ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

37000ವಿದ್ದ ಮಳಿಗೆ ಬಾಡಿಗೆ 2.34 ಲಕ್ಷವಾಯ್ತು!

Rashmi Kasaragodu
Updated On : 16 Aug 2013, 12:49 pm

ಕ.ಪ್ರ.ವಾರ್ತೆ   ಚಾ.ನಗರ   ಆ.15
ದೇವಾಲಯಕ್ಕೆ ಆದಾಯವಿಲ್ಲದೆ ಜಿಲ್ಲಾ ಕೇಂದ್ರದ ಪ್ರಸಿದ್ಧ ಚಾಮರಾಜೇಶ್ವರನಿಗೆ ನೈವೇದ್ಯ ನಿಂತು ಹೋಗಿದ್ದು,  ದೇವಾಲಯದ ಮಳಿಗೆಗಳಲ್ಲಿ 8 ವರ್ಷಗಳಿಂದ ಬಾಡಿಗೆಯನ್ನು ಸರಿಯಾಗಿ ವಸೂಲಿ ಮಾಡದೆ ಇಡಿ ದೇವಾಲಯವೇ ಕಳೆಗುಂದಿತ್ತು.
ಈ ಸಂದರ್ಭದಲ್ಲಿ ಕನ್ನಡಪ್ರಭ 'ಚಾಮರಾಜೇಶ್ವರನ ಕಾಪಾಡುವವರ್ಯಾರು?' ಎಂಬ ಶೀರ್ಷಿಕೆಯಡಿ ಸರಣಿ ಸುದ್ದಿ ಪ್ರಕಟಿಸುವ ಮೂಲಕ ದೇವಾಲಯದ ಆಡಳಿತ ಮಂಡಳಿ ಉದಾಸೀನವನ್ನು ಬಯಲಿಗೆಳೆದಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತನಿಖೆ ನಡೆಸಿತು. ಇದರ ಪರಿಣಾಮ 25 ಮಳಿಗೆಗಳಿಗೆ 8 ವರ್ಷಗಳ ಹಿಂದೆ ನಿಗದಿ ಮಾಡಿದ್ದ 37 ಸಾವಿರವಿದ್ದ ಚಾಮರಾಜೇಶ್ವರ ದೇವಸ್ಥಾನ ಮಳಿಗೆಗಳ ಆದಾಯ ಇದೀಗ ಪ್ರತಿ ತಿಂಗಳು 2. 34 ಲಕ್ಷವಾಗಿದೆ. ಅಷ್ಟೇ ಅಲ್ಲ, ಮಳಿಗೆಗಳ ಬಾಡಿಗೆದಾರರು 11 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಾವತಿ ಮಾಡಿದ್ದಾರೆ. ಇದರ ಮೊತ್ತ 25.74 ಲಕ್ಷ.
ದೇವಸ್ಥಾನದ ಮಳಿಗೆಗಳು ಅತಿ ಮುಖ್ಯ ಮತ್ತು ಜನಸಂದಣಿ ಪ್ರದೇಶದಲ್ಲಿದ್ದು, 1995ರ ನಂತರ ಬಾಡಿಗೆ ಹೆಚ್ಚಳ ಮಾಡಿರಲಿಲ್ಲ. ಅಲ್ಲದೆ, ನಿಯಾಮನುಸಾರ ಪ್ರತಿ ವರ್ಷ ಶೇ.5ರಷ್ಟು ಬಾಡಿಗೆ ಹೆಚ್ಚಳ ಮಾಡದೆ 8 ವರ್ಷಗಳ ಹಿಂದೆ ನಿಗದಿಯಾಗಿದ್ದ ಬಾಡಿಗೆಯನ್ನೇ ಪಡೆಯಲಾಗುತಿತ್ತು. ಅದನ್ನು ಬಾಡಿಗೆದಾರರು ಸರಿಯಾಗಿ ನೀಡದೆ ಬಾಕಿ ಉಳಿಸಿಕೊಂಡಿದ್ದರು.
ಬಂದಷ್ಟು ಬಾಡಿಗೆ ಮಾತ್ರ ವಸೂಲಿ ಮಾಡುವ ಮೂಲಕ ದೇವಾಲಯದ ಅಧಿಕಾರಿಗಳು ಲಕ್ಷಾಂತರ ರು. ನಷ್ಟ ಉಂಟು ಮಾಡಿ, ಚಾಮರಾಜೇಶ್ವರನಿಗೆ ಪೂಜೆಗೂ ಬರ ಬರುವಂಥ ಸ್ಥಿತಿ ನಿರ್ಮಾಣ ಮಾಡಿದ್ದರು.  
ಒಂದೇ ಮಳಿಗೆಗೆ 22,501: ಚಾಮರಾಜೇಶ್ವರ ದೇವಸ್ಥಾನದ 25 ಮಳಿಗೆಗಳಿಂದ ಪ್ರತಿ ತಿಂಗಳು 37 ಸಾವಿರು ಮಾತ್ರ ಬಾಡಿಗೆ ಬರುತಿತ್ತು. ಇದೀಗ ಹೊಸದಾಗಿ ಟೆಂಡರ್ ಕರೆದ ನಂತರ ಮಳಿಗೆಯೊಂದರಿಂದಲೇ 22,501 ಬಾಡಿಗೆ ಬರುತ್ತಿದೆ. 25 ಮಳಿಗೆಗಳ ಮುಂಗಡ ಹಣ 1.74 ಲಕ್ಷವಿತ್ತು. ಇದೀಗ ಮಳಿಗೆಯೊಂದರ ಮುಂಗಡ ಹಣವೇ 2.47 ಲಕ್ಷವಾಗಿದೆ. ಹಿಂದೆ ಕನಿಷ್ಠ 600 ಬಾಡಿಗೆ ಬರುತ್ತಿದ್ದ ಮಳಿಗೆಯಲ್ಲಿ ಈಗ 3500 ಬಾಡಿಗೆ ಬರುವಂತಾಗಿದೆ.
1400 ಬಾಡಿಗೆ ಬರುತ್ತಿದ್ದ ಮಳಿಗೆ 22,501ಗೆ ಹರಾಜಾಗಿದೆ. 600 ಬಾಡಿಗೆ ಬರುತ್ತಿದ್ದ ಖಾಲಿ ನಿವೇಶನವೊಂದು 5700ಗೆ ಹರಾಜಾಗಿದೆ. ಇದರ ಮೂಲಕ ಚಾಮರಾಜೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ರು. ಆದಾಯ ಬರುವಂತಾಗಿದೆ. ಇನ್ನೂ ಮುಂದೆಯಾದ್ರು ಚಾಮರಾಜೇಶ್ವರನಿಗೆ ನಿತ್ಯ ನೈವೇದ್ಯ ಸೇರಿದಂತೆ ಪೂಜೆ ಪುನಸ್ಕಾರ ಸರಿಯಾಗಿ ನಡೆದು ಗತವೈಭವ ಮರುಕಳಿಸಲಿ.


