ಮಮೋ-ನಮೋ ಮಾತ್ಸಮರ
ಸ್ವಾತಂತ್ರ್ಯೋತ್ಸವ ಅಂಗವಾಗಿ ಕೆಂಪುಕೋಟೆಯಲ್ಲಿ ಪ್ರಧಾನಿ ಸಿಂಗ್ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣ ಹಾಗೂ ಗುಜರಾತ್ ಸಿಎಂ ನರೇಂದ್ರ ಮೋದಿ ...
ಸ್ವಾತಂತ್ರ್ಯೋತ್ಸವ ಅಂಗವಾಗಿ ಕೆಂಪುಕೋಟೆಯಲ್ಲಿ ಪ್ರಧಾನಿ ಸಿಂಗ್ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣ ಹಾಗೂ ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ಭುಜ್ನಲ್ಲಿ ನೀಡಿದ ಪ್ರತ್ಯುತ್ತರ...
ಮಮೋ
- ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆಯಾಗಬೇಕಾದರೆ ಭಾರತ ವಿರೋಧಿ ಚಟುವಟಿಕೆಗಳಿಗೆ ಪಾಕಿಸ್ತಾನ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು.
- ಆಹಾರ ಭದ್ರತಾ ಮಸೂದೆ ಸಂಸತ್ತಿನ ಮುಂದಿದೆ. ಶೀಘ್ರದಲ್ಲೇ ಅಂಗೀಕಾರ ಸಿಗುತ್ತದೆ ಎಂಬ ನಿರೀಕ್ಷೆ ಇದೆ.
- ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಯೋಧರನ್ನು ಹತ್ಯೆ ಮಾಡುವಂಥ ಹೇಡಿ ಕೃತ್ಯಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಅಭಿವೃದ್ಧಿಯ ವಿಚಾರದಲ್ಲಿ ತುಂಬಾ ದೂರ ಕ್ರಮಿಸಿದ್ದೇವೆ. ಆದರೂ ಮಾಡಬೇಕಿರುವ ಕೆಲಸಗಳು ಇನ್ನಷ್ಟಿವೆ. ನಾವು ಆರಂಭಿಸಿದ ಬದಲಾವಣೆ ಪ್ರಕ್ರಿಯೆ ಮುಂದುವರಿಯುತ್ತದೆ.
- ವಿಶಾಲ ದೃಷ್ಟಿಕೋನ ಇಲ್ಲದ, ಪಂಥೀಯ ಸಿದ್ಧಾಂತಕ್ಕೆ ಆಧುನಿಕ, ಪ್ರಗತಿಪರ ಮತ್ತು ಜಾತ್ಯತೀತ ಭಾರತದಲ್ಲಿ ಜಾಗ ಇಲ್ಲ.
- ಭಾರತ ಮಾತ್ರವಲ್ಲ ವಿಶ್ವದ ಎಲ್ಲಾ ದೇಶಗಳು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ. ಈ ನಿಧಾನಗತಿ ಬೆಳವಣಿಗೆ ದೀರ್ಘಕಾಲ ಇರಲ್ಲ.
- ನೆಹರೂ- ರಾಷ್ಟ್ರನಿರ್ಮಾಣ, ಇಂದಿರಾ- ಹಸಿರು ಕ್ರಾಂತಿ, ರಾಜೀವ್ - ತಾಂತ್ರಿಕ ಮತ್ತು ಆರ್ಥಿಕ ಆಧುನೀಕರಣ, ನರಸಿಂಹರಾವ್- ಉದಾರೀಕರಣಕ್ಕಾಗಿ ಕೊಡುಗೆ ನೀಡಿದ್ದಾರೆ.
ನಮೋ
- ಪ್ರಧಾನಿ ಮನಮೋಹನ ಸಿಂಗ್ ಅವರು ಕನಿಷ್ಠ ನಮ್ಮ ದೇಶದ ಯೋಧರ ಆತ್ಮಸ್ಥೈರ್ಯ ಹೆಚ್ಚಿಸುವ ಕುರಿತಾದರೂ ಮಾತನಾಡಬಹುದಿತ್ತು.
- ಯೋಧರ ಹತ್ಯೆ ಕುರಿತು ರಾಷ್ಟ್ರಪತಿ ಮುಖರ್ಜಿ ತಮ್ಮ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಪ್ರಧಾನಿ ಸಿಂಗ್ ಇದೇ ರೀತಿಯ ಕಳವಳ ವ್ಯಕ್ತಪಡಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇದು ಸುಳ್ಳಾಗಿದೆ.
- ಯುಪಿಎಯ ಆಹಾರ ಭದ್ರತಾ ಮಸೂದೆ ಬಡವರಿಂದ ಆಹಾರ ಕಸಿದುಕೊಳ್ಳುತ್ತದೆ.
- ನಮಗ್ಯಾಕೆ ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಲು ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರ ಎಲ್ಲಿಂದ ಹುಟ್ಟಿಕೊಳ್ಳುತ್ತದೆ?
- ಮಾಧ್ಯಮಗಳು ಕೆಂಪು ಕೋಟೆಯಲ್ಲಿ ಇದು ಪ್ರಧಾನಿ ಸಿಂಗ್ ಅವರ ಕೊನೆಯ ಭಾಷಣ ಎನ್ನುತ್ತಿವೆ. ಆದರೆ, ಸಿಂಗ್ ಇನ್ನಷ್ಟು ಮೈಲಿ ಕ್ರಮಿಸುವುದು ಬಾಕಿ ಇದೆ ಎನ್ನುತ್ತಿದ್ದಾರೆ. ಯಾವ ರಾಕೆಟ್ ಮೂಲಕ ಅವರು ಕ್ರಮಿಸುತ್ತಾರೆ?
- ಪ್ರಧಾನಿ ತಮ್ಮ ಭಾಷಣದಲ್ಲಿ ಕೇವಲ ಒಂದು ಕುಟುಂಬ ನೆನೆದಿದ್ದಾರೆ. ವಲ್ಲಭಬಾಯ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ ಹೆಸರನ್ನು ಯಾಕೆ ನೆನಪಿಸಿಕೊಳ್ಳಲಿಲ್ಲ.
- ಹೇಗೆ ರುಪಾಯಿ ಮೌಲ್ಯವರ್ಧನೆ ಮಾಡುತ್ತೀರಿ ಮತ್ತು ಯಾವ ಆರ್ಥಿಕ ಕ್ರಮ ಕೈಗೊಳ್ಳುತ್ತೀರಿ ಎನ್ನುವುದನ್ನು ಹೇಳಬಹುದಿತ್ತು.