ಸಾಪ್ತಾಹಿಕಪ್ರಭ

ಯಾರಿಗೆ ನೊಬೆಲ್?

ಸೆಪ್ಟೆಂಬರ್ ಬಂತೆಂದರೆ ಸಾಕು, ವಿಶ್ವ ಸಾಹಿತ್ಯ ಲೋಕ ಗರಂ ಆಗಿಬಿಡುತ್ತದೆ. ಅಕ್ಟೋಬರ್‌ನಲ್ಲಿ ಪ್ರಕಟವಾಗುವ ಸಾಹಿತ್ಯ ನೊಬೆಲ್ ಪ್ರಶಸ್ತಿ ಯಾರಿಗೆ ಬರಬಹುದು, ಯಾರಿಗೆ ಬರಬೇಕು ಎಂಬ ಚರ್ಚೆಗಳಲ್ಲಿ ಎಲ್ಲರೂ ಬ್ಯುಸಿಯಾಗುತ್ತಾರೆ. ಈ ವರ್ಷವೂ ಹಾಗೇ.
ಈ ಬಾರಿ ಬಾಜಿಯಲ್ಲಿ ಮುಂದಿರುವವನು ಜಪಾನಿನ ಕಾದಂಬರಿಕಾರ ಹರೂಕಿ ಮುರಾಕಮಿ. ಕಳೆದ ಸಲವೂ ಇವನ ಹೆಸರು ಮುನ್ನೆಲೆಗೆ ಬಂದು ಬಿದ್ದುಹೋಗಿತ್ತು. ಈ ಸಲವೂ ತಪ್ಪಬಾರದೆಂದೇನಿಲ್ಲ. ಈತನ ಜತೆ ಸ್ಪರ್ಧೆ ಒಡ್ಡಿರುವವನು ಜಾಯ್ಸ್ ಕರೋಲ್ ಓಟ್ಸ್. ಹಂಗೇರಿಯದ ಕಾದಂಬರಿಕಾರ ಪೀಟರ್ ನಡಾಸ್ ಇನ್ನೊಬ್ಬ.
ಕಳೆದ ಇಪ್ಪತ್ತು ವರ್ಷಗಳಿಂದ ಅಮೆರಿಕದ ಒಬ್ಬ ಸಾಹಿತಿಗೂ ನೊಬೆಲ್ ಒಲಿದಿಲ್ಲ. 1993ರಲ್ಲಿ ಟೋನಿ ಮಾರಿಸನ್ ಪ್ರಶಸ್ತಿ ಪಡೆದದ್ದೇ ಕೊನೆ. ಸ್ವೀಡಿಷ್ ಅಕಾಡೆಮಿ ಅಮೆರಿಕದ ಲೇಖಕರ ಬಗ್ಗೆ ಪೂರ್ವಗ್ರಹ ಹೊಂದಿದೆ ಎಂಬ ಆಪಾದನೆ ಇದೆ. ಅದನ್ನು ತೊಡೆದುಕೊಳ್ಳಲೂ ಅಕಾಡೆಮಿ ಪ್ರಯತ್ನಿಸಬಹುದೋ ಏನೋ.
ಅಂತೂ ನಮ್ಮ ಭಾರತದ ಒಬ್ಬ ಲೇಖಕನೂ ನಿರೀಕ್ಷೆಯ ಪಟ್ಟಿಯಲ್ಲೂ ಇಲ್ಲ. ಏನ್ ದರಿದ್ರ ಪ್ರಶಸ್ತೀರೀ ಅದು!(ದ್ರಾಕ್ಷಿ ಹುಳಿ!)

