ಯುವಜನ/ಮಕ್ಕಳು

ಜೋಕ್ಸ್ ಪಿಯರ್

ಗಂಡನನ್ನು ಕಿಚಾಯಿಸಲೆಂದೇ ಆಕೆ ಹೇಳಿದಳು: ಗಂಡಸರಿಗೆ ಹೋಲಿಸಿದರೆ ಹೆಂಗಸರಿಗೆ ಆರೋಗ್ಯ, ಆಯುಸ್ಸು, ನೆಮ್ಮದಿ ಎಲ್ಲವೂ ಹೆಚ್ಚಂತೆ ಗೊತ್ತಾ? ಯಾಕಿರಬಹುದು ಹೇಳಿ ನೋಡೋಣ?
ಗಂಡ ತಿರುಗುಬಾಣ ಬಿಟ್ಟ: ಯಾಕಂದ್ರೆ ಹೆಂಗಸರಿಗೆ ಹೆಂಡತಿ ಇರಲ್ಲ!!
-
ಸ್ಟೂಡೆಂಟ್ 1: ರಿಸಲ್ಟ್ ಬಂದಿದೆ. ಬಾರೋ ನೋಡ್ಕೊಂಡ್ ಬರೋಣ.
ಸ್ಟೂಡೆಂಟ್ 2: ನನಗ್ಯಾಕೋ ನಾನು ಪಾಸ್ ಆಗಿರೋದು ಡೌಟ್ ಮಗಾ. ಅಪ್ಪ ಬೇರೆ ಜೊತೇಲೆ ಇದಾರೆ. ನೀನು ನನ್ನ ರಿಸಲ್ಟ್ ನೋಡಿ ಫೋನ್ ಮಾಡು. ಒಂದು ಸಬ್ಜೆಕ್ಟ್ ಫೇಲ್ ಆಗಿದ್ರೆ 'ಗುಡ್ ಮಾರ್ನಿಂಗ್‌' ಅಂತ ಕಳಿಸು. ಎರಡು ಫೇಲ್ ಆಗಿದ್ರೆ 'ನಿನಗೂ ನಿಮ್ಮಪ್ಪಂಗೂ ಗುಡ್ ಮಾರ್ನಿಂಗ್‌' ಅಂತ ಕಳಿಸು.
ಸ್ಟೂಡೆಂಟ್ 1: ಸರಿ ಮಗಾ.
ರಿಸಲ್ಟ್ ನೋಡಿದ ಗೆಳೆಯ ಎಸ್ಸೆಮ್ಮೆಸ್ ಮಾಡ್ತಾನೆ.
'ನಿನಗೂ ನಿಮ್ಮ ಇಡೀ ಫ್ಯಾಮಿಲಿಗೂ ಗುಡ್ ಮಾರ್ನಿಂಗ್ ಮಗಾ'
-
ವಿಮಾನದಲ್ಲಿ ಐದು ಜನ ಬೇರೆ ಬೇರೆ ದೇಶದ ಸ್ನೇಹಿತರು ಪ್ರಯಾಣ ಮಾಡ್ತಾ ಇರ್ತಾರೆ. ಪ್ರಯಾಣದ ನಡುವೆ ಸಿಕ್ಕಾಪಟ್ಟೆ ಮದ್ಯಪಾನ ಮಾಡಿ ಚಿತ್ತಾಗುತ್ತಾರೆ.
ಬ್ರಿಟಿಷ್: ನಾನೀಗ ಮಲ್ಕೋತೀನಿ. ನಿದ್ದೆ ಬರ್ತಿದೆ.
ಅಮೆರಿಕನ್: ನನಗೀಗ ಇಂಟರ್ನೆಟ್ ಬ್ರೌಸ್ ಮಾಡಬೇಕು ಅನಿಸ್ತಿದೆ.
ಜರ್ಮನ್: ನಾನು ಸಿನಿಮಾ ನೋಡ್ತೀನಿ.
ಚೈನೀಸ್: ನಾನು ಹಾಡು ಕೇಳ್ತೀನಿ.
ಇಂಡಿಯನ್: (ಪೈಲಟ್ ಹತ್ರ ಹೋಗಿ ) ಎದ್ದೇಳ್ ಗುರು... ನಾನು ಓಡಿಸ್ತೀನಿ ಪ್ಲೇನು. ಎಲ್ ಬೋರ್ಡ್ ಥರ ಸಿಕ್ಕಾಪಟ್ಟೆ ಸ್ಲೋ ನೀನು.
-
ಹೆಂಡ್ತಿ ಹೊಸ ಸಿಮ್ ತಗೊಂಡು ಫೋನ್‌ಗೆ ಹಾಕ್ಕೋತಾಳೆ. ಗಂಡನಿಗೆ ನಂಬರ್ ಗೊತ್ತಿರಲ್ಲ. ಅವನನ್ನು ಒಂದ್ಸಲ ಗೋಳು ಹೊಯ್ದುಕೊಳ್ಳೋಣ ಅಂತ ಆಸೆ ಆಗುತ್ತೆ. ಗಂಡ ಹಾಲ್‌ನಲ್ಲಿ ಏನೋ ಕೆಲಸ ಮಾಡ್ತಾ ಕೂತಿರ್ತಾನೆ. ಹೆಂಡ್ತಿ ಅಡುಗೆ ಮನೆಗೆ ಹೋಗಿ ಬಚ್ಚಿಟ್ಕೊಂದು ರಿಂಗ್ ಮಾಡ್ತಾಳೆ. ಗಂಡ ಫೋನ್ ಎತ್ತುತ್ತಾನೆ. ಈಕೆ ಮೆಲುದನಿಯಲ್ಲಿ ಹಲೋ ಅಂತಾಳೆ.
ಗಂಡನೂ ಮೆಲುದನಿಯಲ್ಲೇ ಉಸುರುತ್ತಾನೆ 'ಹಲೋ ಚಿನ್ನಾ... ಪ್ಲೀಸ್ ಫೋನ್ ಕಟ್ ಮಾಡು, ಈ ಗೂಬೆ ಅಡುಗೆ ಮನೇಲಿದಾಳೆ ಅವಳಿಗೆ ಗೊತ್ತಾದ್ರೆ ಸುಮ್ನೆ ಕಿರಿಕ್ಕು. ನಾನೇ ಆಮೇಲೆ ಮಾಡ್ತೀನಿ'.
ಇದು ಬೇಕಿತ್ತಾ!!?
-
ಆತ ಕೆಲವೇ ದಿನಗಳ ಮುಂಚೆ ಆಫೀಸಿಗೆ ಸೇರಿರುತ್ತಾನೆ. ಕಾಫಿ ತರೋಕೆ ಆಫೀಸ್ ಬಾಯ್‌ಗೆ ಫೋನ್ ಮಾಡೋ ಬದಲು ತಪ್ಪಾದ ನಂಬರ್ ಡಯಲ್ ಮಾಡುತ್ತಾನೆ. ಫೋನ್ ಕರೆ ಬಾಸ್ ನಂಬರ್‌ಗೆ ಹೋಗುತ್ತದೆ.
ಹೊಸ ನೌಕರ: ಹಲೋ... ನನ್ನ ಕ್ಯಾಬಿನ್‌ಗೆ ಒಂದು ಕಾಫಿ ತಗೊಂಡ್ ಬಾ. ಎರಡು ನಿಮಿಷದಲ್ಲಿ ಇಲ್ಲಿರಬೇಕು.
ಬಾಸ್: (ಕೋಪ ನೆತ್ತಿಗೇರುತ್ತೆ) ಏಯ್... ಯಾರ ಹತ್ರ ಮಾತಾಡ್ತಾ ಇದ್ದೀಯ ಅಂತ ಗೊತ್ತ ನಿಂಗೆ?
ಹೊಸ ನೌಕರ: ಇಲ್ಲ.
ಬಾಸ್: ನಾನು ಈ ಆಫೀಸಿನ ಬಾಸ್!
ಹೊಸ ನೌಕರ: ಓಹ್ ಹೌದಾ? ನೀವು ಯಾರ ಹತ್ರ ಮಾತಾಡ್ತಾ ಇದ್ದೀರಾ ಅಂತ ಗೊತ್ತಾ ನಿಮ್ಗೆ?
ಬಾಸ್: ಇಲ್ಲ
ಹೊಸ ನೌಕರ: (ತಕ್ಷಣ ಫೋನ್ ಕಟ್ ಮಾಡಿ) ಅಬ್ಬಾ ಸದ್ಯ ಬಚಾವಾದೆ!!!
-
ಹೆಂಡ್ತಿ: ಊಟ ಆಯ್ತಾ?
ಗಂಡ: (ಹೆಂಡತಿಯನ್ನು ರೇಗಿಸಲು) ಊಟ ಆಯ್ತಾ?
ಹೆಂಡ್ತಿ: ನಾನು ನಿನ್ನನ್ನ ಕೇಳ್ತಿರೋದು.
ಗಂಡ: ನಾನು ನಿನ್ನನ್ನ ಕೇಳ್ತಿರೋದು.
ಹೆಂಡ್ತಿ: (ಸ್ವಲ್ಪ ರೇಗಿ ) ನಾ ಹೇಳಿದ್ದನ್ನೇ ಕಾಪಿ ಮಾಡ್ತಿದೀರಾ?
ಗಂಡ: (ಇನ್ನೂ ರೇಗಿಸೋಣ ಅಂತ) ನಾ ಹೇಳಿದ್ದನ್ನೇ ಕಾಪಿ ಮಾಡ್ತಿದೀರಾ?
ಹೆಂಡ್ತಿ: ಸರಿ ಬಿಡಿ. ಶಾಪಿಂಗ್ ಹೋಗೋಣ್ವಾ?
ಗಂಡ: ಹೇಯ್... ನಾನು ತಮಾಷೆ ಮಾಡ್ತಾ ಇದ್ದೆ. ನಂದು ಊಟ ಆಯ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಷ್ಯಾದಿಂದ ಇಂಧನ ಖರೀದಿ ನಿಲ್ಲಿಸಿ.. ಇಲ್ಲ..' ಚೀನಾಗೆ ಶೇ.50ರಿಂದ ಶೇ.100ರಷ್ಟು ಸುಂಕ ಹಾಕ್ತೀನಿ': NATO ರಾಷ್ಟ್ರಗಳಿಗೆ Trump ಎಚ್ಚರಿಕೆ!

