ಕಲಾವಿದ ಕಲಾದೇವಿಯ ಆರಾಧಕ. ಅವನ ಕುಂಚದಿಂದ ಅರಳಿ, ಹೊರಳಿ ನಿಂತ ಚಿತ್ರಗಳು ಎಷ್ಟೋ ಸಲ ಅವನನ್ನೇ ಅಚ್ಚರಿಗೊಳಿಸುತ್ತವೆ. ಎಲ್ಲೋ ಒಂದುಕಡೆ ಆ ಚಿತ್ರಗಳು ಅವನ ಭಕ್ತಿಯ ಪ್ರತಿರೂಪಗಳೂ ಹೌದು. ಇಲ್ಲಿ ಈ ಚಿತ್ರಗಳನ್ನು ರಚಿಸಿ ಜೀವ ತುಂಬಿದವರು ಮುನಿಮೋಹನ್. ಇವರು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಕಲಾ ಉಪನ್ಯಾಸಕರು. ಇವರು ತಮ್ಮ ಮನೆಯಲ್ಲೇ 'ಕಲಾಸೌಧ' ನಿರ್ಮಿಸಿದ್ದಾರೆ. ಮೋಹನ್ ಹತ್ತು ಹಲವು ಕಡೆ 'ಚಿತ್ರಪ್ರದರ್ಶನ' ನಡೆಸಿದ್ದಾರೆ. ಇವರ ಎಲ್ಲ ಚಿತ್ರಗಳು ಎಲ್ಲರ ಮನಸೂರೆಗೊಳ್ಳುವುದಲ್ಲದೆ ಅದರದೇ ಆದ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ.
-ಚಿತ್ರ, ಲೇಖನ: ಬಳಕೂರು ವಿ.ಎಸ್. ನಾಯಕ