ಹೊಸದಾಗಿ ಶಾಲೆಗೆ ಸೇರಿದ್ದ ಹುಡುಗನೊಬ್ಬ ಅಳುತ್ತಿರುವುದನ್ನು ಕಂಡ ಮಾಸ್ಟರು ಅವನನ್ನು ಕೇಳಿದರು, 'ಮಗೂ, ಯಾಕಪ್ಪ ಅಳ್ತಾ ಇದೀಯ? ಏನು ತೊಂದರೆ ಆಯ್ತು?'
ನನಗೆ ಸ್ಕೂಲ್‌ಗೆ ಹೋಗಲು ಇಷ್ಟವಿಲ್ಲ. ಆದರೂ ಅಪ್ಪ ಕೇಳ್ತಾ ಇಲ್ಲ. ಹದಿನೈದು ವರ್ಷ ಆಗುವವರೆಗೂ ನಾನು ಇದೇ ಸ್ಕೂಲ್‌ಗೆ ಬರ್ತಾ ಇರಬೇಕಂತೆ ಎಂದಿತು ಮಗು.
ಮಾಸ್ಟರು ತಕ್ಷಣವೇ ಹೇಳಿದರು: ನೀನು ಪುಣ್ಯವಂತ ಕಣೋ. ಹದಿನೈದು ವರ್ಷ ತುಂಬಿದ ತಕ್ಷಣ ನಿನ್ನ ಕಷ್ಟ ಕಳೆಯುತ್ತೆ. ನನ್ನನ್ನು ನೋಡು, 58 ವರ್ಷ ಆಗುವವರೆಗೂ ನಾನು ಇಲ್ಲಿಯೇ ಇರಬೇಕು.
=
ಗಂಡ -ಹೆಂಡತಿ ಶಾಪಿಂಗ್‌ಗೆ ಹೋಗಿದ್ದರು. ಹೆಂಡತಿ ಕೇಳಿದ್ದನ್ನೆಲ್ಲ ಖರೀದಿಸಿ, ಖರೀದಿಸಿ ಆ ಯಜಮಾನರಿಗೆ ರೋಸಿ ಹೋಗಿತ್ತು, ಆ ಕಾರಣದಿಂದಲೇ ಅವರು ಎತ್ತಲೋ ನೋಡುತ್ತ ಕುಳಿತಿದ್ದರು. ಕಾರು ಮನೆಯ ಹಾದಿಯಲ್ಲಿ ಸಾಗುತ್ತಿದ್ದಾಗ ಹೊರಗೆ ಇಣುಕಿದ ಆ ಹೆಂಗಸು-ಆಹಾ, ಚಂದ್ರ ಎಷ್ಟೊಂದು ಸುಂದರವಾಗಿದ್ದಾನಲ್ಲ ಎಂದು ಉದ್ಗರಿಸಿದಳು.
ಆಕೆಯ ಗಂಡ, ಅನ್ಯಮನಸ್ಕನಾಗಿ ಆಕಳಿಸುತ್ತ, ಹೆಂಡತಿಯ ಕಡೆಗೆ ತಿರುಗಿಯೂ ನೋಡದೆ ಕೇಳಿದ, ಎಷ್ಟಂತೆ ಅದರ ರೇಟು?
=
ಅವಳು: ನಿಮಗೆ ತುಂಬಾ ಇಷ್ಟವಾಗುವ, ಪದೇ ಪದೇ ನೆನಪಿಗೆ ಬರುವ ಒಂದು ಪುಸ್ತಕದ ಹೆಸರು ಹೇಳಿ........
ಇವಳು ನನ್ನ ಗಂಡನ ಚೆಕ್ ಪುಸ್ತಕ!
=
ನ್ಯಾಯಾಧೀಶ: ನೀನು ಕಾರನ್ನು ಯಾಕಯ್ಯ ಕದ್ದೆ?
ಆರೋಪಿ: ಕಾರು ಸ್ಮಶಾನದ ಮುಂದೆ ನಿಂತಿತ್ತು ಸ್ವಾಮಿ. ಅದರ ಮಾಲೀಕ ಸತ್ತು ಸ್ಮಶಾನ ಸೇರಿದ್ದಾನೆ ಎಂದುಕೊಂಡು ಕಾರನ್ನು ತಗೊಂಡು ಹೋಗಿಬಿಟ್ಟೆ ಸ್ವಾಮಿ..
=
ಮೇಸ್ಟ್ರು: ಗುಂಡಾ, ನಿನಗೆ ಒಂದು ಪ್ರಶ್ನೆ ಕೇಳುತ್ತೇನೆ, ಅದಕ್ಕೆ ಉತ್ತರ ಹೇಳಿದರೆ ಮತ್ತೆ ಪ್ರಶ್ನೆ ಕೇಳುವುದಿಲ್ಲ.
ಗುಂಡ: ಸರಿ ಸರ್, ಕೇಳಿ........
ಮೇಸ್ಟ್ರು: ಮನುಷ್ಯನಿಗಿರುವ ಅಂದಾಜು ತಲೆಗೂದಲಿನ ಸಂಖ್ಯೆ ಎಷ್ಟು?
ಗುಂಡ: ನಾಲ್ಕು ಲಕ್ಷ ಹದಿನೈದು ಸಾವಿರದ ಆರುನೂರಾ ಒಂಭತ್ತು ಸಾರ್.........
ಮೇಸ್ಟ್ರು: ಇಷ್ಟು ಖಚಿತವಾಗಿ ಹೇಗೆ ಹೇಳ್ತಿಯಾ...?
ಗುಂಡ: ಸಾರ್, ಎರಡನೇ ಪ್ರಶ್ನೆ ಕೇಳಲ್ಲ ಅಂದಿದ್ದೀರ.............!