ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹೈಕೋರ್ಟ್ ಕಾಯಂ ಪೀಠಕ್ಕೆ ರಾಷ್ಟ್ರಪತಿ ಸಹಿ

ಧಾರವಾಡ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್ ನ ಶಾಶ್ವತ ಪೀಠ ಸ್ಥಾಪಿಸುವುದಕ್ಕೆ ರಾಷ್ಟ್ರಪತಿಗಳು ಬುಧವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ರಾಷ್ಟ್ರಪತಿಗಳು ಹೊರಡಿಸಿರುವ...

Mainashree
Updated On : 14 Aug 2013, 10:44 am

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಧಾರವಾಡ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್ ನ  ಶಾಶ್ವತ ಪೀಠ ಸ್ಥಾಪಿಸುವುದಕ್ಕೆ ರಾಷ್ಟ್ರಪತಿಗಳು ಬುಧವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ರಾಷ್ಟ್ರಪತಿಗಳು ಹೊರಡಿಸಿರುವ ಆದೇಶದ ಪ್ರಕಾರ ಧಾರವಾಡದ ಶಾಶ್ವತ ಹೈಕೋರ್ಟ್ ಪೀಠವು ಆಗಸ್ಟ್ 24ರಿಂದ ಮತ್ತು ಗುಲ್ಬರ್ಗದ ಹೈಕೋರ್ಟ್ ಶಾಶ್ವತ ಪೀಠವು ಆಗಸ್ಟ್ 31ರಿಂದ ಕಾರ್ಯಾರಂಭ ಮಾಡಲಿವೆ.
ಈ ಆದೇಶದನ್ವಯ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಉಭಯ ಪೀಠಗಳಿಗೆ ಹೈಕೋರ್ಟ್ನಿಂದ ನ್ಯಾಯಮೂರ್ತಿಗಳನ್ನು ನಿಯೋಜಿಸುವ ಅಧಿಕಾರ ನೀಡಲಾಗಿದೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾವೇರಿ, ಉತ್ತರ ಕನ್ನಡ ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಜ್ಯಗಳು ಧಾರವಾಡ ಪೀಠದ ವ್ಯಾಪ್ತಿಗೆ ಬರಲಿವೆ. ಬೀದರ್, ಬಿಜಾಪುರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳ ವ್ಯಾಜ್ಯಗಳು ಗುಲ್ಬರ್ಗ ಪೀಠದ ವ್ಯಾಪ್ತಿಗೆ ಬರಲಿವೆ. ಈ ಜಿಲ್ಲೆಗಳಲ್ಲಿನ ಯಾವುದೇ ಪ್ರಕರಣ ಕುರಿತು ಬೆಂಗಳೂರಿನಲ್ಲಿ ವಿಚಾರಣೆ ನಡೆಸಲು ಆದೇಶ ನೀಡುವ ವಿವೇಚನಾಧಿಕಾರವನ್ನು ಹೈಕೋರ್ಟ್ ಸಿಜೆಗೆ  ನೀಡಲಾಗಿದೆ. ಧಾರವಾಡ ಮತ್ತು ಗುಲ್ಬರ್ಗದಲ್ಲಿ ಶಾಶ್ವತ ಹೈಕೋರ್ಟ್ ಪೀಠ ಸ್ಥಾಪಿಸಲು ಜುಲೈ 4ರಂದು ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು. 2008 ಜುಲೈ 7ರಿಂದ ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಸಂಚಾರಿ ಪೀಠಗಳು ಕಾರ್ಯನಿರ್ವಹಿಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement