ಮಕರಂದ/ದೋಣಿ

ನ್ಯಾನೋ ಕಥೆಗಳು

Mainashree

ಆವರಿಸಿಕೊಂಡಿದ್ದ ಕಪ್ಪು ಮೋಡ ಕರಗಿದೆ ಅಥವಾ ಬಣ್ಣ ಬದಲಿಸಿದೆ. ಭೂಮಿಯ ನಿಯೋಗ ಬಾನಿಗೆ ತೆರಳಿದೆ.
ಪೂರ್ವಗ್ರಹ
ಅಪ್ಪಿಕೊಂಡದ್ದು ಒಂದು ಮುಖ. ಒಪ್ಪಿಕೊಂಡದ್ದು ಮತ್ತೊಂದು ಮುಖ. ಅವೆರಡೂ ಅವನ ಹೊಸ ಮುಖದ ರಕ್ಷಣೆಗೆ ನಿಂತಿವೆ.
ತೃಪ್ತಿ
ನದಿಯಾಗುವ ಹಂಬಲವಿಲ್ಲ. ತೀರವಾಗಿ ತೆಪ್ಪಗಿದ್ದು ಬಿಡುತ್ತೇನೆ. ಹರಿವ ನೀರಿಗೆ ಸ್ವರವಾಗಿ ಕರಗುತ್ತೇನೆ.
ತ್ಯಾಗ
ಹಣ್ಣು ಬಿಡುವ ಮರವಾಗುವ ಹಂಬಲ ಹೊತ್ತ ಸಸಿ ಗರಿಕೆಯ ಗೆಳೆತನ ಬಯಸಿ ತುದಿ ಚಿವುಟಿಕೊಂಡಿದೆ.
ಸಂಭ್ರಮ
ಅವಳ ಕಣ್ಣ ಮಂಪರಿನೊಳಗೆ ಈಗಷ್ಟೇ ಕಣ್ತೆರೆಯುತ್ತಿರುವ ಮುಂಜಾನೆ... ಬದುಕು ಇಂಥವೇ ಸಂಭ್ರಮಗಳ ಖಜಾನೆ.
ಪರಿಸ್ಥಿತಿ
ನಮ್ಮದು ನದಿ ನಡುವಲ್ಲಿ ತಟಸ್ಥವಾಗಿ ನಿಂತಿರುವ ತೆಪ್ಪದ ಮೇಲಿನ ಬದುಕು. ಗುರಿ ಇಲ್ಲ. ಬಹುಕಾಲ ಬಾಳಬೇಕೆಂಬ ಹಠವೂ ಇಲ್ಲ. ಒಡಲ ತುಂಬಿರುವುದು ವಿಷಾದವೊಂದೇ.
ಆಸೆ
ಸಾಯಲು ಬಂದವರು ಸಾಲಾಗಿ ನಿಂತಿದ್ದರು. ಸಾಲಿನಲ್ಲಿ ಕಡೆಯ ಸ್ಥಾನಕ್ಕೆ ಪೈಪೋಟಿ ಜಾರಿಯಲ್ಲಿತ್ತು.
= ಎಚ್.ಕೆ. ಶರತ್, ವಿದ್ಯಾನಗರ, ಹಾಸನ.

SCROLL FOR NEXT