ನಕ್ಸಲ್ ದಾಳಿಗೆ ಯೋಧ ಹುತಾತ್ಮ
ಬೈಲಹೊಂಗಲ: ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಬೈಲವಾಡ ಗ್ರಾಮದ ವೀರ ಯೋಧ ಮಂಜುನಾಥ ಈಶ್ವರಗೌಡ ಮುದಕನಗೌಡ್ರ ಸೋಮವಾರ ಛತ್ತೀಸಗಡದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ. 28 ವರ್ಷದ ಮಂಜುನಾಥ ಏಳು ವರ್ಷಗಳ ಹಿಂದೆ ಸಿಆರ್ಪಿಎಫ್ಗೆ ಸೇರಿದ್ದರು. ಒಂಬತ್ತು ತಿಂಗಳ ಹಿಂದೆಯಷ್ಟೇ ಇವರ ವಿವಾಹವಾಗಿದ್ದು, ಮಗುವಿನ ನಿರೀಕ್ಷೆಂುಲ್ಲಿದ್ದರು.
ಜೂನ್ನಲ್ಲಿ ರಜೆ ಮುಗಿಸಿಕೊಂಡು ಮತ್ತೆ ಸೇವೆಗೆ ತೆರಳಿದ್ದ ಮಗನ ಸಾವಿನ ಸುದ್ದಿ ಕೇಳಿ ಕುಟುಂಬ ವರ್ಗ ಕಂಗಾಲಾಗಿದೆ. ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬನೇ ಪುತ್ರನ ಸಾವು ಬರಸಿಡಿಲು ಬಡಿದಂತಾಗಿದೆ. ಈತನ ಮೃತ ದೇಹ ಸ್ವಗ್ರಾಮಕ್ಕೆ ಗುರುವಾರ ಮುಂಜಾನೆ 8 ಗಂಟೆಗೆ ಆಗಮಿಸಲಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.