ಆಡಲೇಬೇಕು, ಓಡಲೇಬೇಕು....ಸೋಲುವ ಸಲುವಾಗಿಯಾದರೂ!
ತಿರುವು
ಎಲ್ಲೋ ಕಳಚಿ ಬಿದ್ದ ಕೊಂಡಿ ಮತ್ತೆಲ್ಲಿಗೋ ಕೂಡಿಕೊಂಡಿತು. ಸೋತು ಸೊರಗಿದ್ದ ಜೀವ ತುಸು ಚೇತರಿಸಿಕೊಂಡಿತು.
ಬದುಕು
ಒಮ್ಮೊಮ್ಮೆ ಅಟ್ಟಾಡಿಸಿಕೊಂಡು ಬಂದು ಇಕ್ಕುವ ನವೋಲ್ಲಾಸ... ಕೆಲವೊಮ್ಮೆ ಅನಾಯಾಸವಾಗಿ ಗಂಟು ಬೀಳುವ ಆಯಾಸ... ಬದುಕು ಅಂದುಕೊಂಡಿದ್ದಕ್ಕಿಂತಲೂ ತುಸು ಹಿತವಾದ ಸೆರೆವಾಸ.
ಹುಟ್ಟು
ಕೂಡಿಡುವ ಉಮೇದಿನಲ್ಲಿ ಕಳಕೊಂಡದ್ದೆಷ್ಟೋ... ಕಳಕೊಳ್ಳುವ ಹಂಬಲದಲ್ಲಿ ಅಪ್ಪಿಕೊಂಡದ್ದೆಷ್ಟೋ... ಪದೇ ಪದೇ ಲೆಕ್ಕ ತಪ್ಪುವ ಕೂಡಿ ಕಳೆಯುವ ಆಟ ಆಡಲು ಸಿಕ್ಕಿದೆ ನಮಗೂ ಒಂದು ಅವಕಾಶ.