ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎಂಸಿಐ ಚುನಾವಣೆ: ವೈದ್ಯ ಕಾಲೇಜುಗಳಿಗೆ ಗೊತ್ತಿಲ್ಲ!

Rashmi Kasaragodu
Updated On : 18 Aug 2013, 1:23 am

ಕ.ಪ್ರ.ವಾರ್ತೆ   ಬಳ್ಳಾರಿ   ಆ. 17
2010ರಲ್ಲಿ ಕೆಲವು ಕಾರಣಗಳಿಂದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ)ವನ್ನು ಕೇಂದ್ರ ಸರ್ಕಾರ ಸೂಪರ್‌ಸೀಡ್ ಮಾಡಿತ್ತು. ಇದೀಗ ಹೊಸ ಸದಸ್ಯರ ಆಯ್ಕೆ ಪ್ರಕ್ರಿಯೆ ಆ.30ರಂದು ವೈದ್ಯಕೀಯ ವಿವಿ ಮಟ್ಟದಲ್ಲಿ ನಡೆಯುಲಿದೆ. ಆದರೆ, ವಿವಿ ಮಟ್ಟದಲ್ಲಿ ಎಂಸಿಐ ಸದಸ್ಯರ ಆಯ್ಕೆಗೆ ವಿವಿ ಸಿನೆಟ್ ಸದಸ್ಯರು ಮಾತ್ರ ಮತಚಲಾಯಿಸುವ ಹಕ್ಕು ಹೊಂದಿದ್ದಾರೆ ಎಂಬ ನೀತಿಗೆ ರಾಜ್ಯದ ಬಹುತೇಕ ವೈದ್ಯರ ಅಸಮಾಧಾನಗೊಂಡಿದ್ದಾರೆ.
ಇದೀಗ ಸುಪ್ರೀಂ ಕೋರ್ಟ್ ಎಂಸಿಐ ನ.15ರೊಳಗೆ ಪುನಾರಚನೆಯಾಗಬೇಕೆಂದು ಸೂಚಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ.
ವೈದ್ಯಕೀಯ ವಿವಿ ಮಟ್ಟದಲ್ಲಿ 10 ಕಾಲೇಜುಗಳಿಗೆ ಒಬ್ಬ ಸದಸ್ಯರಂತೆ ಸೀಟು ಹಂಚಲಾಗಿದೆ. ರಾಜೀವ್ ಗಾಂಧಿ ವೈದ್ಯಕೀಯ ವಿವಿ ವ್ಯಾಪ್ತಿಯ 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ರಾಜ್ಯದಲ್ಲಿರುವ ಕಾರಣ ಎಂಸಿಐಗೆ 4 ಸದಸ್ಯರ ಆಯ್ಕೆಗೆ ಅವಕಾಶವಿದೆ. ಆದರೆ ಚುನಾವಣೆಗೆ ಕೇವಲ ವಿವಿಯ ಮೆಡಿಕಲ್ ಫ್ಯಾಕಲ್ಟಿ ಮಾತ್ರ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಬೇಕು ಎಂಬ ನೀತಿ ಇತ್ತು. ಇದನ್ನು ಖಂಡಿಸಿ ಕೆಲವು ವೈದ್ಯರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಇದೀಗ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿರುವ ಮೆಡಿಕಲ್ ಫ್ಯಾಕಲ್ಟಿ ನಾಮಪತ್ರ ಸಲ್ಲಿಸಬಹುದು. ಆದರೆ ಸದಸ್ಯರ ಆಯ್ಕೆಗೆ ಮತದಾನ ಮಾಡುವ ಹಕ್ಕು ಕೇವಲ ವಿವಿ ಸಿನೆಟ್ ಸದಸ್ಯರಿಗೆ ಮಾತ್ರ ನೀಡಲಾಗಿದೆ.
