ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

108 ಸಿಬ್ಬಂದಿ ಮುಷ್ಕರ: ಸರ್ಕಾರದ ಕ್ರಮದ ಮಾಹಿತಿ ನೀಡುವಂತೆ ಆದೇಶ

ಜನಸಾಮಾನ್ಯರ ತುರ್ತು ಸೇವೆಯ ಗುರಿ ಹೊಂದಿರುವ '108 ಆ್ಯಂಬ್ಯುಲೆನ್ಸ್' ಸಿಬ್ಬಂದಿ ಮುಷ್ಕರದಲ್ಲಿ ತೊಡಗಿರುವುದರಿಂದ ಜನಸಾಮಾನ್ಯರಿಗೆ ...

Rashmi Kasaragodu
Updated On : 5 Aug 2013, 11:15 am

ಬೆಂಗಳೂರು: ಜನಸಾಮಾನ್ಯರ ತುರ್ತು ಸೇವೆಯ ಗುರಿ ಹೊಂದಿರುವ '108 ಆ್ಯಂಬ್ಯುಲೆನ್ಸ್' ಸಿಬ್ಬಂದಿ ಮುಷ್ಕರದಲ್ಲಿ ತೊಡಗಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಅದನ್ನು ತಡೆಯುವ ಸಲುವಾಗಿ ಒಂದು ಸಮಿತಿ ರಚಿಸಿ, ತುರ್ತು ಸೇವೆಯನ್ನು ಪುನಾರಂಭಿಸಬೇಕು ಎಂದು ಕೋರಿ ಡಾ.ಕೋಡೂರು ವೆಂಕಟೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎಲ್.ಮಂಜುನಾಥ್ ಹಾಗೂ ನ್ಯಾ.ರವಿ ಮಳಿಮಠ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
2008ರಲ್ಲಿ ಲಾಭದ ಅಪೇಕ್ಷೆಯಿಲ್ಲದೆ ಸೇವೆ ಒದಗಿಸುವ ಉದ್ದೇಶದಿಂದ ಆರಂಭಗೊಂಡಿದ್ದ 108 ಆ್ಯಂಬ್ಯುಲೆನ್ಸ್ ಸೇವೆ ಜುಲೈ 26ರಂದು ಸ್ಥಗಿತಗೊಂಡಿದೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಬ್ಬಂದಿ ಮುಷ್ಕರದಲ್ಲಿ
ತೊಡಗಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅತಿಯಾದ ಮಳೆ ಸುರಿಯುತ್ತಿದ್ದು, ನೆರೆ ಪರಿಸ್ಥಿತಿ ಎದುರಾಗಿರುವುದರಿಂದ ಆ್ಯಂಬುಲೆನ್ಸ್ಗಳ ಸೇವೆ ಹೆಚ್ಚಿನ ಅಗತ್ಯವಿದೆ. ಆದರೆ, ಸರ್ಕಾರ ಈ ಕುರಿತು ಗಮನ ಹರಿಸುತ್ತಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ವಕೀಲರು, ತಾವು ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವುದಾಗಿ ತಿಳಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಅರ್ಜಿದಾರರು, ನಗರ ಪ್ರದೇಶದಲ್ಲಿ ಮಾತ್ರ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement