ಯುವಜನ/ಮಕ್ಕಳು

ದಯಾವಂತ ತೇಜಸ್ವಿ

ವಸಂತವಲ್ಲಭನಗರ ಎಂಬ ಊರು. ಅಲ್ಲೊಂದು ಶ್ರೀಮಂತ ಕುಟುಂಬ. ತೇಜಸ್ವಿ ಎಂಬಾತ...

ವಸಂತವಲ್ಲಭನಗರ ಎಂಬ ಊರು. ಅಲ್ಲೊಂದು ಶ್ರೀಮಂತ ಕುಟುಂಬ. ತೇಜಸ್ವಿ ಎಂಬಾತ ಆ ಕುಟುಂಬದ ಬಾಲಕ. ಅವನಿಗೆ ನಾಯಿ, ಬೆಕ್ಕು, ಮೊಲ ಇಂಥ ಸಾಕುಪ್ರಾಣಿಗಳೆಂದರೆ ಬಲುಪ್ರೀತಿ. ಬೀದಿಯಲ್ಲಿ ನಾಯಿಮರಿ ಕಂಡರೆ ಅದನ್ನು ಹಿಡಿದು ಮನೆಗೆ ತರುತ್ತಿದ್ದ. ಹಾಲು ಕುಡಿಸುತ್ತ ಬಿಸ್ಕೇಟ್ ತಿನ್ನಿಸುತ್ತಿದ್ದ. ಅದರೊಂದಿಗೆ ಆಡುವುದು, ಮುದ್ದಿಸುವುದು ಎಂದರೆ ತೇಜಸ್ವಿಗೆ ಖುಷಿ. ಆದರೆ ಈತನ ಅಪ್ಪ ಅಮ್ಮನಿಗೆ ಮಾತ್ರ ಇಷ್ಟವಾಗುತ್ತಿರಲಿಲ್ಲ. ಒಮ್ಮೆ ತೇಜಸ್ವಿ ತಂದೆ 'ಬೀದಿ ನಾಯಿಗಳನ್ನು ಮನೆಗೆ ತರಬೇಡ, ನಿನಗೆ ಅಂಗಡಿಯಲ್ಲಿ ಒಳ್ಳೆ ಜಾತಿಯ ನಾಯಿ ಕೊಡಿಸುತ್ತೇನೆ' ಎಂದರು. 'ಆಯ್ತು' ಎಂದ ತೇಜಸ್ವಿ.
ತೇಜಸ್ವಿ ತನ್ನ ತಂದೆಯೊಂದಿಗೆ ನಾಯಿಮರಿ ತರಲು ಅಂಗಡಿಗೆ ಹೋದನು. ಅಂಗಡಿಯಲ್ಲಿ ಬೇರೆ ಬೇರೆ ಜಾತಿಗೆ ಸೇರಿದ ನಾಯಿಮರಿಗಳು ಇದ್ದವು. ಅವುಗಳಲ್ಲೊಂದು ನಾಯಿಮರಿ ಅಂಗಡಿಯ ಮೂಲೆಯಲ್ಲಿ ಒಂಟಿಯಾಗಿ ಕುಳಿತಿತ್ತು. ಅದನ್ನು ನೋಡಿದ ತೇಜಸ್ವಿ 'ಆ ನಾಯಿಮರಿ ಏಕೆ ಮೂಲೆಯಲ್ಲಿದೆ?' ಎಂದು ಪ್ರಶ್ನಿಸಿದ. ಅಂಗಡಿಯವನು 'ಅದು ಒಳ್ಳೆಯ ಜಾತಿಯ ನಾಯಿಮರಿ. ಆದರೆ, ಅದರ ಒಂದು ಕಾಲು ಕುಂಟು' ಎಂದನು. 'ನಾನು ಆ ನಾಯಿಮರಿ ಜೊತೆ ಆಡಬಹುದೆ?' ಎಂದು ತೇಜಸ್ವಿ ಅಂಗಡಿಯವನನ್ನು ಕೇಳಿದ. 'ಆಗಲಿ' ಎಂದನು ಆತ. ತೇಜಸ್ವಿ ಅಂಗಡಿಯ ಒಳಗೆ ಹೋಗಿ ಆ ಕಾಲು ಮುರಿದ ನಾಯಿಮರಿಯನ್ನು ಎತ್ತಿಕೊಂಡು ಮುದ್ದಾಡಿದ.
