ಸಚಿನ್ ತೆಂಡೂಲ್ಕರ್‌ಗೂ ನಿಮಗೂ ಇರೋ ಒಂದು ಹೋಲಿಕೆ: ನೀವಿಬ್ರೂ ಮರಿಯಾ ಶರಪೋವಾಗೆ ಪರಿಚಯ ಇಲ್ಲ!
ನಿಮ್ಮ ಕೆಲಸಗಳನ್ನು ನಾಳೆಗೆ ಮುಂದೂಡಬೇಡಿ. ಹಾಗೆ ಮಾಡುವುದರಿಂದ ಆ ಕೆಲಸವನ್ನು ಇನ್ನಷ್ಟು ಮುಂದೂಡುವ ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರಿ.
ಮದುವೆ ಬಗೆಗಿನ ಜೋಕ್‌ಗಳು ಜೋಕ್‌ಗಳಲ್ಲ ಎಂದು ಅರ್ಥವಾಗಬೇಕೇ? ಮದುವೆ ಆಗಿ ನೋಡಿ. ಅರ್ಥ್ಥವಾಗುತ್ತದೆ.
ಮದುವೆ ಎಂಬ ಗಾಯಕ್ಕೆ ಮಾತ್ರ ಪೆಟ್ಟಾಗುವ ಮೊದಲೇ ಅರಿಶಿಣ ಹಚ್ಚಲಾಗುತ್ತದೆ .
ಕಣ್ಣಾಸ್ಪತ್ರೆಯ ಎದುರಿದ್ದ ಬೋರ್ಡ್: ನೀವು ಸತ್ತ ನಂತರವೂ ನಿಮ್ಮ ಕಣ್ಣು ಸುಂದರ ಹುಡುಗಿಯರನ್ನು ನೋಡಬೇಕೇ? ಹಾಗಾದರೆ ಇಂದೇ ನೇತ್ರದಾನಕ್ಕೆ ಮುಂದಾಗಿ.
ಸಾಯೋವಷ್ಟು ಗಂಭೀರ ಸ್ಥಿತಿಯಲ್ಲಿರೋ ಹೆಂಗಸೊಬ್ಬಳನ್ನು ಬದುಕಿಸಬೇಕು ಅಂದ್ರೆ ಏನು ಮಾಡಬೇಕು?
'90 ಪರ್ಸೆಂಟ್ ಡಿಸ್ಕೌಂಟ್ ಸೇಲ್ ಹಾಕಿದಾರೆ' ಅಂತ ಆಕೆಗೆ ಕೇಳಿಸೋ ಹಾಗೆ ಹೇಳಬೇಕು.
ಹೆಂಗಸರಿಗ್ಯಾಕೆ ಗಂಡಸರಷ್ಟು ಚೆನ್ನಾಗಿ ಕಾರ್ ಓಡಿಸಲು ಬರೋಲ್ಲ? ಯಾಕಂದ್ರೆ ಕಾರಿನಲ್ಲಿ ಅವರದೇ ಮುಖ ತೋರಿಸಿ ಏಕಾಗ್ರತೆ ಹಾಳುಮಾಡುವ ಕನ್ನಡಿಗಳು ಮತ್ತು ಗಾಜಿನ ಕಿಟಕಿಗಳಿವೆ. ಅವರಿಗೆ ಮೇಕಪ್ ಮಾಡ್ಕೋಬೇಕು, ಮುಖ ನೋಡ್ಕೋಬೇಕು ಅನಿಸ್ತಾ ಇರತ್ತೆ.
ದಾಂಪತ್ಯ ಎಂಬುದು ಒಂಥರಾ ಪಬ್ಲಿಕ್ ಟಾಯ್ಲೆಟ್ಟಿನಂತೆ. ಒಳಗಿರುವವರಿಗೆ ಯಾವಾಗ ಹೊರಗೆ ಬಂದೇವೋ ಅಂತ... ಹೊರಗಿರೋವ್ರಿಗೆ ಯಾವಾಗ ಒಳಗೆ ಹೋದೇವೋ ಎಂಬ ಆತುರ.