ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿಧವೆಯ ಮಗು ಈಗ ಅನಾಥ!

Mainashree
Updated On : 6 Aug 2013, 11:21 am

ತುಮಕೂರು: ದೌರ್ಜನ್ಯಕ್ಕೆ ಒಳಗಾಗಿ, 40 ವರ್ಷದ ವಿಧವೆಯೊಬ್ಬಳಿಗೆ ಜನಿಸಿದ ಗಂಡು ಮಗು ಈ ಅಕ್ಷರಶಃ ಅನಾಥವಾಗಿದೆ!
ತುಮಕೂರು ತಾಲೂಕಿನ ಅನುಪನಹಳ್ಳಿ ವಿಧವೆಯ ಮಗುವಿಗೇ ಇಂಥ ಸ್ಥಿತಿ ಬಂದಿರುವುದು. ಒಂದೆಡೆ ಸಮಾಜದ ಹೆದರಿಕೆ, ಮತ್ತೊಂದೆಡೆ ಬೆಳೆದು ನಿಂತ 18 ಮತ್ತು 15 ವರ್ಷದ ಎರಡು ಮಕ್ಕಳ ಎದುರು ಮುಜುಗರ ಅನುಭವಿಸಲು ಆಗದೆ ಈಕೆ ಮಗುವನ್ನು ಪರಿತ್ಯಜಿಸಿದ್ದಾಳೆ.
ವಿಧವೆಯ ಈ ವಿಷಯ ಅಂಗನವಾಡಿ ಕಾರ್ಯಕರ್ತೆಯ ಮೂಲಕ ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಗಮನಕ್ಕೆ ಬಂದಿದೆ. ಆ.1ರಂದು ಜನಿಸಿದ ಈ ಮಗವನ್ನು ವಿಧವೆ ಅವರಿಗೆ ಅಧಿಕಾರಿಗೆ ಹಸ್ತಾಂತರಿಸಿದ್ದಾಳೆ.
ನಂತರ ವಾಸಂತಿಯವರು ಮಗುವಿಗೆ ವಿಶೇಷ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಯ ನಿಗಾ ಘಟಕದಲ್ಲಿಡಲಾಗಿದೆ. ಕೇವಲ 1.4 ಕೆಜಿ ಇರುವ ಈ ಮಗು ಆರೈಕೆ ಜಿಲ್ಲಾಸ್ಪತ್ರೆ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ. ಈ ಮಧ್ಯೆ, ವಿಧವೆ ತಾಯಿ ತನ್ನ ಮಗುವನ್ನು ತನ್ನ ಪರಿಚಯಿಸ್ಥರಿಗೆ ಕೊಡಲು ನಿರ್ಧರಿಸಿದ್ದಳು. ಅದಕ್ಕಾಗಿ ಬೆಂಗಳೂರಿನಲ್ಲಿರುವ ಅವರನ್ನು ತುಮಕೂರಿಗೆ ಕರೆಯಿಸಿದ್ದಳು.
ಆದರೆ, ಈ ರೀತಿ ಅಕ್ರಮವಾಗಿ ಮಕ್ಕಳನ್ನು ಪಡೆಯುವುದು ಅಥವಾ ಕೊಡುವುದು ಕಾನೂನು ಬಾಹಿರವಾಗುತ್ತದೆ. ಮಗು ಪೂರ್ತಿ ಆರೋಗ್ಯವಾಗದ ಹೊರತು ಕೊಡಲಾಗುವುದಿಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಹೇಳಿದ್ದರಿಂದ ಈಗ ಮಗು ಅವರ ವಶದಲ್ಲೇ ಇದೆ. ವಿಧವೆ ತಾಯಿ ಕೂಡಾ ತನಗೆ ಮಗು ಬೇಡ ಎಂದು ಬರೆದುಕೊಟ್ಟಿದ್ದಾಳೆ. ನಿಯಮಾನುಸಾರ ದತ್ತು ಕೇಂದ್ರದಲ್ಲಿ ಹೆಸರನ್ನು ನೊಂದಾಯಿಸಿಕೊಂಡು ಮಗುವನ್ನು ಪಡೆಯಲು ಬೆಂಗಳೂರಿನ ದಂಪತಿಗಳಿಗೆ ತಿಳಿಸಲಾಗಿದೆ. ಒಟ್ಟಾರೆಯಾಗಿ ಈಗ ಈ ಮಗು ಅನಾಥವಾಗಿದೆ.
ಜತೆಗೆ ತೀವ್ರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ದೌರ್ಜನ್ಯಕ್ಕೆ ಒಳಗಾಗಿ ಅಪಮಾನಕ್ಕೆ ಅಂಜಿ ಹಡೆದ ಮಗುವನ್ನೇ ಪರಿತ್ಯಜಿಸಿದ ತಾಯಿ ಒಂದೆಡೆಯಾದರೆ ಯಾವೊಂದು ತಪ್ಪು ಮಾಡದ ಈ ಹಸುಗೂಸು ಈಗ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement