ಸಾಪ್ತಾಹಿಕಪ್ರಭ

ವೀರಾವೇಷ

ಬೀದರಿನಲ್ಲಿ ದೇಶದ ವೈವಿಧ್ಯಮಯ ಕಲಾ ಸಂಸ್ಕೃತಿಯನ್ನು ನೃತ್ಯದ ಮೂಲಕ ಪರಿಚಯಿಸಲಾಯಿತು. ಇಂಥದ್ದೊಂದು ಪವಾಡ ಸೃಷ್ಟಿಸಿದ್ದು ಮೂಡಬಿದರೆಯ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಭವ್ಯ ಕಾರ್ಯಕ್ರಮ...

ಬೀದರಿನ ಆ ಸಂಜೆ ರಸಮಯವಾಗಿತ್ತು. ಚುಮುಚುಮು ಚಳಿಯ ಮಧ್ಯ ಕಿಕ್ಕಿರಿದು ಸೇರಿದ್ದ ಜನಸ್ತೋಮ. ವೈಭವಪೂರಿತ ವೇದಿಕೆ. ದೇಶದ ವೈವಿಧ್ಯಮಯ ಕಲಾ ಸಂಸ್ಕೃತಿಯನ್ನು ನೃತ್ಯದ ಮೂಲಕ ಪರಿಚಯಿಸಲಾಯಿತು. ಇಂಥದ್ದೊಂದು ಪವಾಡ ಸೃಷ್ಟಿಸಿದ್ದು ಮೂಡಬಿದರೆಯ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಭವ್ಯ ಕಾರ್ಯಕ್ರಮ.
ಬಿಸಿಲೂರಿನವರಿಗೆ ಕಲೆಯ ಅಂತರಾಳವನ್ನು ಪರಿಚಯಿಸಿದರು ನುಡಿಸಿರಿಯ ಪುಟ್ಟ ಮಕ್ಕಳು, ಕಲಾವಿದರು. ಹಸಿ ಬರ, ಒಣ ಬರ, ರಾಜಕೀಯ ಪರಚಾಟ, ಹೋರಾಟಗಳನ್ನಷ್ಟೇ ಕಂಡಿದ್ದ ಇಲ್ಲಿನ ಜನ ವಿರಾಸತ್‌ನ ಈ ಅದ್ಭುತ ಕಾರ್ಯಕ್ರಮ ಕಂಡು ಹಿಗ್ಗಿದರು.
ಗಣೇಶ ಮೈದಾನದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆರಂಭದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನಕ್ಕೇ ಮಾರುಹೋದ ಇಲ್ಲಿನವರು ಕಣ್ಣು ಮಿಟುಕಿಸದೇ ವೇದಿಕೆಯತ್ತ ಚಿತ್ತ ನೆಟ್ಟಿದ್ದರು. ಅದರಲ್ಲೂ ಮಣಿಪುರಿ ಸ್ಟಿಕ್ ಡ್ಯಾನ್ಸ್ ಎಲ್ಲರನ್ನೂ ವಿಚಲಿತಗೊಳಿಸಿದರೆ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ ಇಡೀ ಸಾಂಸ್ಕೃತಿಕ ಸಮಾಗಮದ ವೈಶಿಷ್ಟ್ಯತೆಗೆ ಸಾಕ್ಷಿ ಎಂಬಂತಿತ್ತು. ಬಡಗುತಿಟ್ಟು ಯಕ್ಷಪ್ರಯೋಗ- ದಶಾವತಾರ, ಒಡಿಸ್ಸಿ ನೃತ್ಯ, ಭರತನಾಟ್ಯ- ನವದುರ್ಗೆಯರು, ಮಹಾರಾಷ್ಟ್ರದ ಲಾವಣಿ ನೃತ್ಯ, ಮಣಿಪುರಿ ದೋಲ್ ಚಲಮ್, ಕಿರು ನಾಟಕ- ದೇವ ವೃದ್ಧರು, ಕೇರಳದ ಒಪ್ಪಣಂ, ಕಥಕ್ ನೃತ್ಯ, ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹದ ಬೇಟೆ ನೃತ್ಯ ಸೇರಿದಂತೆ ಅನೇಕ ಪ್ರಸಂಗ ನೃತ್ಯಗಳು ಬಹಳ ಮೆಚ್ಚುಗೆಯಾದವು.

- ಅಪ್ಪಾರಾವ್ ಸೌದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮದ್ದೂರಿನಲ್ಲಿ ಕಲ್ಲು ತೂರಾಟ: ಲೈಟ್ ಆಫ್ ಮಾಡಿರುವುದು ಅನುಮಾನ ಮೂಡಿಸುತ್ತಿದೆ - IGP

Nepal protest: KP Sharma Oli ರಾಜಿನಾಮೆ; ಮನೆ, ಸಂಸತ್ ಕಟ್ಟಡಕ್ಕೆ ಬೆಂಕಿ; ನೇಪಾಳ ತೊರೆದ ಪ್ರಧಾನಿ? Video

Nepal protest: ಮಂತ್ರಿಯನ್ನೇ ಅಟ್ಟಾಡಿಸಿ ಹೊಡೆದ ಪ್ರತಿಭಟನಾಕಾರರು, Video viral

Indore: ಬುಲೆಟ್ ರೈಲು ಪವರ್ ಪಾಯಿಂಟ್ ಪ್ರಸ್ತುತಿಯ ಆಚೆ ಬರುತ್ತಲೇ ಇಲ್ಲ; ಬಿಜೆಪಿ ಮೇಯರ್ ಪುತ್ರನ ಕಿಡಿ! ಕೈ ನಾಯಕರ ಮೆಚ್ಚುಗೆಯ Video

'Chamundi Hill Chalo': ಮಾಜಿ ಸಂಸದ Pratap Simha ಸೇರಿ ಹಲವು ಬಿಜೆಪಿ ನಾಯಕರು ವಶಕ್ಕೆ, ವಿರೋಧಿಸಲು ಬಂದವರಿಗೂ ಪೊಲೀಸ್ ಶಾಕ್!

SCROLL FOR NEXT