ಹಣದ ಕೊರತೆಯಿಂದ ದೇವಸ್ಥಾನದಲ್ಲಿ ಕೆಲ ಪೂಜಾ ಕಾರ್ಯಗಳು ನಿಂತು ಹೋಗಿದ್ದು, ದೇವಾಲಯದ ಮಳಿಗೆಗಳಿಂದ ಲಕ್ಷಾಂತರ ರು. ಬಾಡಿಗೆ ಬಾಕಿ ಇದ್ದರೂ ವಸೂಲಿ ಮಾಡಿರಲಿಲ್ಲ. ಅಲ್ಲದೆ 8 ವರ್ಷಗಳಿಂದ ಬಾಡಿಗೆ ಪರಿಷ್ಕರಣೆಯಾಗಿರಲಿಲ್ಲ. ಕನ್ನಡಪ್ರಭ ಈ ಬಗ್ಗೆ ಸರಣಿ ಸುದ್ದಿ ಪ್ರಕಟಿಸುವ ಮೂಲಕ ದೇವಾಲಯ ಆದಾಯ ಹೆಚ್ಚಳವಾಗುವಂತೆ ಮಾಡಿದೆ.
- ಮಹೇಶ್, ಸ್ಥಳೀಯ ನಿವಾಸಿ

ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement