ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾರು-ಬಸ್ ಡಿಕ್ಕಿ: ಒಂದೇ ಕುಟುಂಬದ ಐವರ ಸಾವು

ಸಾರಿಗೆ ಬಸ್‌ಗೆ ಕಾರೊಂದು ಡಿಕ್ಕಿಯಾಗಿ ಒಂದೂವರೆ ವರ್ಷದ ಗಂಡು ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ...

Rashmi Kasaragodu
Updated On : 5 Aug 2013, 11:36 am

ಕನ್ನಡಪ್ರಭ ವಾರ್ತೆ   ಅರಸೀಕೆರೆ   ಆ. 5
ಸಾರಿಗೆ ಬಸ್‌ಗೆ ಕಾರೊಂದು ಡಿಕ್ಕಿಯಾಗಿ ಒಂದೂವರೆ ವರ್ಷದ ಗಂಡು ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಂಡೇಕೆರೆ ಸಮೀಪ ಸೋಮವಾರ ಸಂಭವಿಸಿದೆ.
ಬೆಂಗಳೂರಿನಲ್ಲಿ ವಿದ್ಯುತ್ ಗುತ್ತಿಗೆದಾರರಾಗಿರುವ ಬೆಟ್ಟೇಗೌಡ (60), ನಾಗಮ್ಮ (50), ಜಗದೀಶ್ (35), ಸೊಸೆ ಕುಮುದಾ (27), ಧನುಷ್ (1.5) ಮೃತಪಟ್ಟವರು. ಗಂಭೀರ ಗಾಯಗೊಂಡಿರುವ ನಾಗಮ್ಮರನ್ನು ಬೆಂಗಳೂರಿನ ನಿಮಾನ್ಸ್‌ಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆ, ಉಳಿದವರು ಸ್ಥಳದಲ್ಲಿಯೇ ಅಸುನೀಗಿದರು.
ಭಾನುವಾರ ಜೋಗ ಜಲಪಾತ ವೀಕ್ಷಿಸಲು ಈ ಕುಟುಂಬ ತೆರಳಿತ್ತು.                     

ಜೋಗ ಬಳಿಯ ಕಾರ್ಗಿಲ್‌ನ ಸೋದರ ಸಂಬಂಧಿಕರ ಮನೆಯಿಂದ ಸೋಮವಾರ ಬೆಳಗಿನ ಜಾವ 5.30ಕ್ಕೆ ಹೊರಟಿತ್ತು. ಬೀರೂರು ದಾಟಿದ ನಂತರ ಮುಂದೆ ಹೋಗುತ್ತಿದ್ದ ಆಟೋರಿಕ್ಷಾವನ್ನು ಹಿಂದಿಕ್ಕಲು ಹೋದ ಹುಂಡೈ ಕಾರು ಎದುರಿನಿಂದ ಬಂದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಈ ಕುಟುಂಬದ ಇನ್ನೊಂದು ಮಗು ಅಪಘಾತ ಸಂಭವಿಸುವ ತುಸು ಮುನ್ನ ಇವರೊಂದಿಗೇ ಆಗಮಿಸುತ್ತಿದ್ದ ಸಂಬಂಧಿಕರ ಮತ್ತೊಂದು ಕಾರಿನಲ್ಲಿ ಕುಳಿತಿತ್ತು.
ಡಿವೈಎಸ್‌ಪಿ ಮಂಜುನಾಥ್, ಗ್ರಾಮಾಂತರ ವೃತ್ತ ನಿರೀಕ್ಷಕ ಗಂಗಾಧರಪ್ಪ, ಬಾಣಾವರ ಪಿಎಸ್‌ಐ ನರೇಂದ್ರಕುಮಾರ್, ಗ್ರಾಮಾಂತರ ಎಸ್‌ಐ ಸುನೀಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಸ್ ಚಾಲಕ ಪರಾರಿಯಾಗಿದ್ದಾನೆ. ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement