ಚಿನ್ನದ ದರ ಒಂದೇ ದಿನ 1310 ಏರಿಕೆ
ಒಂದು ಕಡೆ ಷೇರು ಮಾರುಕಟ್ಟೆ ಮಹಾ ಕುಸಿತ ಕಾಣುತ್ತಿದ್ದರೆ ಇನ್ನೊಂದು ಕಡೆ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ದರ ಒಂದೇ ದಿನ ಗರಿಷ್ಠ ಏರಿಕೆ ...
ನವದೆಹಲಿ: ಒಂದು ಕಡೆ ಷೇರು ಮಾರುಕಟ್ಟೆ ಮಹಾ ಕುಸಿತ ಕಾಣುತ್ತಿದ್ದರೆ ಇನ್ನೊಂದು ಕಡೆ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ದರ ಒಂದೇ ದಿನ ಗರಿಷ್ಠ ಏರಿಕೆ ದಾಖಲಿಸಿದೆ. ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ 10 ಗ್ರಾಂ ಚಿನ್ನದ ದರ 1,310ರಷ್ಟು ಏರಿಕೆಯಾಗಿದೆ. ಷೇರುಮಾರುಕಟ್ಟೆ ಮತ್ತು ರುಪಾಯಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಹೂಡಿಕೆದಾರರ ಒಲವು ಹಳದಿ ಲೋಹದತ್ತ ತಿರುಗಿದ್ದರಿಂದ ಈ ಬದಲಾವಣೆ ಕಂಡು ಬಂದಿದೆ. ಎರಡು ವರ್ಷದ ಹಿಂದೆ(ಆ.19, 2011) ಚಿನ್ನದ ದರ 1310ರಷ್ಟೇ ಏರಿಕೆ ಕಂಡಿದ್ದು ವಿಶೇಷ. ದರ ಏರಿಕೆಯಿಂದಾಗಿ ಕಳೆದ ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ 10 ಗ್ರಾಂ ಚಿನ್ನದ ದರ 31 ಸಾವಿರದ ಗಡಿ ದಾಟಿದೆ.