ಮಕರಂದ/ದೋಣಿ

ಬರೆದ ನಂತರ ಸಿಗುವ ಖುಷಿ ದೊಡ್ಡದು

Mainashree

ಬರೆಯುವುದರಿಂದ ಕವಿ, ಸಾಹಿತಿಗಳಿಗೆ ಸಿಗುವುದೇನು? ತಮ್ಮ ಬರಹದ ಬಗ್ಗೆ ಅವರ ಅನಿಸಿಕೆಗಳೇನು ಎಂಬುದು ಹಲವರ ಪ್ರಶ್ನೆ. ಆ ಪ್ರಶ್ನೆಗೊಂದು ಪುಟ್ಟ ಉತ್ತರದ ರೂಪದಲ್ಲಿ ಜಿ.ಎಸ್.ಶಿವರುದ್ರಪ್ಪ ಅವರ ಅನಿಸಿಕೆಯ ಸಾಲುಗಳು ಇಲ್ಲಿವೆ...

ಓದುವುದು, ಬರೆಯುವುದು, ಸುಮ್ಮನೆ ಪ್ರವಾಸ ಮಾಡುವುದು, ಒಳ್ಳೆಯ ಸಂಗೀತವನ್ನು ಹೇಳುವುದು ಇವೆಲ್ಲಾ ನನಗೆ ತುಂಬಾ ಪ್ರಿಯವಾದ ಸಂಗತಿಗಳು. ಪಂಪ, ಕುಮಾರವ್ಯಾಸ, ವಚನಕಾರರು, ಬೇಂದ್ರೆ, ಕುವೆಂಪು ಎಲಿಯಟ್, ಏಟ್ಸ್, ಲಾರೆನ್ಸ್......ನನ್ನ ನೆಚ್ಚಿನ ಲೇಖಕರು. ಬರವಣಿಗೆ ಅನ್ನುವುದು ಒಂದು ರೀತಿಯಲ್ಲಿ ಹಿಂಸೆಯ ಕೆಲಸವಾದರೂ ಬರೆದ ನಂತರ ದೊರೆಯುವ ಸುಖ ಅಪೂರ್ವವಾದದ್ದು. ಇದುವರೆಗೆ ನಾನು ಬರೆದದ್ದು ತೃಪ್ತಿಯನ್ನು ಕೊಟ್ಟಿದೆ ಎಂಬುವುದಕ್ಕಿಂತ ಅತೃಪ್ತಿಯನ್ನು ಹುಟ್ಟಿಸಿರುವುದೇ ಹೆಚ್ಚು. ನನ್ನ ಬರವಣಿಗೆಯ ಬಗ್ಗೆ ನಾನು ಯಾವುದೇ ಭ್ರಮೆಗಳನ್ನೂ ಇರಿಸಿಕೊಂಡಿಲ್ಲ. ನಾನು ಬರೆದಿದ್ದರಲ್ಲಿ ಮೌಲಿಕವಾದದ್ದು ಒಂದಷ್ಟು ಇರಬಹುದು ಎಂದು ತಿಳಿದುಕೊಂಡಿದ್ದೇನೆ ಅಷ್ಟೆ...
= ಜಿ.ಎಸ್. ಶಿವರುದ್ರಪ್ಪ

SCROLL FOR NEXT