ವಾಂತಿಭೇದಿ; ಡೋಣಗಾಂವದ 10 ಜನ ಆಸ್ಪತ್ರೆಗೆ ದಾಖಲು
ಚಿತ್ತಾಪುರ: ಗುಲ್ಬರ್ಗ ಜಿಲ್ಲೆ ಚಿತ್ತಾಪುರ ತಾಲೂಕಿನ ಡೋಣಗಾಂವ ಗ್ರಾಮದ 10 ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ಮಂಗಳವಾರ ಚಿತ್ತಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ 6 ವರ್ಷದ ಕಾವ್ಯ ಸೇರಿದಂತೆ ಕಾಶಪ್ಪ, ಅಕ್ಕಮಹಾದೇವಿ, ಆಕಾಶ, ನಗ್ಮಾ ಕೋರಬಾ, ಅರ್ಜುನಪ್ಪ, ಯಲ್ಲಮ್ಮ, ಕಿರಣ, ಲಲಿತಾ ಸಾಬಣ್ಣ, ಲಲಿತಮ್ಮ, ಅಣ್ಣಪ್ಪ ಸೇರಿದಂತೆ ಹಲವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ, ಭೇದಿ ಉಂಟಾಗಿದೆ ಎಂದು ಹೇಳಲಾಗಿದೆ. ಗ್ರಾಮದ ಜನರು ಊರು ಬಾವಿಯ ನೀರನ್ನು ಸೇವನೆ ಮಾಡುತ್ತಿದ್ದಾರೆ. ಹೊಸ ಬಾವಿಯಲ್ಲಿದ್ದ ಕಲುಷಿತು ನೀರು, ಊರು ಬಾವಿಗೆ ಸಂಗ್ರಹಣವಾಗುತ್ತಿದೆ. ಈ ನೀರು ಸೇವನೆಯಿಂದ ನಾಗರಿಕರಿಗೆ ವಾಂತಿ, ಭೇದಿ ಉಂಟಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಮದಲ್ಲಿದ್ದ ಬೋರ್ವೆಲ್ ನೀರು ಸರಬರಾಜು ಕಳೆದ 15 ದಿನಗಳಿಂದ ಸ್ಥಗಿತಗೊಂಡಿದೆ. ನಳದ ನೀರು ಬರದೇ ಇರುವುದರಿಂದ ಊರ ಬಾವಿಯ ನೀರು ನಾಗರಿಕರು ಸೇವನೆ ಮಾಡುತ್ತಿದ್ದಾರೆ. ಯಂತ್ರ ದುರಸ್ತಿ ಮಾಡದೇ ಇರುವುದರಿಂದ ನಳದ ನೀರು ಸರಬರಾಜಾಗುತ್ತಿಲ್ಲ ಎಂದು ಹೇಳಲಾಗಿದೆ. ಕೂಡಲೇ ಯಂತ್ರ ದುರಸ್ತಿಗೊಳಿಸಿ ಶುದ್ಧವಾದ ನೀರು ಸರಬರಾಜು ಮಾಡಲಾಗುವುದು ಎಂದು ಪಿಡಿಒ ವಿಜಯಲಕ್ಷ್ಮೀ ಅವರು ಆಸ್ಪತ್ರೆಗೆ ಭೇಟಿ ನೀಡಿ ತಿಳಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ಸಾಬಣ್ಣ ಜಡಿ, ಪ್ರಕಾಶ ಅಲ್ಲೂರಕರ್, ನಿಂಗಣ್ಣ ಹಲಗಿ, ಚನ್ನಮಲ್ಲಪ್ಪ, ಕಾಶಪ್ಪ ಇತರರು ಆಸ್ಪತ್ರೆಗೆ ಭೇಟಿ ನೀಡಿ ಗ್ರಾಮದಲ್ಲಿ ವಾಂತಿ, ಭೇದಿ ಉಲ್ಬಣಗೊಳ್ಳುವ ಭೀತಿ ಹೆಚ್ಚಾಗಿದೆ. ಕೂಡಲೇ ತಾಲೂಕು ವೈದ್ಯಾಧಿಕಾರಿ, ವೈದ್ಯರ ತಂಡ ಬಿಡಾರ ಹೂಡಿದೆ.