ಯುವಜನ/ಮಕ್ಕಳು

ಫೇಸ್‌ಬುಕ್‌ನಲ್ಲಿ ಬಾಸ್ ಖಾಸಾ ಆಗಲ್ಲ!

ಫೇಸ್‌ಬುಕ್‌ನಲ್ಲಿ ಬಹುತೇಕರು ಒಬ್ಬ ವ್ಯಕ್ತಿಯನ್ನು ಗೆಳೆಯರನ್ನಾಗಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರಂತೆ! ಅವರ್ಯಾರು ಗೊತ್ತೇ?..

ಫೇಸ್‌ಬುಕ್‌ನಲ್ಲಿ ಬಹುತೇಕರು ಒಬ್ಬ ವ್ಯಕ್ತಿಯನ್ನು ಗೆಳೆಯರನ್ನಾಗಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರಂತೆ! ಅವರ್ಯಾರು ಗೊತ್ತೇ?
ಬೇರಿನ್ಯಾರೂ ಅಲ್ಲ. ಬಾಸ್! ಹೌದು. ಬಹುತೇಕರು ಫೇಸ್‌ಬುಕ್‌ನಲ್ಲಿ ಗೆಳೆಯರ ಪಟ್ಟಿಯಲ್ಲಿ ತಮ್ಮ ಬಾಸ್ ಇರುವುದನ್ನು ಇಷ್ಟಪಡುವುದಿಲ್ಲವಂತೆ. ಇತ್ತೀಚೆಗೆ ನಡೆದ ಅಧ್ಯಯನವೊಂದು ಈ ವಿಚಾರ ಬಹಿರಂಗಪಡಿಸಿದೆ. ಅದರಂತೆ ಶೇ.81ರಷ್ಟು ಮಂದಿ ತಮ್ಮ ಬಾಸ್‌ಗೆ ಫ್ರೆಂಡ್‌ಶಿಪ್ ರಿಕ್ವೆಸ್ಟ್ ಕಳುಹಿಸಲು ಹಿಂದೇಟುಹಾಕುತ್ತಾರಂತೆ. ಇಂಥ ಯೋಚನೆ ಮಹಿಳೆಯರಿಗಿಂತಲೂ ಪುರುಷರಿಗೇ ಹೆಚ್ಚಂತೆ. ಬಾಸ್ ಜತೆ ಒಂದು ಪೆಗ್ ಬೇಕಾದ್ರೆ ಹಾಕಲು ಸಿದ್ಧವಾಗಿರೋರು ಫೇಸ್‌ಬುಕ್‌ನಲ್ಲಿ ಮಾತ್ರ ಅವರನ್ನು ದೂರ ಇಡೋದು ಏಕೆ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಅದಕ್ಕೆ ಅವರು ಕೊಡುವ ಉತ್ತರ ಅಷ್ಟೇ ಇಂಟರೆಸ್ಟಿಂಗ್ ಆಗಿದೆ. ಫೇಸ್‌ಬುಕ್‌ನಲ್ಲಿ ಗೆಳೆಯರ ಜತೆಗಿನ ರಸ ನಿಮಿಷಗಳ ಫೋಟೋಗಳಷ್ಟೇ ಇರುವುದಿಲ್ಲ. ಗರ್ಲ್‌ಫ್ರೆಂಡ್ ಜತೆಗಿನ ಹುಚ್ಚಾಟ, ಕಾಲೇಜು ದಿನಗಳ ಮಂಗಾಟದ ಫೋಟೋಗಳೂ ಆಲ್ಬಂನಲ್ಲಿರುತ್ತವೆ. ಜತೆಗೆ, ಕೆಲವು ವ್ಯಕ್ತಿಗಳು, ಕೆಲವು ವಿಚಾರಗಳ ಬಗ್ಗೆ ಅಭಿಪ್ರಾಯವನ್ನೂ ವಿನಿಮಯ ಮಾಡಿಕೊಂಡಿರುತ್ತೇವೆ. ಕೆಲವೊಮ್ಮೆ ಯಾವುದೋ ಒಬ್ಬ ಗೆಳೆಯನ ಬಗ್ಗೆ ಸಿಟ್ಟು ನೆತ್ತಿಗೇರಿದಾಗ ಫೇಸ್‌ಬುಕ್‌ನಲ್ಲಿ ಅವನ ವಿರುದ್ಧ ಕಮೆಂಟ್ ಹಾಕಿ ಕೋಪ ತೀರಿಸಿಕೊಳ್ಳುವುದೂ ಉಂಟು. ಇದು ಕೆಲವೊಮ್ಮೆ ವಿಪರೀತಕ್ಕೆ ಹೋಗಬಹುದು. ಫ್ರೆಂಡ್ಸ್‌ಲಿಸ್ಟ್‌ನಲ್ಲೇನಾದರೂ ಬಾಸ್ ಇದ್ದರೆ ಇದನ್ನೆಲ್ಲಾ ನೋಡಿ ಕಸಿವಿಸಿವಿಸಿಗೊಳ್ಳಬಹುದು, ತಪ್ಪುಕಲ್ಪನೆ ಬೆಳೆಸಿಕೊಳ್ಳಬಹುದು ಎನ್ನುವುದು ಬಹುತೇಕ ಹುಡುಗರ ಭಾವನೆ. ಹಾಗಾಗಿ ಬಾಸ್‌ಗೆ ಫ್ರೆಂಡ್‌ಶಿಪ್ ರಿಕ್ವೆಸ್ಟ್ ಕಳುಹಿಸುವ ಮೊದಲು ಅವರು ನೂರು ಬಾರಿ ಯೋಚಿಸುತ್ತಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!