ಯುವಜನ/ಮಕ್ಕಳು

ಒಡೆದ ಕೊಡ

ನಿತ್ಯ ಆತನದು ದೂರದ ಹೊಳೆಯಿಂದ ನೀರು ಹೊತ್ತು ತಂದು ಹಾಕುವ ಕೆಲಸ. ಕೈಯ್ಯಲ್ಲೆರಡು ಕೊಡಗಳು..

ನಿತ್ಯ ಆತನದು ದೂರದ ಹೊಳೆಯಿಂದ ನೀರು ಹೊತ್ತು ತಂದು ಹಾಕುವ ಕೆಲಸ. ಕೈಯ್ಯಲ್ಲೆರಡು ಕೊಡಗಳು. ಒಂದು ಕೊಡ ಅರ್ಧ ಬಿರುಕು ಬಿಟ್ಟಿತ್ತು. ಹೀಗಾಗಿ ನಿತ್ಯ ಅದರಲ್ಲಿ ತಂದ ಅರ್ಧದಷ್ಟು ನೀರು ಸೋರಿ ಹೋಗುತ್ತಿತ್ತು. ಇದರಿಂದ ಆ ಕೊಡಕ್ಕೆ ತನ್ನ ಬಗ್ಗೆ ಕೀಳರಿಮೆಯೂ, ಇನ್ನೊಂದು ಕೊಡದ ಬಗ್ಗೆ ಅಸೂಯೆಯೂ ಆಗುತ್ತಿತ್ತು. ಒಂದು ದಿನ ಈ ಕೊಡದ ದುಃಖದ ಕಟ್ಟೆಯೊಡೆಯಿತು. ಅದು ಆತನಲ್ಲಿ ಹೇಳಿತು, 'ನನ್ನ ದೌರ್ಬಲ್ಯದಿಂದ ನೀನು ಪಡುವ ಶ್ರಮ ಸಾರ್ಥಕವಾಗುತ್ತಿಲ್ಲ. ನೀನೆಷ್ಟೇ ಕಷ್ಟ ಪಟ್ಟು ಹೊತ್ತು ನೀರು ತೆಗೆದುಕೊಂಡು ಹೋದರೂ ಅರ್ಧ ಸೋರಿ ಹೋಗಿ ನಾನು ನಿನಗೆ ಯಜಮಾನನ ಹೊಗಳಿಕೆ ತಪ್ಪುವಂತೆ ಮಾಡುತ್ತಿದ್ದೇನೆ ಎಂದು ದುಃಖಿಸಿತು.  ಅದಕ್ಕೆ ಆತ ಸಮಾಧಾನಿಸಿದ, 'ನಿನ್ನ ಕೊರತೆ ನೋಡಿಯೇ ನೀರಿಗೆ ಹೋಗುವ ದಾರಿಯ ಒಂದು ಬದಿಯಲ್ಲಿ ಹೂವಿನ ಗಿಡಗಳನ್ನು ನೆಟ್ಟೆ. ನಿತ್ಯ ನಿನ್ನನ್ನು ನಾನು ಹೂವು ಹಾಸಿರುವ ಬದಿಯಲ್ಲೇ ಹೊತ್ತು ತರುತ್ತಿದ್ದೇನೆ. ಗಿಡದ ಆ ಹೂಗಳಿಂದಲೇ ನಿತ್ಯ ಯಜಮಾನನ ಮನೆಯ ಟೇಬಲ್ ಅಲಂಕರಿಸುತ್ತಿದ್ದೇನೆ. ಇದರಿಂದ ಯಜಮಾನ ಸಂಪ್ರೀತರಾಗುತ್ತಾರೆ. ಇದಕ್ಕೆಲ್ಲ ನೀನೇ ಕಾರಣ ಎಂದ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