ನಾಯಿಮರಿಯೂ ಅಷ್ಟೇ ಪ್ರೀತಿಯಿಂದ ತೇಜಸ್ವಿಯ ಮುಖ ಕೈ ನೆಕ್ಕಿತು. ತೇಜಸ್ವಿ ನನಗೆ ಇದೇ ಬೇಕೆಂದು ನಿಶ್ಚಯಿಸಿಬಿಟ್ಟ. 'ನನಗೆ ಈ ಮರಿ ಕೊಡಿ' ಎಂದು ಅಂಗಡಿಯವನನ್ನು ಕೇಳಿದ. ಆಗ ಅಂಗಡಿಯವನು 'ಮರಿ ಇದರ ಕಾಲು ಕುಂಟು. ಹಾಗಾಗಿ ಇದನ್ನು ಮಾರುವುದಿಲ್ಲ. ಚೆನ್ನಾಗಿರುವ ಮರಿಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೋ' ಎಂದನು. ಆದರೆ ತೇಜಸ್ವಿ ನನಗೆ ಅದೇ ಬೇಕು ಎಂದು ಹಠ ಹಿಡಿದ. ಕೊನೆಗೆ ಅಂಗಡಿಯವನು ಅದನ್ನು ಮಾರಲು ಒಪ್ಪಿಕೊಂಡ.
ತೇಜಸ್ವಿ ತನ್ನ ತಂದೆಯಿಂದ ಅದರ ಬೆಲೆಯ ಹಣ ಅಂಗಡಿಯವನಿಗೆ ಕೊಡಿಸಿದ. ಆದರೆ, ಅಂಗಡಿಯವನಿಗೆ ಈ ಬಾಲಕನೇಕೆ ಒಳ್ಳೆ ನಾಯಿಮರಿಗಳಿದ್ದರೂ ಕುಂಟು ನಾಯಿಮರಿ ತೆಗೆದುಕೊಂಡ ಎಂಬ ಅಚ್ಚರಿ ಕಾಡಿತು. ಕಡೆಗೆ ಅಂಗಡಿಯವನೇ ಈ ಕುರಿತು ತೇಜಸ್ವಿಯನ್ನು ಪ್ರಶ್ನಿಸಿದ. ಆಗ ತೇಜಸ್ವಿ ಏನನ್ನೂ ಮಾತನಾಡದೆ ತನ್ನ ಎಡಗಾಲ ಪ್ಯಾಂಟನ್ನು ಮೇಲಕ್ಕೇರಿಸಿದ. ಆಗ ಅಂಗಡಿಯವನು ತೇಜಸ್ವಿಯನ್ನು ಬಿಗಿದಪ್ಪಿ 'ನನಗೆ ಅರ್ಥವಾಯಿತು ಮಗು. ಈ ಮರಿಯನ್ನೇ ತೆಗೆದುಕೋ' ಎಂದನು. ಪಕ್ಕದಲ್ಲಿ ನಿಂತಿದ್ದ ತೇಜಸ್ವಿಯ ತಂದೆಯ ಕಣ್ಣಲ್ಲಿ ನೀರು ತೊಟ್ಟಿಕ್ಕಿತ್ತು. ಈ ಹಿಂದೆ ಅಪಘಾತಕ್ಕೊಳಗಾಗಿ ತೇಜಸ್ವಿ ತನ್ನ ಎಡಗಾಲು ಕಳೆದುಕೊಂಡಿದ್ದ. ಅದಕ್ಕೆ ಕೃತಕ ಕಾಲೊಂದನ್ನು ಜೋಡಿಸಲಾಗಿತ್ತು.

- ಎಂ.ಎಸ್. ಶಿವಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!