ವಿ.ಹೇಮಂತಕುಮಾರ್, ಬೆಂಗಳೂರು
ಮರ ಸುತ್ತಿದರೆ ಮಕ್ಕಳಾಗುತ್ತವೆಯೇ ?
- ಆಗಬಹುದು, ಆಸ್ಪತ್ರೆ, ದೇವಸ್ಥಾನ ಸುತ್ತುವುದಕ್ಕಿಂತ ಖರ್ಚು ಕಡಿಮೆ !
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
ರಾಜಕಾರಣಿಗಳೇಕೆ ಮಠಗಳಿಗೇ ಹೆಚ್ಚು ಹಣವನ್ನು ದಾನವಾಗಿ ಕೊಡ್ತಾರೆ ?
- ಮಠಕ್ಕೆ ಕೊಟ್ಟಿದ್ದು 'ಮತ' ಕ್ಕೆ ಕೊಟ್ಟ ಹಾಗೆ !
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಹಾಲು ಸಕ್ಕರೆ ಸೇರಿದರೆ ಟೀ, ಪ್ರೀತಿ ಪ್ರೇಮ ಸೇರಿದರೆ ?
- ಅಂಡರ್ ಟ್ರೀ !
ಕೆ.ಶ್ರೀನಿವಾಸರಾವ್, ಹರಪನಹಳ್ಳಿ
ಸಿನಿಮಾ ಮತ್ತು ಟಿವಿಗಳಲ್ಲಿ ಕ್ಯಾಮೆರಾ ಕಂಡ ತಕ್ಷಣ ಪ್ರೇಕ್ಷಕರು ಟಾಟಾ ಮಾಡುವುದೇಕೆ ?
- ಅದೇ ರಿಯಾಲಿಟಿ ಷೋ !
ಪೇಂಟರ್ ಪಾಪು, ಸಂತೇಮರಹಳ್ಳಿ
ಈ ಹುಡುಗರು ಹುಡುಗಿಯರಿಗಾಗಿ ಏನೆಲ್ಲಾ ಮಾಡುತ್ತಾರೆ ಯಾಕೆ ?
- 'ಟ್ವೆಂಟಿ - ಟ್ವೆಂಟಿ' ಮ್ಯಾಚ್ ಆಡಬೇಕೇ ಹೊರತು, ಟ್ವೆಂಟಿ ಸಿಕ್ಸ್ಟೀ, ಟ್ವೆಂಟಿ ಸೆವೆಂಟಿ ಮ್ಯಾಚ್ ಆಡಕ್ಕಾಗುತ್ತಾ ?
ಜಿ.ಆರ್.ಆದಿನಾರಾಯಣಮುನಿ,
ಶ್ರೀಕೋಡಿಹಳ್ಳಿ ಮಠ
ದೀಪದ ಕೆಳಗೆ ಕತ್ತಲೆ ಇರಲೇಬೇಕೆಂಬ ನಿಯಮವೇನೇದರೂ ಇದೆಯೇ ?
- ಬೆತ್ತಲೆಯಾಗಿಯೂ ಇರಬಹುದು !
ಬಾನಂದೂರು ಮಂಜುಳಾ, ದೇವದುರ್ಗ
ಚಾಂಪಿಯನ್ ಆಟಗಾರ್ತಿಯರಿಗೆ ದೇಹ ಸೌಂದರ್ಯ ಮುಖ್ಯವಲ್ಲ ಎಂದು ಸಾನಿಯಾ ಮಿರ್ಜಾ ಹೇಳಿದ್ದಾಳಲ್ಲ?
- ಇದೊಂದು ರೀತಿ ಓಪನ್ ಸೀಕ್ರೆಟ್ !
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಕನಸುಗಳಿಂದ ಹೊಟ್ಟೆ ತುಂಬುವಂತಿದ್ದರೆ ಹೇಗಿರುತ್ತಿತ್ತು ?
- ನಿದ್ರೆಯಲ್ಲಿ ಗೊರಕೆ ಬದಲು ತೇಗು ಬರ್ತಿತ್ತು !