಏನೇನೋ ಮಾಡಿದೆವು ಅಂತೆಲ್ಲ ಕಲ್ಪಿಸಿಕೊಳ್ಳಬೇಡಿ. ಸುಮ್ಮನೇ ಕೂತು ಮಾತಾಡಿದೆವು.
= ಎಚ್.ಕೆ. ಶರತ್

SCROLL FOR NEXT