ಅಜ್ಜಿಯ ಕೈ ತುತ್ತು
ಅಜ್ಜಿಯು ಹಾಕುವಳು ಕೈ ತುತ್ತು
ಭಾನುವಾರದ ರಾತ್ರಿಯ ಹೊತ್ತು
ಅಪ್ಪ-ಅಮ್ಮ ಅಜ್ಜನ ಜೊತೆಗೆ
ಕೂತು ತಿನ್ನುವೆವು ಅಂಗಳದೊಳಗೆ
ಎಲ್ಲರ ನಡುವೆ ಅಜ್ಜಿ ಇರುವಳು
ಅನ್ನ ಹುಳಿ ಮೊಸರು ಕಲಸಿ ಕೊಡುವಳು
ಅಜ್ಜಿಯ ತುತ್ತು ಗೋಲಾಕಾರ
ನಮ್ಮ ಕೈಗೆ ಆಗದು ಭಾರ
ಚಿಕ್ಕದು ತುತ್ತು ನನಗೆ ಮಾತ್ರ
ಮಿಕ್ಕ ಎಲ್ಲರಿಗೆ ದೊಡ್ಡ ಗಾತ್ರ
ಭಾನುವಾರದ ರಾತ್ರಿಯ ಊಟ
ಅಜ್ಜಿಯ ಕೈನ ತುತ್ತಿನ ನೋಟ
= ಸಂಜನಾ ಅರುಣ್