ಯುವಜನ/ಮಕ್ಕಳು

ಸಪ್ತ ಪಾಠ

ಉತ್ತಮ ಅಂಕಗಳಿಸಲು ದೈಹಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಆರೋಗ್ಯವಾಗಿರಬೇಕಾದ್ದು ಅವಶ್ಯಕ. 'ಎ ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ' ..

ಉತ್ತಮ ಅಂಕಗಳಿಸಲು ದೈಹಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಆರೋಗ್ಯವಾಗಿರಬೇಕಾದ್ದು ಅವಶ್ಯಕ. 'ಎ ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ' ಎನ್ನುವಂತೆ ಆರೋಗ್ಯವಂತ ವಿಚಾರಗಳು, ಆಲೋಚನೆಗಳು ಬರಬೇಕಾದಲ್ಲಿ ಆರೋಗ್ಯವಂತ ಶರೀರ ಕೂಡ ಅಷ್ಟೇ ಮುಖ್ಯ. ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಈ ಸಪ್ತ ಸೂತ್ರಗಳು ವಿದ್ಯಾರ್ಥಿಗಳಿಗೆ ಉಪಯುಕ್ತ.

  1. ದಿನಕ್ಕೆ ಒಂದು ಗಂಟೆ ಕಾಲ ದೇಹಕ್ಕೆ ವ್ಯಾಯಾಮ ನೀಡುವಂತಹ ಯೋಗಾಸನ, ವಾಕಿಂಗ್, ಜಾಗಿಂಗ್, ಈಜು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಬೆಳಗ್ಗೆ ಅಥವಾ ಸಂಜೆ 1 ಗಂಟೆ ದೈಹಿಕ ಕಸರತ್ತು ನಿಮ್ಮ ದಿನಚರಿಯ ಒಂದು ಭಾಗವಾಗಿರಲಿ.
  2. ದಿನಕ್ಕೆ ಎರಡು ಬಾರಿ ಕನಿಷ್ಠ 10 ನಿಮಿಷವಾದರೂ ದೇವರ ಧ್ಯಾನ ಮಾಡಿ. ಧ್ಯಾನ ಎಂದರೆ ನನಗೆ ಅದು ಕೊಡು ಇದು ಕೊಂಡು ಎಂದು ದೇವರಲ್ಲಿ ಬೇಡಿಕೆ ಇಡುವುದಲ್ಲ. ಬದಲಾಗಿ ಅವನು ನಮಗೆ ಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದು.
  3. ದಿನಕ್ಕೆ ಮೂರು ಬಾರಿ ಮಾತ್ರ ಹಿತಮಿತವಾಗಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವಿಸಿ. ಊಟ ಎನ್ನುವುದು ಕೇವಲ ಬರೀ ಹೊಟ್ಟೆ ತುಂಬಿಸುವ ಕ್ರಿಯೆ ಅಲ್ಲ ಅನ್ನುವುದು ತಲೆಯಲ್ಲಿರಲಿ. ಮನೆಯ ಹಿರಿಯ, ಕಿರಿಯ ಸದಸ್ಯರೊಂದಿಗೆ ಸಂತಸ ಹಂಚಿಕೊಳ್ಳುತ್ತ ಊಟ ಮಾಡಿ. ಕರಿದ, ಬೇಯಿಸಿದ ಪದಾರ್ಥಗಳಿಗಿಂತ ಹಸಿ ತರಕಾರಿಗಳು, ಹಣ್ಣುಗಳು ನಿಮ್ಮ ಮೆನುವಿನಲ್ಲಿರಲಿ.
  4. ದಿನಕ್ಕೆ ನಾಲ್ಕು ಲೀಟರ್‌ನಷ್ಟು ನೀರು ಕುಡಿಯಿರಿ. ಓದುವ ಸಂದರ್ಭದಲ್ಲಿ ಪಕ್ಕದಲ್ಲೇ ಶುದ್ಧವಾದ ನೀರು ಇಟ್ಟುಕೊಳ್ಳಿ. ಇದರಿಂದ ಮಲಬದ್ಧತೆ ಹಾಗೂ ಅಜೀರ್ಣವನ್ನು ದೂರವಿಡಬಹುದು. ಚರ್ಮದ ಕಾಂತಿಯೂ ಹೆಚ್ಚುತ್ತದೆ.
  5. ದಿನಕ್ಕೆ ಐದು ಗಂಟೆ ಕಾಲ ಅಭ್ಯಾಸ ಮಾಡಿ. ಬೆಳಗ್ಗೆ ಎರಡು ಗಂಟೆಗಳಷ್ಟು ಹಾಗೂ ಸಂಜೆ ಮೂರು ಗಂಟೆಗಳಷ್ಟು ಸಮಯವನ್ನು ಅಭ್ಯಾಸಕ್ಕಾಗಿಯೇ ಮೀಸಲಿಡಿ. ಪ್ರತಿ ದಿನ ತರಗತಿಯಲ್ಲಿ ಮಾಡಿದ ಪಾಠಗಳನ್ನು ಅದೇ ದಿನ ಮನೆಯಲ್ಲಿ ಒಂದೆರಡು ಬಾರಿ ಓದಿ, ಬರೆದು ಮನನ ಮಾಡಿಕೊಳ್ಳಿ. ನಾಳೆಗೆ ಮುಂದೂಡುವ ಅಭ್ಯಾಸ ಬಿಟ್ಟುಬಿಡಿ.
  6. ದಿನಕ್ಕೆ ಆರರಿಂದ ಏಳು ಗಂಟೆಗಳಷ್ಟು ಮಾತ್ರ ನಿದ್ರೆ ಮಾಡಿ. ನಿಮ್ಮ ನಿದ್ರೆಯ ಸಮಯವನ್ನು ಈ ಸಮಯಕ್ಕೆ ಸರಿಯಾಗಿ ಹೊಂದಿಸಿಕೊಳ್ಳಿ. ರಾತ್ರಿ 10.30ಕ್ಕೆ ಮಲಗುವುದಾದರೆ ಬೆಳಗ್ಗೆ 4.30- 5.30ಗೆ ಏಳಿ. ಹೆಚ್ಚು ನಿದ್ರೆ ಸೋಮಾರಿತನಕ್ಕೆ ಕಾರಣವಾಗುತ್ತದೆ.
  7. ಮೇಲಿನ ಎಲ್ಲಾ ಸೂತ್ರಗಳನ್ನು ವಾರದ ಏಳೂ ದಿನ ತಪ್ಪದೇ ಪಾಲಿಸಿ. ಇವು ನಿಮ್ಮನ್ನು ಕ್ರಿಯಾಶೀಲರನ್ನಾಗಿ ಡುವುದಷ್ಟೇ ಅಲ್ಲ, ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಲೂ ನೆರವು ನೀಡುತ್ತದೆ.
- ನವಿಲೂರು ಪ್ರಕಾಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