ಅಬ್ಬಬ್ಬಾ ಎಂದರೆ ಎಷ್ಟು ಉದ್ದದ ಹಾವು ನೋಡಿದ್ದೀರಿ? 7.67 ಮೀಟರ್ ಉದ್ದದ ಹಾವು ಇದೆ ಎಂಬುದನ್ನಾದರೂ ಊಹಿಸಿಕೊಳ್ಳುವಿರಾ? 25.2 ಅಡಿ ಉದ್ದವಿರುವ ಆ ಹಾವಿನ ಹೆಸರು ಮೆಡುಸಾ! 10 ವರ್ಷದ ಮೆಡುಸಾಳನ್ನು ಎತ್ತಲು 15 ಜನ ಸಾಲಾಗಿ ನಿಲ್ಲಬೇಕು! ಮೆಡುಸಾಳಿಗೆ ಮೊಲ, ಹಂದಿ ಮತ್ತು ಜಿಂಕೆಗಳೆಂದರೆ ಪಂಚಪ್ರಾಣ. ಒಂದು ಬಾರಿ ತಿನ್ನಲು ಕೂತರೆ 18 ಕೆ.ಜಿ.ಯ ಜಿಂಕೆಯನ್ನು ತಿಂದು ತೇಗುತ್ತದೆ! ಮೆಡುಸಾ ಬರೋಬ್ಬರಿ 158.8 ಕೆ.ಜಿ. ತೂಗುತ್ತಾಳೆ.
ಅಮೆರಿಕದ ಕಾನ್ಸಾಸ್ ನಗರದ ಮಿಸೌರಿಯಲ್ಲಿ ಕಾಣಸಿಕ್ಕಿದ್ದ ಈ ಬೃಹತ್ ಹೆಬ್ಬಾವು ಗಿನ್ನೆಸ್ ಪುಸ್ತಕ ಸೇರಿಬಿಟ್ಟಿತು. ಜಗತ್ತಿನ ಅತಿ ಉದ್ದದ ಹಾವೆಂದರೆ ಮೆಡುಸಾ ಎನ್ನುವಷ್ಟು ಹೆಗ್ಗಳಿಕೆಗೆ ಪಾತ್ರವಾಯಿತು. ಸದ್ಯ ಮೆಡುಸಾ ಕಾನ್ಸಾಸ್ ನಗರದ 'ಝಿಜ ಊಜ್ಜಜ ್ಟಜಿ ಏಜಟಟ ಏಛ್ಡಟಿಡಿಜಜ ಏ್ಟ್ಡಡಜ'ದಲ್ಲಿ ಉಪಚರಿಸಲ್ಪಡುತ್ತಿದೆ.