ಚುನಾವಣಾಧಿಕಾರಿಗಳ ನೇಮಕ
ಕ.ಪ್ರ.ವಾರ್ತೆ ರಾಮನಗರ ಆ. 17
ಬೆಂಗಳೂರು ಗ್ರಾ. ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದು, ರಾಮನಗರ ಕ್ಷೇತ್ರಕ್ಕೆ ಉಪ ವಿಭಾಗಾಧಿಕಾರಿ ಡಾ.ಎಂ.ಎನ್. ರಾಜೇಂದ್ರ ಪ್ರಸಾದ್ ನೇಮಕವಾಗಿದ್ದಾರೆ.
ರಾಜೇಂದ್ರ ಪ್ರಸಾದ್ ಅವರ ಮೊ. 9449817984, ಕಚೇರಿ ದೂ. 080- 27271229 ಆಗಿದೆ. ಕುಣಿಗಲ್ ಕ್ಷೇತ್ರಕ್ಕೆ ತುಮಕೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಜಿ. ಅನುಪಮ್ ಸಹಾಯಕ ಚುನಾವಣಾಧಿಕಾರಿ ಆಗಿದ್ದು, ಅವರ ಮೊ. 9448342649 ಆಗಿದೆ.
ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಆಯುಷ್ ಇಲಾಖೆ ಅಧಿಕಾರಿ ಕೆ.ಜ್ಯೋತಿ ಸಹಾಯಕ ಚುನಾವಣಾಧಿಕಾರಿ. ಅವರ ಮೊ. 9900118421, ಕಚೇರಿ ದೂ. 080- 22874595. ಬೆಂಗಳೂರು ದಕ್ಷಿಣಕ್ಕೆ ನೇಮಕವಾಗಿರುವ ಉಪ ವಿಭಾಗಾಧಿಕಾರಿ ಎಲ್.ಸಿ. ರಾಜು ಅವರ ಮೊ. 9448089753. ಕಚೇರಿ ದೂ. 080-22210076.
ಆನೇಕಲ್ ಕ್ಷೇತ್ರಕ್ಕೆ ನಿಯೋಜಿತರಾಗಿರುವ ವಿಶೇಷ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಮೊ. 9480832135. ಕಚೇರಿ ದೂ. 080- 27859234. ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆಗಿರುವ ಡಿಯುಡಿಸಿ ಯೋಜನಾ ನಿರ್ದೇಶಕಿ ಎಂ.ಎಲ್. ವೈಶಾಲಿ ಅವರ ಮೊ. 9449759069 ಮತ್ತು ಕಚೇರಿ ದೂ. 080-27745233.
ಕನಕಪುರ ಕ್ಷೇತ್ರಕ್ಕೆ ನೇಮಕಗೊಂಡಿರುವ ಜಿಪಂ ಸಿಇಒ ಡಾ. ಎಂ.ವಿ. ವೆಂಕಟೇಶ್ ಅವರ ಮೊ. 9880640449. ಚನ್ನಪಟ್ಟಣದ ಸಹಾಯಕ ಚುನಾವಣಾಧಿಕಾರಿ ಆಗಿರುವ ವಿಶೇಷ ಭೂ ಸ್ವಾಧೀನಾಧಿಕಾರಿ ಪಿ.ಜಯಮಾಧವ ಅವರ ಮೊ. 9448888282, ಕಚೇರಿ ದೂ. 080-2772946.