ಪುಟ್ಟಿ ಹೊಟ್ಟೆನೋವೆಂದು ಅಳುತ್ತಿದ್ದಳು. ಆಕೆಯ ಅಮ್ಮ ಹೇಳಿದಳು, 'ನಿನ್ನ ಹೊಟ್ಟೆ ಖಾಲಿ ಇರುವುದರಿಂದ ಅದು ನೋಯುತ್ತಿದೆ. ನೀ ಅದಕ್ಕೇನಾದರೂ ತುಂಬಬೇಕು.' ಮರುದಿನ ಪುಟ್ಟಿಯ ಅಪ್ಪ ತಲೆನೋವೆಂದು ಸೋಫಾಗೆ ಒರಗಿದರು. ಆಗ ಪುಟ್ಟಿ, 'ನಿಮ್ಮ ತಲೆ ಖಾಲಿ ಇರುವುದರಿಂದ ಅದು ನೋಯುತ್ತಿದೆ. ನೀವು ಅದಕ್ಕೇನಾದರೂ ತುಂಬಬೇಕು!'
=
ಚಿಂಟು ಮಿಂಟು ಅಣ್ಣತಮ್ಮಂದಿರು. ಅವರ ತರಲೆಗಳಿಂದಾಗಿ ಪೋಷಕರಿಗೆ ಪ್ರತಿದಿನ ದೂರುಗಳು ಬರುತ್ತಲೇ ಇದ್ದವು. ಇದರಿಂದ ಬೇಸತ್ತ ಅವರ ಅಮ್ಮ ಮಕ್ಕಳನ್ನು ಮಾನಸಿಕ ತಜ್ಞರ ಹತ್ತಿರ ಕರೆದುಕೊಂಡು ಹೋದರು. ಮೊದಲು ಚಿಂಟುವನ್ನು ಕರೆದ ಡಾಕ್ಟರ್, 'ದೇವರೆಲ್ಲಿದ್ದಾನೆ ಹೇಳಿಬಿಡು ಪುಟ್ಟಾ?' ಎಂದು ಪ್ರೀತಿಯಿಂದ ಮಾತನಾಡಿಸಿದರು. ಉತ್ತರ ನೀಡದ ಚಿಂಟುವನ್ನು ನೋಡಿ ಅವರಿಗೆ ಕೋಪ ಬಂತು. ಜೊರಾಗಿ 'ದೇವರೆಲ್ಲಿದ್ದಾನೆ ಹೇಳು' ಎಂದು ಗದರಿದರು. ಹೊರಗೆ ಓಡಿ ಹೋದ ಚಿಂಟು, ಮಿಂಟುವನ್ನು ಕರೆದು ಎಂದ, 'ಮೊದಲು ಇಲ್ಲಿಂದ ತಪ್ಪಿಸಿಕೊಳ್ಳಬೇಕು. ದೇವರು ಕಾಣೆಯಾಗಿದ್ದಾನಂತೆ. ಮತ್ತು ಅವರೆಲ್ಲ ನಾವೇ ಬಚ್ಚಿಟ್ಟಿದ್ದೇವೆ ಎಂದು ಭಾವಿಸಿದ್ದಾರೆ!'