ಸಾಪ್ತಾಹಿಕಪ್ರಭ

ರೇಖಾ ಗಣಪ

ಗಣಪತಿ, ಕಲಾವಿದರಿಗೆ ನಿತ್ಯ ಸ್ಫೂರ್ತಿ. ಅಕ್ಷರ, ರೇಖೆ, ನಾದ, ರೂಪ, ದೃಶ್ಯ... ಎಲ್ಲೆಡೆಯೂ ಆತ ಪ್ರಥಮ ವಂದ್ಯ. ಹೀಗೆ ಕಲೆಗಾರರ ಕಣ್ಣಲ್ಲೂ ಆಸ್ತಿಕರ ಕಣ್ಣಲ್ಲೂ ಮಹಾನಾಯಕನಾದ ಈತನ ಸ್ಫೂರ್ತಿಯಿಂದ ಮಿಂಚಿದ ಕೆಲ ಕಲಾಕೃತಿಗಳು ಇಲ್ಲಿವೆ.

ಗುಲ್ಬರ್ಗದ ಸೃಜನಶೀಲ ಕಲಾವಿದ ಬಸವರಾಜ ಕಲೆಗಾರ್ ಅವರೂ ತಮ್ಮ ರೇಖೆಗಳಲ್ಲಿ ವಿಭಿನ್ನ ರೂಪಗಳ ಗಣೇಶನನ್ನು ಸೆರೆಹಿಡಿದಿದ್ದಾರೆ. ಗಣಪ ಇಲ್ಲಿ ಸಾಂಕೇತಿಕ, ಪ್ರತಿ ರೇಖೆಯಲ್ಲೂ ಸಮಾಜಕ್ಕೊಂದು ಸಂದೇಶ ಸಾರುವ ಜಾಣ್ಮೆ. ತುಂಬ ಸರಳವೆನಿಸಿದರೂ ಭಾವನಾತ್ಮಕ.

ಟ್ರೇಸಿಂಗ್ ಹಾಳೆಯಲ್ಲಿ ಮಾರ್ಕರ್, ಸಿಡಿ ಬಳಸಿ ರೇಖಾ ಗಣಪನ ಸೃಷ್ಟಿ. ವಕ್ರ, ಸರಳ, ನೇರ, ವೃತ್ತ, ಚಲನಾತ್ಮಕ ಹೀಗೆ ಹತ್ತು ಹಲವು ರೇಖೆಗಳಲ್ಲೇ ಗಣಪ ಮೈದಳೆದ ಪರಿಯನ್ನು ನೋಡಿಯೇ ಆನಂದಿಸಬೇಕು. ತಲೆ ಮೇಲೆ ಹ್ಯಾಟ್ ತೊಟ್ಟ ಮಾಡರ್ನ್ ಗಣಪ, ಕೈಯಲ್ಲಿ ಡಮರು ಹಿಡಿದ ನೃತ್ಯ ಗಣಪ... ಹೀಗೆ ವೈವಿಧ್ಯ.

ಶಹಾಪುರ ತಾಲೂಕಿನ ಕೊಂಕಲ್ ಗ್ರಾಮದ ಬಸವರಾಜ ಕಲೇಗಾರ್ ಹಂಪಿ ಕನ್ನಡ ವಿವಿಯಲ್ಲಿ ಚಿತ್ರಕಲೆ ಎಂಎ ಪದವೀಧರ. ಪ್ರಸ್ತುತ ಗುಲ್ಬರ್ಗ ವಿವಿ ದೃಶ್ಯಕಲಾ ವಿಭಾಗದಲ್ಲಿ ಪಿಎಚ್‌ಡಿ ಸಂಶೋಧನೆ. ರಾಜ್ಯದೆಲ್ಲೆಡೆ 20ಕ್ಕೂ ಹೆಚ್ಚು ಕಲಾ ಪ್ರದರ್ಶನ. ಸಂಪರ್ಕ: 9980780144.
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