ದಿಟ್ಟೆ ಇನ್ನಿಲ್ಲ
ಸುಶ್ಮಿತಾ ಬ್ಯಾನರ್ಜಿ ಊಹಿಸುತ್ತಿದ್ದುದು ನಿಜವಾಗಿಯೇ ಬಿಟ್ಟಿದೆ. ತಮ್ಮ ಕಾದಂಬರಿ 'ಕಾಬೂಲಿವಾಲರ್ ಬಂಗಾಲಿ ಬೌ' ಚಲನಚಿತ್ರವಾದರೆ, ತಾವು ಕುಟುಂಬ ಸಮೇತ ಅಫಘಾನಿಸ್ತಾನದಲ್ಲಿ ಬದುಕುವಂತಿಲ್ಲ ಎಂದು ಹಿಂದೆಯೇ ಹೇಳಿಕೊಂಡಿದ್ದರು. ಗುರುವಾರ ಅವರನ್ನು ತಾಲಿಬಾನಿಗಳು ಕೊಂದುಹಾಕಿದ್ದಾರೆ. ಇದು ಅಭಿವ್ಯಕ್ತಿ, ಮಾನವೀಯತೆ ಎಲ್ಲವುಗಳ ಮೇಲೂ ತಾಲಿಬಾನಿಗಳು ನಡೆಸಿದ ದೌರ್ಜನ್ಯ.

ಅಫಘಾನಿಸ್ತಾನದ ಉದ್ಯಮಿಯ ಪತ್ನಿಯಾಗಿ ಅಲ್ಲಿಗೆ ಹೋದ ಮೇಲೆ ಆಕೆ ಅನುಭವಿಸಿದ ಯಾತನೆಗಳು ಒಂದೆರಡಲ್ಲ. ಹೆಂಗಸರು ಹೊರಗೆ ಕಾಲಿಡುವುದನ್ನು ತಾಲಿಬಾನಿಗಳು ನಿಷೇಧಿಸಿದ್ದರು. ಅಂಥ ಸಂದರ್ಭದಲ್ಲೇ ಗೈನಕಾಲಜಿಸ್ಟ್ ಆಗಿದ್ದ ಈಕೆ ಕ್ಲಿನಿಕ್ ತೆರೆದು ಮಹಿಳೆಯರಿಗೆ ತಿಳಿವಳಿಕೆ ಬೋಧಿಸಿಲಾರಂಭಿಸಿದ್ದರು. ಇದು ತಾಲಿಬಾನಿಗಳ ಕಣ್ಣನ್ನು ಕೆಂಪು ಮಾಡಿತು. ಈಕೆಗೆ ಮರಣದಂಡನೆ ವಿಧಿಸಲಾಯ್ತು. ಅದು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಪಲಾಯನ ಮಾಡಿದರು. ತಮ್ಮ ಅನುಭವಗಳ ಬಗ್ಗೆ ಇವರು ಬರೆದುಕೊಂಡ ಕೃತಿ ಬೆಸ್ಟ್‌ಸೆಲ್ಲರ್ ಆಯ್ತು. ಮನಿಶಾ ಕೊಯಿರಾಲಾ ಹೀರೋಯಿನ್ ಆಗಿ ಹಿಂದಿ ಚಿತ್ರ ಕೂಡ ಆಯ್ತು. ಪರಿಸ್ಥಿತಿ ತಿಳಿಯಾಗಿದೆ ಎಂದು ಭಾವಿಸಿ ಇತ್ತೀಚೆಗೆ ಸುಶ್ಮಿತಾ ಅಫಘಾನಿಸ್ತಾನಕ್ಕೆ ಮರಳಿದ್ದರು. ಆದರೆ ತಾಲಿಬಾನಿಗಳು ಹೊಂಚು ಹಾಕಿ ತಮ್ಮ ಬಲಿ ಪಡೆದೇಬಿಟ್ಟರು.
'ಕಾಬೂಲಿವಾಲಾನ ಬಂಗಾಲಿ ಹೆಂಡತಿ' ಕನ್ನಡಕ್ಕೂ ಬಂದಿದೆ. ಮೈ ರೋಮಾಂಚನಗೊಳಿಸುವ ಓದು ಅದು.

ಹಾಯಿಕು
ಹೂವಿಂದ ಹೂವಿಗೆ
ಹಾರುವ ಹೂವನ್ನು
ಹೂವು ನೋಡಿದೆ

ಬಣ್ಣಗಳಿಗೆ ನಿದ್ದೆ
ಕನಸಿನಲ್ಲಿ
ಮನುಷ್ಯರು

ನವಿಲು ಗರಿ
ಬಿಡಿಸಿದರೆ
ಸಾವಿರ ಚಿಟ್ಟೆಗಳು

ಮಕರಂದಕ್ಕೆ
ಜೇನುಹುಳದ
ಚುಂಬನದಾಸೆ

-ಕೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