ಅಮ್ಮ ಮತ್ತು ಅಪ್ಪ
ಹೆಸರು ಮಮ್ಮಿ ಡ್ಯಾಡಿ
ಅಮ್ಮ ಎಂದರೆ ಕೋಪ
ಅಯ್ಯೊ ಕನ್ನಡ ಪಾಪ
ನನ್ನ ಅಣ್ಣ ಪದ್ದು
ನನ್ನ ಕಂಡರೆ ಮುದ್ದು
ಹೇಳೋಂಗಿಲ್ಲ ಚಾಡಿ
ಬಂದೇ ಬಿಡ್ತಾನೆ ಓಡಿ
ಕೋಪ ಬಂದ ಪದ್ದು
ಕೊಡ್ತಾನೆ ನನಗೆ ಗುದ್ದು
ಮಮ್ಮಿ ಅಮ್ಮ ಅಜ್ಜಿ
ದಿನವು ನನಗೆ ಬಜ್ಜಿ
ಅಜ್ಜಿ ಹೆಸರು ಭಾಮಾ
ಮಾತು ಮಾತಿಗೂ ರಾಮಾ
ನನ್ನ ಟೀಚರ್ ರೂಪ
ಏಕೋ ಏನೋ ಕೋಪ
ಕೈಯಲಿ ಸದಾ ಕೋಲು
ನಿಲ್ಲಲೆ ಬೇಕು ಸಾಲು
ನಾನು ಯಾರು ಗೊತ್ತೆ
ಹೇಳ್ತೀನಿ ಕೇಳಿ ಮತ್ತೆ
ನನ್ನ ಹೆಸರು ಸೀನು
ಎಲ್ಲಕು ಪ್ರಶ್ನೆ ಏನು
ಓದೋದು ಔ.ಓ.ಎ.
ಪುಸ್ತಕ ಐದು ಓ.ಎ.