ಚಿಕ್ಕ ಮೀಟಿಂಗ್
ಮಗ: ಅಪ್ಪಾ... ಇವತ್ತು ಸ್ಕೂಲಲ್ಲಿ ಒಂದು ಚಿಕ್ಕ ಮೀಟಿಂಗ್ ಇದೆ. ನೀನು ಬರ್ತೀಯಾ?
ಅಪ್ಪ: ಚಿಕ್ಕ ಮೀಟಿಂಗ್ ಅಂದ್ರೆ?
ಮಗ: ಚಿಕ್ಕ ಮೀಟಿಂಗ್ ಅಂದ್ರೆ ನಾನು, ನೀನು ಮತ್ತು ಪ್ರಿನ್ಸಿಪಾಲ್ ಅಷ್ಟೇ ಜನರದ್ದು.
ಪಿಜ್ಜಾ ಪಾರ್ಸೆಲ್
ಜೋರು ಮಳೆ. ಗುಡುಗು ಸಿಡಿಲು. ಆತ ಅರ್ಧಂಬರ್ಧ ಒದ್ದೆಯಾಗಿ ನಡುಗುತ್ತಾ ಪಿಜ್ಜಾ ಕಾರ್ನರೊಳಗೆ ಪ್ರವೇಶಿಸಿದ.
'ಗುರು ಅರ್ಜೆಂಟ್ ಒಂದು ಪಿಜ್ಜಾ ಪಾರ್ಸೆಲ್ ಕೊಡಪ್ಪ...'
ವೇಟರ್: ಸಾರ್ ನಿಮಗೆ ಮದುವೆ ಆಗಿದ್ಯಾ?
ಆತ: (ರೇಗುತ್ತ) ಆಹಾ ಏನ್ ಪ್ರಶ್ನೆ ಅಂತ ಕೇಳಿಬಿಟ್ಯೊ..? ಈ ಪಾಟಿ ಮಳೇಲಿ ಯಾವ ತಾಯಿ ತನ್ನ ಮಗನ್ನ ಪಿಜ್ಜಾ ತರೋಕೆ ಕಳಿಸ್ತಾಳೆ ಗುರು?
ಎರಡು ಆಯ್ಕೆ
ಮಗಳು: ಅಮ್ಮಾ ಅಮ್ಮಾ... ನಿಂಗೆ ಎರಡು ಚಾಯ್ಸ್. ನೀ ನಂಗೆ ಬ್ಲಾಕ್‌ಬೆರಿ ಕೊಡಿಸ್ತೀಯೋ ಅಥವಾ ಆ್ಯಪಲ್ ಕೊಡಿಸ್ತೀಯೋ?
ಅಮ್ಮ: ಇಷ್ಟೊತ್ತಿಗೆ ಮಾರ್ಕೆಟ್ಟಿಗೆ ಹೋಗೋಕ್ಕಾಗಲ್ಲ... ಸದ್ಯಕ್ಕೆ ಮೂಸಂಬಿ ಇದೆ. ಅದನ್ನ ಫಸ್ಟು ಖಾಲಿ ಮಾಡು.