ರಜನಿಕಾಂತ್ 'Coolie' ಚಿತ್ರದಲ್ಲಿ ನಟಿಸಿದ್ದು ನನ್ನ ದೊಡ್ಡ ತಪ್ಪು ನಿರ್ಧಾರ: Aamir Khan ಹೇಳಿಕೆ ಕುರಿತು ಸ್ಪಷ್ಟನೆ!

ಮುಂದಿವ ವರ್ಷ ಮಾರ್ಚ್ 5 ರಂದು ನೇಪಾಳ ಸಂಸತ್ ಚುನಾವಣೆ: ಅಧ್ಯಕ್ಷರ ಕಚೇರಿ ಘೋಷಣೆ

ಹಾಸನ ಗಣೇಶ ಮೆರವಣಿಗೆ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ; ಸ್ಥಳಕ್ಕೆ ಕೃಷ್ಣ ಬೈರೇಗೌಡ ಭೇಟಿ

ಕೊನೆಗೂ ಸಂಘರ್ಷ ಪೀಡಿತ ಮಣಿಪುರಕ್ಕೆ ಮೋದಿ ಭೇಟಿ; 'ಶಾಂತಿ ಮಾರ್ಗ' ಆರಿಸಿಕೊಳ್ಳುವಂತೆ ಮನವಿ

SCROLL FOR NEXT