ವೈದ್ಯರನ್ನು ಹೊರಗಿಟ್ಟು ಆಯ್ಕೆ: ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಎಂಬಿಬಿಎಸ್ ವೈದ್ಯರಿದ್ದು, ಶೇ.99ರಷ್ಟು ವೈದ್ಯರನ್ನು ಎಂಸಿಐನ ಆಯ್ಕೆ ಚುನಾವಣೆಯಲ್ಲಿ ಹೊರಗಿಟ್ಟು ಕೇವಲ ಶೇ.1ರಷ್ಟು ಅಂದರೆ ಸಿನೆಟ್‌ನಲ್ಲಿರುವ ವೈದ್ಯರನ್ನು ಮಾತ್ರ ಮತದಾರರೆಂದು ಪರಿಗಣಿಸಲಾಗುತ್ತಿದೆ. ನಾಲ್ವರು ಎಂಸಿಐ ಸದಸ್ಯರ ಆಯ್ಕೆಗೆ 43 ಸೆನೆಟ್ ಸದಸ್ಯರು ಮತದಾರರೆಂದು ನಿರ್ಧರಿಸುವುದು ಸರಿಯಾದ ಕ್ರಮವಲ್ಲ. ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ ವೈದ್ಯರನ್ನು ಮತದಾರರಾಗಿ ಪರಿಗಣಿಸಿದಾಗ ಮಾತ್ರ ಸದಸ್ಯತ್ವ ಆಯ್ಕೆಗೆ ಒಂದು ಗಟ್ಟಿತನ ಬರುತ್ತದೆ ಎಂಬ ವಾದ ವೈದ್ಯರದ್ದು. ಇನ್ನು ಸಿನೆಟ್ ಸದಸ್ಯರಲ್ಲಿ ಕೆಲವರು ಮೆಡಿಕಲ್ ಫ್ಯಾಕಲ್ಟಿ ಇರುವುದರಿಂದ ಇದೀಗ ಎಂಸಿಐ ಸದಸ್ಯತ್ವ ಆಯ್ಕೆಗೆ ಅವರೂ ನಾಮಪತ್ರ ಸಲ್ಲಿಸುವುದರಿಂದ ಸಿನೆಟ್ ಸದಸ್ಯರು ಸಿನೆಟ್‌ನಲ್ಲಿನ ಸದಸ್ಯರನ್ನೇ ಆಯ್ಕೆ ಮಾಡತ್ತಾರೆ. ಇಂಥ ಸಂದರ್ಭದಲ್ಲಿ ಇನ್ನುಳಿದ ವೈದ್ಯರಿದ್ದೂ, ಇಲ್ಲದಂತಾಗುತ್ತದೆ.
ಕಾಲೇಜುಗಳಿಗೆ ಮಾಹಿತಿ ಇಲ್ಲ: ಎಂಸಿಐಗೆ ಸದಸ್ಯರ ಆಯ್ಕೆ ಚುನಾವಣೆ ನಡೆಯುತ್ತಿದೆ ಎಂಬ ಮಾಹಿತಿ ಬಳ್ಳಾರಿಯ ವಿಮ್ಸ್ ಸೇರಿದಂತೆ ರಾಜೀವ್ ಗಾಂಧಿ ವಿವಿ ವ್ಯಾಪ್ತಿಯ ಯಾವ ಕಾಲೇಜುಗಳಿಗೂ ಗೊತ್ತಿಲ್ಲ. ಈ ಕುರಿತು ಬಳ್ಳಾರಿಯ ವಿಮ್ಸ್‌ಗೆ ಸಂಬಂಧಿಸಿದಂತೆ ಕೆಲವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ, ಯಾವ ಚುನಾವಣೆ ಬಗ್ಗೆಯೂ ನಮಗೆ ಗೊತ್ತಿಲ್ಲ ಎಂದು ಎಂಸಿಐ ಸದಸ್ಯ ಚುನಾವಣೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಒಂದು ವಿವಿ ವ್ಯಾಪ್ತಿಯಲ್ಲಿ ಮೆಡಿಕಲ್ ಫ್ಯಾಕಲ್ಟಿಗೆ ಸಂಬಂಧಿಸಿದ ಚುನಾವಣೆ ನಡೆಯುತ್ತಿದ್ದರೂ, ವೈದ್ಯಕೀಯ ಕಾಲೇಜುಗಳಿಗೆ ಮಾಹಿತಿ ಇಲ್ಲ ಎಂಬುದು ಆಶ್ಚರ್ಯವೇ ಸರಿ.


ಆ.30ಕ್ಕೆ ಚುನಾವಣೆ
ವಿವಿ ಮಟ್ಟದಲ್ಲಿ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆ.19ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದರೆ, ಆ.20ರಂದು ನಾಮಪತ್ರ ಪರಿಶೀಲನೆ, ಆ.21ರಂದು ನಾಮಪತ್ರ ಹಿಂಪಡೆಯಲು ಕಡೆ ದಿನವಾಗಿರುತ್ತದೆ. ಆ.30ರಂದು ಚುನಾವಣೆ ನಡೆಯಲಿದೆ.

ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement