ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಾವಿನಕುರ್ವಾ: ಪಾರ್ಶ್ವವಾಯು ಪೀಡಿತರು ದೇಶದಲ್ಲೇ ಅಧಿಕ

Mainashree
Updated On : 9 Aug 2013, 12:25 pm

ಕಾರವಾರ: ಭಟ್ಕಳದ ಮಾವಿನಕುರ್ವಾದಲ್ಲಿ ಪಾರ್ಶ್ವವಾಯುವಿಗೆ ತುತ್ತಾದವರ ಪ್ರಮಾಣ ದೇಶದಲ್ಲೇ ಅತಿ ಹೆಚ್ಚು. ಇದಕ್ಕೆ ಪ್ರಮುಖ ಕಾರಣ ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಹಾಗೂ ಇನ್ನಿತರ ಕಾರಣಗಳೆಂದು ಮಣಿಪಾಲ ಆರೋಗ್ಯ ಸಂಸ್ಥೆಯ ವರದಿ ಬಹಿರಂಗಗೊಳಿಸಿದೆ. ದೇಶದ ಇನ್ನೆಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಪಾರ್ಶ್ವವಾಯು ಪೀಡಿತರು ಒಂದೇ ಪ್ರದೇಶದಲ್ಲಿ ಸಿಗಲಾರರು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ವರದಿ ಪ್ರಕಾರ ಸಾಮಾನ್ಯವಾಗಿ ಪ್ರತಿ 1000 ಜನಸಂಖ್ಯೆಯಲ್ಲಿ ಪಾರ್ಶ್ವವಾಯು ಪೀಡಿತರ ಸಂಖ್ಯೆ ಶೇ.1.54ರಷ್ಟಿರುತ್ತದೆ. ಕರ್ನಾಟಕದ ಇತರೆ ಸ್ಥಳಗಳಲ್ಲಿ ಈ ಕಾಯಿಲೆ ಪೀಡಿತರ ಸಂಖ್ಯೆ ಶೇ.1.65ರಷ್ಟಿದೆ. ಭಟ್ಕಳದ ಮಾವಿನಕುರ್ವಾದಲ್ಲಿ 1000 ಜನಸಂಖ್ಯೆಗೆ ಶೇ.8.6ರಷ್ಟು ಪೀಡಿತರಿದ್ದಾರೆ. ದೇಶದ ಇನ್ನಿತರ ಭಾಗಗಳಲ್ಲಿದ ಅನಾರೋಗ್ಯ ಇಲ್ಲಿದೆ ಎನ್ನುತ್ತೆ ವರದಿ.
ಬಹಿರಂಗ: ಮಣಿಪಾಲ ಆರೋಗ್ಯ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಡಾ. ವೀಣಾ ಕಾಮತ್ ಹಾಗೂ ಡಾ. ಮುರಳೀಧರ್ ನೇತೃತ್ವದ ತಂಡ ಈ ಅಧ್ಯಯನ ನಡೆಸಿದ್ದು, ವರದಿಯನ್ನು ವೃಕ್ಷಲಕ್ಷ ಆಂದೋಲನ ಬಹಿರಂಗಗೊಳಿಸಿದೆ. ಮಾವಿನಕುರ್ವಾದ ಸಮೀಪದ ಹಳ್ಳಿಗಳಲ್ಲಿ 6190 ಜನರಿದ್ದಾರೆ. ಇದರಲ್ಲಿ 159 ಜನರನ್ನು ತಪಾಸಣೆ ನಡೆಸಿ ವಿವರ ಸಂಗ್ರಹಿಸಲಾಗಿದೆ. ಇವರಲ್ಲಿ 53 ಮಂದಿಗೆ ತೀವ್ರಕಾಯಿಲೆ ವ್ಯಾಪಿಸಿದೆ. ಇಲ್ಲಿಯ ಶೇ.86ರಷ್ಟು ಜನರಿಗೆ ಅಧಿಕ ರಕ್ತದೊತ್ತಡದ ಇರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ.

ಬೆಳಕು ಚೆಲ್ಲಿತ್ತು ಕನ್ನಡಪ್ರಭ
ಮಾವಿನಕುರ್ವಾದಲ್ಲಿ ನೂರಾರು ಸಂಖ್ಯೆಯಲ್ಲಿ ಪಾರ್ಶ್ವವಾಯು ಪೀಡಿತರು ಇರುವ ಬಗ್ಗೆ 2012ರಲ್ಲಿಯೇ 'ಕನ್ನಡಪ್ರಭ' ಬೆಳಕು ಚೆಲ್ಲಿತ್ತು. ಕೂಡಲೇ ಆಗಿನ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದ್ದರು. ಆರೋಗ್ಯ ಇಲಾಖೆ ಮೂಲಕ ಶಿಬಿರ ಸಂಘಟಿಸಿ, ರೋಗಿಗಳಿಗೆ ನೆರವಾದರು. ನಂತರ ಈ ಕಾಯಿಲೆ ಬಗ್ಗೆ ಸಮೀಕ್ಷೆ ನಡೆಸಲು ಸರ್ಕಾರದ ಮೇಲೆ ಒತ್ತಡ ಹೇರಿದಾಗ ಆರೋಗ್ಯ ಇಲಾಖೆ ಮಣಿಪಾಲ ಆರೋಗ್ಯ ಸಂಸ್ಥೆಗೆ ಸಮೀಕ್ಷೆ ನಡೆಸಲು ಸೂಚಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement