ಯುವಜನ/ಮಕ್ಕಳು

ಧಾರವಾಡದಲ್ಲಿ ಗ್ರಾಫಿಕ್ಸ್ ಆ್ಯನಿಮೇಷನ್ ಕೋರ್ಸ್

ಗ್ರಾಫಿಕ್ಸ್ ಮತ್ತು ಆ್ಯನಿಮೇಷನ್ ಕ್ಷೇತ್ರದಲ್ಲಿ ಸೃಜನಾತ್ಮಕ ಕೈಗಳಿಗೆ ಉದ್ಯೋಗದ ಅವಕಾಶಗಳು ಹೆಚ್ಚು. ಮಾಧ್ಯಮ ತಂತ್ರಜ್ಞಾನಗಳ ಬೆಳವಣಿಗೆಯಿಂದಾಗಿ ಇಂದು ಆ್ಯನಿಮೇಷನ್ ಮತ್ತು ಗ್ರಾಫಿಕ್ಸ್ ಕ್ಷೇತ್ರದಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿದೆ.
ಜಾಗತಿಕ ಮಟ್ಟದ ದೈತ್ಯ ಕಂಪನಿಗಳಾದ ವಾಲ್ಟ್ ಡಿಸ್ನಿ, ಡಿಕ್ಯೂ ಎಂಟರ್‌ಟೈನ್‌ಮೆಂಟ್, ಐ-ಮ್ಯಾಕ್ಸ್ ವಾರ್ನರ್ ಬ್ರದರ್ಸ್ ಹಾಗೂ ಸೋನಿ ಪಿಕ್ಚರ್ಸ್ ನಂತರ ಮುಂಚೂಣಿಯ ಕಾರ್ಟೂನ್ ಚಾನೆಲ್‌ಗಳು ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಹೇರಳ ಪ್ರತಿಭೆಗಳ ಕುರಿತು ಉತ್ಸುಕವಾಗಿವೆ. ಜಾಗತಿಕ ಮಾರುಕಟ್ಟೆಗಳಿಗಾಗಿ ಆ್ಯನಿಮೇಟೆಡ್ ಚಿತ್ರಗಳನ್ನು ಹುಟ್ಟುಹಾಕಲು ಆ ಕಂಪನಿಗಳು ಭಾರತದ ದೊಡ್ಡ ದೊಡ್ಡ ಕಂಪನಿಗಳ ಜತೆಗೂಡಿ ಕೆಲಸ ಮಾಡುತ್ತಿವೆ. ಅಲ್ಲದೆ, ಕನ್ನಡದಲ್ಲೂ ಆ್ಯನಿಮೇಷನ್ ಚಾನೆಲ್‌ಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗವು ಪ್ರಸಕ್ತ ವರ್ಷದಿಂದ ಬಹುಬೇಡಿಕೆಯ ಡಿಪ್ಲೊಮಾ ಇನ್ ಗ್ರಾಫಿಕ್ಸ್ ಮತ್ತು ಆ್ಯನಿಮೆಷನ್ ಕೋರ್ಸ್ ಆರಂಭಿಸಿದೆ.

ಎಷ್ಟೊಂದು ಕಂಪನಿಗಳು...
ಅನೇಕ ಆ್ಯನಿಮೇಷನ್ ಕಂಪನಿಗಳು ಮತ್ತು ಕಲೆ ತಂತ್ರಜ್ಞಾನ ಹೊಂದಿದ ಆಧುನಿಕ ಸ್ಟುಡಿಯೋಗಳು ದೇಶದಲ್ಲಿವೆ. ಅವುಗಳಲ್ಲಿ ಮುಂಚೂಣಿಯಲ್ಲಿರುವುದು ಟೊಂಜ್ ಇಂಡಿಯಾ, ಕ್ರೆಸ್ಟ್ ಕಮ್ಯುನಿಕೇಷನ್ಸ್, ಡೇಟಾ ಕ್ವೆಸ್ಟಾ, ಪ್ರಾಣಾ, ಜಾದು ವರ್ಕ್ಸ್, ಟಾಂಜ್ ಆ್ಯನಿಮೇಶನ್ಸ್, ಟೆಕ್ನಿಕಲರ್, ಪದ್ಮಾಲಯ, ಝೀಕಾ, ಸಿಜಿಐ ಮಂತ್ರಾ ಮತ್ತು ಐಡಿಯಾ ಸ್ಟುಡಿಯೋಸ್. ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ವಿವಿ ಸ್ವಯಂ ಹಣಕಾಸಿನ ಆಧಾರದ ಮೇಲೆ ಒಂದು ವರ್ಷದ ಈ ಕೋರ್ಸ್ ಶುರುಮಾಡಿದೆ. ಸಂಜೆ ಹೊತ್ತಿನ ಕೋರ್ಸ್ ಆಗಿರುವುದರಿಂದ ವಿದ್ಯಾರ್ಥಿಗಳಿಗೆ, ನೌಕರಿಯಲ್ಲಿರುವವರಿಗೆ ಅನುಕೂಲವಾಗಲಿದೆ. ತರಗತಿಗಳನ್ನು ಕರ್ನಾಟಕ ಕಾಲೇಜು ಆವರಣದಲ್ಲಿರುವ ಡಾ.ವಿ.ಕೆ. ಗೋಕಾಕ ಗ್ರಂಥಾಲಯದ ಮೇಲ್ಭಾಗದಲ್ಲಿ ನಡೆಸಲಾಗುವುದು. ವಿವರಗಳಿಗೆ ಮೊ. 94810 13993 ಅಥವಾ ಇಮೇಲ್ sanju.malagattizgmail.com ಸಂಪರ್ಕಿಸಬಹುದು.
ಅರ್ಜಿಗಳನ್ನು ಕರ್ನಾಟಕ ವಿವಿ ಜಾಲತಾಣ www.kud.ac.in ದಿಂದ ಡೌನಲೋಡ್ ಮಾಡಿಕೊಂಡು ಆ.10ರೊಳಗೆ ಸಲ್ಲಿಸಬೇಕು. ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶ ಪಡೆದುಕೊಳ್ಳಲಾಗುವುದು ಎಂದು ಕೋರ್ಸ್‌ನ ಸಂಯೋಜಕ ಸಹಾಯಕ ಪ್ರಾಧ್ಯಾಪಕ ಡಾ. ಸಂಜಯ ಮಾಲಗತ್ತಿ ಹೇಳಿದ್ದಾರೆ.

- ಬಸವರಾಜ ಹಿರೇಮಠ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!