ಚಿರಪ್ರಭ, ನಂಜನಗೂಡು
ಬುದ್ಧಿಜೀವಿಗಳ ಮಾರ್ಗದರ್ಶನ ಸಿದ್ದು ಸರ್ಕಾರವನ್ನು ಭದ್ರಗೊಳಿಸುವುದೇ, ಅಭದ್ರಗೊಳಿಸುವುದೇ?
-ಪಕ್ಷ ಛಿದ್ರಗೊಳಿಸದಿದ್ದರೆ ಸಾಕು ಅಂತಿದ್ದಾರೆ ಪರಮೇಶ್ವರ್!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಪತ್ರ ಬರೆಯುವುದಕ್ಕೂ, ಎಸ್‌ಎಂಎಸ್ ಕಳಿಸಿ ಪ್ರತಿಕ್ರಿಯೆ ನಿರೀಕ್ಷಿಸುವುದಕ್ಕೂ ವ್ಯತ್ಯಾಸವೇನು?
-ಪೋಸ್ಟ್‌ಮ್ಯಾನ್‌ಗೂ ಪೋಸ್ಟ್‌ಪೇಯ್ಡ್‌ಗೂ ಇರುವಷ್ಟೇ ವ್ಯತ್ಯಾಸ!
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
ಸಾವಿನಾಚೆಗೂ ಬದುಕು ಇದ್ದಿದ್ದರೆ?
- ಕೆಲವರು ಆತ್ಮಹತ್ಯೆ ಮಾಡ್ಕೊಳ್ಳೋಕೆ ಹೆದರುತ್ತಿದ್ದರು!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಂದೊಮ್ಮೆ ಪ್ರತಿರಾತ್ರಿ ಹುಣ್ಣಿಮೆಯಾದರೆ ಹೇಗಿರುತ್ತಿತ್ತು?
-ಎಲ್ಲರೂ ಅಮವಾಸ್ಯೆಯ ಕತ್ತಲನ್ನೇ ಇಷ್ಟಪಡುತ್ತಿದ್ದರು!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
ಸುಂದರವಾದ ಕನಸುಗಳು ಬೀಳಬೇಕಾದರೆ ಯಾವ ದಿಕ್ಕಿಗೆ ತಲೆಹಾಕಿ ಮಲಗಬೇಕು?
- ನಿಂತುಕೊಂಡೇ ನಿದ್ರಿಸಬೇಕು!
- ಘಾಟಿ